ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆ!

ಚಿತ್ರದುರ್ಗ: ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಹೊಸದುರ್ಗ ತಾಲೂಕಿನ ನರಸೀಪುರ ಗ್ರಾಮದ ಬಳಿ ನಡೆದಿದೆ. ಹಿರೇಹಳ್ಳಕ್ಕೆ ತೆರಳಿದ್ದ ಬಾಲಕರು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ದೇವಪುರ ಗ್ರಾಮದ13 ವರ್ಷದ ಜಯಂತ್, 12 ವರ್ಷದ ಪ್ರಜ್ವಲ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಬ್ಬರು ಬಾಲಕರ ಮೃತದೇಹ ಪತ್ತೆ: ಶೋಧ ಕಾರ್ಯದ ನಂತರ ನರಸೀಪುರ ಬಳಿಯ […]

ಮೀನು ಹಿಡಿಯಲು ಹೋದ ಇಬ್ಬರು ಬಾಲಕರು ನಾಪತ್ತೆ!

Updated on: Sep 11, 2020 | 9:06 AM

ಚಿತ್ರದುರ್ಗ: ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಹೊಸದುರ್ಗ ತಾಲೂಕಿನ ನರಸೀಪುರ ಗ್ರಾಮದ ಬಳಿ ನಡೆದಿದೆ. ಹಿರೇಹಳ್ಳಕ್ಕೆ ತೆರಳಿದ್ದ ಬಾಲಕರು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ.

ದೇವಪುರ ಗ್ರಾಮದ13 ವರ್ಷದ ಜಯಂತ್, 12 ವರ್ಷದ ಪ್ರಜ್ವಲ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಬ್ಬರು ಬಾಲಕರ ಮೃತದೇಹ ಪತ್ತೆ:
ಶೋಧ ಕಾರ್ಯದ ನಂತರ ನರಸೀಪುರ ಬಳಿಯ ಹಿರೇಹಳ್ಳದಲ್ಲಿ ಬಾಲಕರ ಮೃತದೇಹ ಪತ್ತೆಯಾಗಿದೆ. ಬಾಲಕರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Published On - 7:34 am, Fri, 11 September 20