ಜಗಳೂರು ಬಳಿ ಎರಡು ಬೈಕ್ ಮುಖಾಮುಖಿ, ಇಬ್ಬರು ಸವಾರರ ಸಾವು
ದಾವಣಗೆರೆ: ಎರಡು ಬೈಕ್ ಮಧ್ಯೆ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಜಗಳೂರು ಪಟ್ಟಣದ ಚಿಕ್ಕಮ್ಮನಹಟ್ಟಿ ಕ್ರಾಸ್ ಬಳಿ ನಡೆದಿದೆ. ಕರಿಬಸಪ್ಪ(35), ಹನುಮಂತಪ್ಪ(40) ಮೃತ ದುರ್ದೈವಿಗಳು. ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಎರಡೂ ಬೈಕ್ಗಳ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಮಲೆಮಾಚಿಕೆರೆ ಗ್ರಾಮದ ನಿವಾಸಿ ಕರಿಬಸಪ್ಪ(35) ಮತ್ತು ಕ್ಯಾಸನಹಳ್ಳಿಯ ನಿವಾಸಿ ಹನುಮಂತಪ್ಪ(40) ಘಟನೆಗೆ ಬಲಿಯಾಗಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ: ಎರಡು ಬೈಕ್ ಮಧ್ಯೆ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಜಗಳೂರು ಪಟ್ಟಣದ ಚಿಕ್ಕಮ್ಮನಹಟ್ಟಿ ಕ್ರಾಸ್ ಬಳಿ ನಡೆದಿದೆ. ಕರಿಬಸಪ್ಪ(35), ಹನುಮಂತಪ್ಪ(40) ಮೃತ ದುರ್ದೈವಿಗಳು.
ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಎರಡೂ ಬೈಕ್ಗಳ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಮಲೆಮಾಚಿಕೆರೆ ಗ್ರಾಮದ ನಿವಾಸಿ ಕರಿಬಸಪ್ಪ(35) ಮತ್ತು ಕ್ಯಾಸನಹಳ್ಳಿಯ ನಿವಾಸಿ ಹನುಮಂತಪ್ಪ(40) ಘಟನೆಗೆ ಬಲಿಯಾಗಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:45 am, Wed, 5 August 20