ಸಾವಿನ ಬಳಿಕ ಕೊರೊನಾ ದೃಢ, ಉಡುಪಿಯಲ್ಲಿ‌ ಮೊದಲ ಬಲಿ

|

Updated on: May 16, 2020 | 6:33 PM

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ 54 ವರ್ಷದ ವ್ಯಕ್ತಿ ಹೃದಯಾಘಾತಕ್ಕೀಡಾಗಿ, ಮೃತಪಟ್ಟಿದ್ದಾರೆ. ಸಾವಿನ ಬಳಿಕ ಕೊರೋನಾ ಸೋಂಕಿನ ಶಂಕೆಯಿಂದ ಅವರ ಗಂಟಲಿನ ದ್ರವ ಮಾದರಿ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವ್ ಎಂಬುದು ಧೃಡಪಟ್ಟಿದೆ. ಇದರೊಂದಿಗೆ ಉಡುಪಿಯಲ್ಲಿ‌ ಕೊರೋನಾ ಸೋಂಕಿಗೆ ಮೊದಲ ಬಲಿಯಾದಂತಾಗಿದೆ. ಕುಂದಾಪುರ ತಾಲೂಕಿನ 54 ವರ್ಷದ ಈ ವ್ಯಕ್ತಿ ಮುಂಬೈನಿಂದ ಬಂದಿದ್ದರು. ಮೇ 13 ರ ಸಂಜೆ ಅವರಿಗೆ ಹೃದಯಾಘಾತವಾಗಿತ್ತು. ಆರಂಭದಲ್ಲಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನೋವು ಉಲ್ಬಣಗೊಂಡು, ನಂತರ ಮಣಿಪಾಲ ಕೆಎಂಸಿ […]

ಸಾವಿನ ಬಳಿಕ ಕೊರೊನಾ ದೃಢ, ಉಡುಪಿಯಲ್ಲಿ‌ ಮೊದಲ ಬಲಿ
Follow us on

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ 54 ವರ್ಷದ ವ್ಯಕ್ತಿ ಹೃದಯಾಘಾತಕ್ಕೀಡಾಗಿ, ಮೃತಪಟ್ಟಿದ್ದಾರೆ. ಸಾವಿನ ಬಳಿಕ ಕೊರೋನಾ ಸೋಂಕಿನ ಶಂಕೆಯಿಂದ ಅವರ ಗಂಟಲಿನ ದ್ರವ ಮಾದರಿ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವ್ ಎಂಬುದು ಧೃಡಪಟ್ಟಿದೆ.

ಇದರೊಂದಿಗೆ ಉಡುಪಿಯಲ್ಲಿ‌ ಕೊರೋನಾ ಸೋಂಕಿಗೆ ಮೊದಲ ಬಲಿಯಾದಂತಾಗಿದೆ. ಕುಂದಾಪುರ ತಾಲೂಕಿನ 54 ವರ್ಷದ ಈ ವ್ಯಕ್ತಿ ಮುಂಬೈನಿಂದ ಬಂದಿದ್ದರು. ಮೇ 13 ರ ಸಂಜೆ ಅವರಿಗೆ ಹೃದಯಾಘಾತವಾಗಿತ್ತು. ಆರಂಭದಲ್ಲಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನೋವು ಉಲ್ಬಣಗೊಂಡು, ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ 13ರ ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಮೇ 14ರ ಬೆಳಿಗ್ಗೆ ನಿಧನರಾಗಿದ್ದರು.

ಕೆಎಂಸಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್
ಮಹಾರಾಷ್ಟ್ರದಿಂದ ಬಂದ ಕಾರಣ ಕೊರೋನಾ ಸೋಂಕಿನ ಶಂಕೆಯಿಂದ ಮೃತ ವ್ಯಕ್ತಿಯ ಗಂಟಲಿನ ದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಧೃಡವಾಗಿದೆ. ಇದೀಗ, ಚಿಕಿತ್ಸೆ ನೀಡಿದ ಕೆಎಂಸಿ ಆಸ್ಪತ್ರೆಯ ಕೆಲ ವೈದ್ಯರು, ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ ಎಂದು ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

ಆರೋಗ್ಯ ಇಲಾಖೆ ಇನ್ನೂ  ಖಚಿತ ಪಡಿಸಬೇಕಿದೆ
ಆದರೆ, ಈ ಸಾವು ಕೊರೊನಾ ಸೋಂಕಿನಿಂದ ಸಂಭವಿಸಿದೆಯೇ ಎಂಬುದು ಜಿಲ್ಲಾ ಆರೋಗ್ಯ ಇಲಾಖೆಯಿಂದ ಇನ್ನಷ್ಟೇ ಖಚಿತ ಪಡಬೇಕಾಗಿದೆ.

Published On - 6:26 pm, Sat, 16 May 20