Nirmala Sitharaman Economic package ಭಾರತದಲ್ಲಿಯೇ ರಕ್ಷಣಾ ಸಾಮಗ್ರಿ ಉತ್ಪಾದನೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್​ನ ಪೈಕಿ ಈವರೆಗೆ 18 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಬಾಕಿ ಇರುವ ಸುಮಾರು ₹2 ಲಕ್ಷ ಕೋಟಿ ಪ್ಯಾಕೇಜ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೆಕ್ಕ ನೀಡಿದ್ದಾರೆ. 8 ಕ್ಷೇತ್ರಗಳು ಆದ್ಯತಾ ವಲಯಗಳು: ಕೇಂದ್ರ ಸರ್ಕಾರದ ಬಳಿ 5 ಲಕ್ಷ ಹೆಕ್ಟೇರ್​ ಕೈಗಾರಿಕಾ ಭೂಮಿ ಲಭ್ಯವಿದೆ. 3,376 ಎಸ್​ಇಝಡ್​ಗಳಲ್ಲಿ 5 ಲಕ್ಷ ಹೆಕ್ಟೇರ್​ ಭೂಮಿ […]

Nirmala Sitharaman Economic package ಭಾರತದಲ್ಲಿಯೇ ರಕ್ಷಣಾ ಸಾಮಗ್ರಿ ಉತ್ಪಾದನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us
ಸಾಧು ಶ್ರೀನಾಥ್​
|

Updated on:May 16, 2020 | 5:53 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್​ನ ಪೈಕಿ ಈವರೆಗೆ 18 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಬಾಕಿ ಇರುವ ಸುಮಾರು ₹2 ಲಕ್ಷ ಕೋಟಿ ಪ್ಯಾಕೇಜ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೆಕ್ಕ ನೀಡಿದ್ದಾರೆ.

8 ಕ್ಷೇತ್ರಗಳು ಆದ್ಯತಾ ವಲಯಗಳು: ಕೇಂದ್ರ ಸರ್ಕಾರದ ಬಳಿ 5 ಲಕ್ಷ ಹೆಕ್ಟೇರ್​ ಕೈಗಾರಿಕಾ ಭೂಮಿ ಲಭ್ಯವಿದೆ. 3,376 ಎಸ್​ಇಝಡ್​ಗಳಲ್ಲಿ 5 ಲಕ್ಷ ಹೆಕ್ಟೇರ್​ ಭೂಮಿ ಲಭ್ಯವಿದೆ. ಕಲ್ಲಿದ್ದಲು, ಗಣಿ, ವಿಮಾನಯಾನ, ರಕ್ಷಣಾ ವಲಯ, ಬಾಹ್ಯಾಕಾಶ, ವಿದ್ಯುತ್​, ಇಂಧನ, ಅಣುಶಕ್ತಿ ವಲಯಗಳಲ್ಲಿ ವಿದೇಶಿ ಹೂಡಿಕೆ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದು.

ಕಲ್ಲಿದ್ದಲು ವಲಯ ಖಾಸಗೀಕರಣ: ಕಲ್ಲಿದ್ದಲು ಆಮದು ಕಡಿಮೆ ಮಾಡಿ ಹೆಚ್ಚು ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು. ಕಲ್ಲಿದ್ದಲು ಗಣಿ ಯಾರು ಬೇಕಾದರೂ ಖರೀದಿಸಬಹುದು. ಮುಕ್ತ ಮಾರುಕಟ್ಟೆಯಲ್ಲಿ ಪೂರೈಸಲು ಅವಕಾಶ ಕಲ್ಪಿಸಲಾಗುತ್ತೆ. ಈ ಮೂಲಕ ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಿದ ಕೇಂದ್ರ ಸರ್ಕಾರ. ಕಲ್ಲಿದ್ದಲು ವಲಯಕ್ಕೆ 50 ಸಾವಿರ ಕೋಟಿ ರೂಪಾಯಿ ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧಾರ.

ಗಣಿ ಹಂಚಿಕೆಗೆ ಷರತ್ತು, ಅರ್ಹತೆ ಇಲ್ಲ: 50 ಕಲ್ಲಿದ್ದಲು ಗಣಿಗಳನ್ನು ತಕ್ಷಣ ಬಿಡ್ಡಿಂಗ್ ಮೂಲಕ ಮಾರಾಟ ಮಾಡಲಾಗುತ್ತೆ. ಯಾರು ಮುಂಗಡ ಹಣ ನೀಡುತ್ತಾರೋ ಅವರಿಗೆ ಕಲ್ಲಿದ್ದಲು ಗಣಿ. ಗಣಿ ಹಂಚಿಕೆ ಮಾಡಲು ಯಾವುದೇ ರೀತಿಯ ಷರತ್ತು, ಅರ್ಹತೆ ಇಲ್ಲ. ಅಲ್ಯೂಮಿನಿಯಂ ವಲಯದ ಸ್ಪರ್ಧಾತ್ಮಕತೆ ಹೆಚ್ಚಿಸಲು ಹೊಸ ನೀತಿ ತರಲಾಗುತ್ತೆ. ಕಲ್ಲಿದ್ದಲು, ಬಾಕ್ಸೈಟ್​ ಗಣಿಗಳಗ ಜಂಟಿ ಹರಾಜಿಗೆ ಕೇಂದ್ರದ ಕ್ರಮ. 500 ಖನಿಜ ಗಣಿಗಳನ್ನು ಮುಕ್ತ ಮತ್ತು ಪಾರದರ್ಶಕ ಹರಾಜಿಗೆ ಕ್ರಮ ಕೈಗೊಳ್ಳಲಾಗುತ್ತೆ.

ಭಾರತದಲ್ಲಿಯೇ ರಕ್ಷಣಾ ಸಾಮಗ್ರಿ ಉತ್ಪಾದನೆ: ರಕ್ಷಣಾ ವಲಯದ ಉತ್ಪನ್ನ ಆಮದು ಕಡಿಮೆ ಮಾಡಲಾಗುತ್ತೆ. ಮೇಕ್​ ಇನ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ. ಮಂಡಳಿಯ ಮೂಲಕ ಶಸ್ತ್ರಾಸ್ತ್ರ ಪೂರೈಕೆ ಹೆಚ್ಚಿಸಲಾಗುವುದು. ಭಾರತದಲ್ಲಿಯೇ ರಕ್ಷಣಾ ಸಾಮಗ್ರಿ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುತ್ತೆ. ರಕ್ಷಣಾ ಸಾಮಗ್ರಿ ಖರೀದಿಗೆ ಬಜೆಟ್​ನಲ್ಲಿ ಅವಕಾಶ ಕಲ್ಪಿಸಲಾಗುತ್ತೆ. ಶಸ್ತ್ರಾಸ್ತ್ರ ಕೈಗಾರಿಕೆ ಮಂಡಳಿಯಲ್ಲಿ ಸ್ವಾಯತ್ತತೆ, ಹೊಣೆಗಾರಿಕೆ, ದಕ್ಷತೆಗೆ ಒತ್ತು ನೀಡಲಾಗುವುದು.

ರಕ್ಷಣಾ ವಲಯದ ಕೈಗಾರಿಕೆ ಕಾರ್ಪೊರೇಟೈಸ್ ಮಾಡ್ತೇವೆ. ಕಾರ್ಪೊರೇಟೈಸೇಷನ್ ಎಂದರೆ ಖಾಸಗೀಕರಣವಲ್ಲ. ರಕ್ಷಣಾ ವಲಯದ ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಲು ಕ್ರಮ ಕೈಗೊಳ್ಳಲಾಗುತ್ತೆ. ರಕ್ಷಣಾ ವಲಯದಲ್ಲಿ ವಿದೇಶ ನೇರ ಬಂಡವಾಳ (FDI) ಶೇ.49 ರಿಂದ ಶೇ.74ಕ್ಕೆ ಹೆಚ್ಚಳ ಮಾಡಲಾಗುತ್ತೆ.

ವಿಮಾನ ನಿಲ್ದಾಣಗಳಲ್ಲಿ ಮತ್ತಷ್ಟು ಸುಧಾರಣೆ: ವಾಯುನೆಲೆ ದಕ್ಷವಾಗಿ ನಿರ್ವಹಿಸಿ ವೆಚ್ಚ ಕಡಿಮೆ ಮಾಡ್ತೇವೆ. 1000 ಕೋಟಿ ರೂಪಾಯಿ ವೆಚ್ಚ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ವಾಯುನೆಲೆಯಲ್ಲಿ ನಾಗರಿಕರ ಹಾರಾಟಕ್ಕೆ ಅವಕಾಶವಿದೆ. ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಇರುತ್ತೆ. ಇದರಿಂದ 13 ಸಾವಿರ ಕೋಟಿ ರೂಪಾಯಿ ನಿರೀಕ್ಷೆ ಇದೆ. ಏರ್​ಕ್ರಾಫ್ಟ್​ಗಳ ಖರೀದಿಗೆ ಭಾರತ ಜಾಗತಿಕ ಹಬ್ ಆಗಲಿದೆ.

ವಿಮಾನ ನಿಲ್ದಾಣಗಳ ನಿರ್ವಹಣಾ ವೆಚ್ಚ ಕಡಿಮೆ ಆಗಲಿದೆ. ಸದ್ಯ ಖಾಸಗಿ ಸಹಭಾಗಿತ್ವದಲ್ಲಿ 3 ವಿಮಾನ ನಿಲ್ದಾಣಗಳ ನಿರ್ವಹಣೆ. 2ನೇ ಹಂತದಲ್ಲಿ 6 ವಿಮಾನ ನಿಲ್ದಾಣಗಳಲ್ಲಿ ಖಾಸಗಿ ಸಹಭಾಗಿತ್ವ ಇರುತ್ತೆ. ಮೂರನೇ ಹಂತದಲ್ಲಿ 6 ವಿಮಾನ ನಿಲ್ದಾಣಗಳ ಬಿಡ್ಡಿಂಗ್.

ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ: ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣಗೊಳಿಸಲಾಗುತ್ತೆ. ಡಿಸ್ಕಾಂಗಳ ಅಸಮರ್ಥತೆಯಿಂದ ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ. ಡಿಸ್ಕಾಂಗಳಿಂದ ತೊಂದರೆಯಾದರೆ ಕಂಪನಿಗಳಿಗೆ ದಂಡ ವಿಧಿಸಲಾಗುವುದು. ಡಿಸ್ಕಾಂಗಳು ನಿಗದಿತ ವಿದ್ಯುತ್​ ಪೂರೈಸದಿದ್ರೆ, ಲೋಡ್ ಶೆಡ್ಡಿಂಗ್ ಮಾಡಿದ್ರೆ ದಂಡ ಹಾಕಲಾಗುತ್ತೆ.

Published On - 4:04 pm, Sat, 16 May 20

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ