ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು

ಉತ್ತರ ಕನ್ನಡ: ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾರವಾರ ನಗರದ ಸಬ್ ಜೈಲಿನಲ್ಲಿ ಬೆಳಕಿಗೆ ಬಂದಿದೆ. ಸಿಂಧೂರ ಲಕ್ಷ್ಮಣ (35) ಜೈಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವಿಚಾರಣಾಧೀನ ಕೈದಿ. ಲಕ್ಷ್ಮಣ ಕೊಲೆ ಕೇಸ್ ಒಂದರಲ್ಲಿ 2 ವರ್ಷದ ಹಿಂದೆ ಜೈಲು ಸೇರಿದ್ದ. ಇದೀಗ, ಆತನನ್ನು ಜೈಲು ಸಿಬ್ಬಂದಿಯೇ ಹೊಡೆದು ಸಾಯಿಸಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಕೈದಿಯ ಮೃತದೇಹವನ್ನು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಆಸ್ಪತ್ರೆ ಎದುರು ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.

ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು

Updated on: Nov 08, 2020 | 7:27 PM

ಉತ್ತರ ಕನ್ನಡ: ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಾರವಾರ ನಗರದ ಸಬ್ ಜೈಲಿನಲ್ಲಿ ಬೆಳಕಿಗೆ ಬಂದಿದೆ. ಸಿಂಧೂರ ಲಕ್ಷ್ಮಣ (35) ಜೈಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವಿಚಾರಣಾಧೀನ ಕೈದಿ.

ಲಕ್ಷ್ಮಣ ಕೊಲೆ ಕೇಸ್ ಒಂದರಲ್ಲಿ 2 ವರ್ಷದ ಹಿಂದೆ ಜೈಲು ಸೇರಿದ್ದ. ಇದೀಗ, ಆತನನ್ನು ಜೈಲು ಸಿಬ್ಬಂದಿಯೇ ಹೊಡೆದು ಸಾಯಿಸಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಕೈದಿಯ ಮೃತದೇಹವನ್ನು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಆಸ್ಪತ್ರೆ ಎದುರು ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.

Published On - 7:26 pm, Sun, 8 November 20