ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು: ಇದು ಮಹಿಳಾ ದಿನಾಚರಣೆ ಗಿಫ್ಟ್!

  • TV9 Web Team
  • Published On - 14:34 PM, 8 Mar 2020
ನಿರ್ಭಯಾ ಹತ್ಯಾಚಾರಿಗಳಿಗೆ ಕೊನೆಗೂ ಗಲ್ಲು: ಇದು ಮಹಿಳಾ ದಿನಾಚರಣೆ ಗಿಫ್ಟ್!

ಮೈಸೂರು: ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಆಗುತ್ತೋ ಬಿಡುತ್ತೋ.. ಮುಂದಿನ ಮಾರ್ಚ್ 20ಕ್ಕೆ ತೀರ್ಮಾನ ಆಗುತ್ತದೆ. ಆದ್ರೆ ಅದಕ್ಕೂ ಮುನ್ನ ಕರುನಾಡಿನ ಮೈಸೂರಿನಲ್ಲಿ ನಾಲಕ್ಕೂ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅದೂ ಮಹಿಳಾ ದಿನಾಚರಣೆ ಸಂದರ್ಭದಲ್ಲಿಯೇ ಇದು ನಡೆದಿರುವುದು ವಿಷೇಶ.

ಆದ್ರೆ ಇದು ಜಸ್ಟ್ ಅಣಕು ಅಷ್ಟೇ. ಪಾತಕಿಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತೆ ಅದರಲ್ಲಿನ ಒಂದೊಂದೇ ಲೂಪ್​ಹೋಲ್ ಬಳಸಿಕೊಂಡು ಕುಣಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತ ಹೆಂಗೆಳೆಯರು ತಾವೇ ಮುಂದಾಗಿ ಪಾತಕಿಗಳ ಭಾವ ಚಿತ್ರಕ್ಕೆ ನೇಣು ಹಾಕಿ ಸಂಭ್ರಮಿಸಿದ್ದಾರೆ. RIP ನಿರ್ಭಯಾ ಎಂದು ಶಾಂತವಾಗಿ ಕೂಗಿದ್ದಾರೆ.

ಮೈಸೂರು ಕನ್ನಡ ವೇದಿಕೆಯಿಂದ ಈ ರೀತಿಯ ವಿಭಿನ್ನ ಆಚರಣೆಯನ್ನು ಮಹಿಳಾ ದಿನಾಚರಣೆಯಂದು ಮಾಡಲಾಗಿದೆ. ಮೈಸೂರಿನ ಗನ್ ಹೌಸ್ ಬಳಿ ನಾಲಕ್ಕೂ ಅಪರಾಧಿಗಳಿಗೂ ಗಲ್ಲಿಗೆ ಹಾಕಿ ಆಚರಣೆ ಮಾಡಿದ್ದಾರೆ. ಹಾಗೂ ಆದಷ್ಟು ಬೇಗ ಅಪರಾಧಿಗಳಿಗೆ ಶಿಕ್ಷೆ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.