Valentine’s Day ಉಡುಗೊರೆ ತೆಗೆದುಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ..!

ಜನರಿಗೆ ಮೋಸ ಮಾಡುವ ಉದ್ದೇಶದಿಂದ ಆನ್​ಲೈನ್​ನಲ್ಲಿ ಸಾಕಷ್ಟು ನಕಲಿ ತಾಣಗಳು ಹುಟ್ಟಿವೆ. ಜನರಿಗೆ ಮೋಸ ಮಾಡುವುದೇ ಇವರ ಧ್ಯೇಯ. ಇದಕ್ಕಾಗಿ, ಮೆಸೇಜಿಂಗ್​ ಆ್ಯಪ್​, ಆನ್​ಲೈನ್​ ಶಾಪಿಂಗ್​ ತಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

Valentine's Day ಉಡುಗೊರೆ ತೆಗೆದುಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ..!
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on:Feb 15, 2021 | 2:13 PM

ವ್ಯಾಲಂಟೈನ್ಸ್​ ಡೇ ಹತ್ತಿರ ಬರುತ್ತಿದೆ. ರೋಸ್​ ಡೆ, ಪ್ರಪೋಸ್​ ಡೆ, ಚಾಕೋಲೇಟ್​ ಡೇ, ಟೆಡ್ಡಿ ಡೇ, ಪ್ರಾಮಿಸ್​ ಡೇ, ಹಗ್​ ಡೇ, ಕಿಸ್​ ಡೇ ನಂತರ ಫೆಬ್ರವರಿ 14ರಂದು ವ್ಯಾಲಂಟೈನ್ಸ್​ ಡೇ ಆಚರಣೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಹುಡುಗ ಹುಡುಗಿಗೆ ಹಾಗೂ ಹುಡುಗಿ ಹುಡಗನಿಗೆ ಗಿಫ್ಟ್​ ನೀಡೋ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ. ಇದಕ್ಕಾಗಿ ಸಾಕಷ್ಟು ಜನರು ಆನ್​ಲೈನ್​ ಮೊರೆ ಹೋಗುತ್ತಾರೆ. ಆನ್​ಲೈನ್​ ಶಾಪಿಂಗ್​ ಮಾಡುವ ಭರದಲ್ಲಿ ಮೋಸ ಹೋಗದೇ ಎಚ್ಚರಿಕೆಯಿಂದ ವರ್ತಿಸಿ. ಇಲ್ಲದಿದ್ದರೆ, ನಿಮ್ಮ ಮಾಹಿತಿ ಸೋರಿಕೆ ಆಗಬಹುದು.

ಹೌದು, ಜನರಿಗೆ ಮೋಸ ಮಾಡುವ ಉದ್ದೇಶದಿಂದ ಆನ್​ಲೈನ್​ನಲ್ಲಿ ಸಾಕಷ್ಟು ನಕಲಿ ತಾಣಗಳು ಹುಟ್ಟಿವೆ. ಜನರಿಗೆ ಮೋಸ ಮಾಡುವುದೇ ಇವರ ಧ್ಯೇಯ. ಇದಕ್ಕಾಗಿ, ಮೆಸೇಜಿಂಗ್​ ಆ್ಯಪ್​, ಆನ್​ಲೈನ್​ ಶಾಪಿಂಗ್​ ತಾಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸುಳ್ಳು ಆಫರ್​ಗಳು ಹಾಗೂ ಡಿಸ್ಕೌಂಟ್​ಗಳನ್ನು ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ.

ಜ್ಯುವೆಲರಿ ವೆಬ್​ಸೈಟ್​ಗಳು ಜ್ಯುವೆಲರಿಯನ್ನು ನೀವು ಆನ್​ಲೈನ್​ನಲ್ಲಿ ಖರೀದಿಸಬಹುದು. ನಾನಾ ವಿಧದ ಆಭರಣಗಳು ಆನ್​ಲೈನ್​ನಲ್ಲಿ ಲಭ್ಯವಿದೆ. ಆದರೆ, ಇವುಗಳಿಗೆ ಕಾಲಿಡುವ ಮುನ್ನ ಸ್ವಲ್ಪ ಯೋಚಿಸಿ. ಏಕೆಂದರೆ, ಈ ರೀತಿಯ ಸಾಕಷ್ಟು ನಕಲಿ ಸೈಟ್​ಗಳು ಹುಟ್ಟಿಕೊಂಡಿವೆ. ನಿಮ್ಮ ಖಾಸಗಿ ಮಾಹಿತಿ ಕದಿಯುವುದೇ ಇವರ ಮುಖ್ಯ ಉದ್ದೇಶ…

ಬೆಲೆ ಡಾಲರ್​ನಲ್ಲಿರುತ್ತದೆ.. ಈ ರೀತಿಯ ನಕಲಿ ಆನ್​ಲೈನ್​ ಶಾಪ್​ಗಳು ಅಮೆರಿಕದ ಡಾಲರ್​ನಲ್ಲಿ ವಸ್ತುಗಳ ಬೆಲೆಯನ್ನು ಹಾಕಿರುತ್ತಾರೆ. ಅಷ್ಟೇ ಅಲ್ಲ, ಅಮೆರಿಕದ ಯಾವುದಾದರೂ ಒಂದು ಸ್ಥಳದ ಹೆಸರನ್ನು ವಿಳಾಸದ ರೂಪದಲ್ಲಿ ಹಾಕಿರುತ್ತಾರೆ. ನೀವು ಖರೀದಿಸಹೋದರೆ, ಭಾರತಕ್ಕೂ ಡೆಲಿವರಿ ಮಾಡುತ್ತೇವೆ ಎಂದಿರುತ್ತದೆ. ಇದು ಸಂಪೂರ್ಣವಾಗಿ ಫೇಕ್​ ಎನ್ನುತ್ತಾರೆ ಆನ್​ಲೈನ್​ ಮಾರುಕಟ್ಟೆ ತಜ್ಞರು.

ವಾಟ್ಸ್​ಆ್ಯಪ್​ನಲ್ಲಿ ನಕಲಿ ಗ್ರೂಪ್​ ಟಾಟಾ ಗ್ರೂಪ್​ ಸೇರಿ ಸಾಕಷ್ಟು ಸಂಸ್ಥೆಗಳು ವ್ಯಾಲಂಟೈನ್ಸ್​ ಡೇಗೆ ಗಿಫ್ಟ್​ ನೀಡುತ್ತಿವೆ ಎನ್ನುವ ಮೆಸೇಜ್​ ಹರಿದಾಡುತ್ತಿದೆ. ಈ ರೀತಿ ಸಂದೇಶಗಳನ್ನು ಕ್ಲಿಕ್​ ಮಾಡಿದಾಗ ನಿಮ್ಮ ಮಾಹಿತಿ ಸೋರಿಕೆ ಆಗಬಹುದು. ಹೀಗಾಗಿ, ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ: ಯಾವತ್ತೂ ದೂರವಾಗದ ಹಾಗೆ ನನ್ನ ಒಪ್ಪಿ ಅಪ್ಪಿಬಿಡು ಗೆಳತಿ

Published On - 2:44 pm, Sun, 14 February 21

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್