ಏರ್​ಶೋನಲ್ಲಿ ಕಣ್ಮರೆಯಾದ ಕನ್ನಡ.. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದ ವಾಟಾಳ್

Vatal Nagaraj on Aero India 2021.. ಏರೋ ಇಂಡಿಯಾ 2021 ಏರ್​ಶೋನಲ್ಲಿ ಕನ್ನಡ ಕಣ್ಮರೆ ಹಿನ್ನೆಲೆಯಲ್ಲಿ ವಾಟಾಳ್​ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ವಾಟಾಳ್​​​ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ವೈಮಾನಿಕ ಪ್ರದರ್ಶನ ಬೇಡವೇ ಬೇಡ ಎಂದು ಸಿಡಿದೆದ್ದಿದ್ದಾರೆ.

ಏರ್​ಶೋನಲ್ಲಿ ಕಣ್ಮರೆಯಾದ ಕನ್ನಡ.. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದ ವಾಟಾಳ್
ವಾಟಾಳ್​ ನಾಗರಾಜ್
ಆಯೇಷಾ ಬಾನು

Updated on: Feb 04, 2021 | 3:07 PM

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021 ಏರ್​ಶೋನಲ್ಲಿ ಕನ್ನಡ ಕಣ್ಮರೆ ಹಿನ್ನೆಲೆಯಲ್ಲಿ ವಾಟಾಳ್​ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ವಾಟಾಳ್​​​ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ವೈಮಾನಿಕ ಪ್ರದರ್ಶನ ಬೇಡವೇ ಬೇಡ ಎಂದು ಸಿಡಿದೆದ್ದಿದ್ದಾರೆ.

ಏರ್ ಶೋನಲ್ಲಿ ಒಂದು ಅಕ್ಷರ ಕನ್ನಡ ಕಾಣಿಸುತ್ತಿಲ್ಲ. ಕೇವಲ ಹಿಂದಿ, ಇಂಗ್ಲಿಷ್ ರಾರಾಜಿಸುತ್ತಿದೆ. ಇದು ಈ ನಾಡಿಗೆ ಮಾಡಿದ ದ್ರೋಹ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂಗ್ಲಿಷ್​​ನಲ್ಲಿ ಭಾಷಣ ಮಾಡಿದ್ದಾರೆ. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ. ಇಂಗ್ಲಿಷ್​ನಲ್ಲಿ ಭಾಷಣ ಮಾಡಿ ಕನ್ನಡಕ್ಕೆ ಅಗೌರವ ತೊರಿದ್ದೀರಿ. ಕನ್ನಡವೇ ಇಲ್ಲದ ವೈಮಾನಿಕ ಪ್ರದರ್ಶನ ಯಾರಿಗೆ ಬೇಕು ಎಂದು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ವಾಟಾಳ್​ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.

Aero India 2021 Live: ಭಾರತದ ಪ್ರಾದೇಶಿಕ ಸಮಗ್ರತೆ, ಜನರ ರಕ್ಷಣೆಗೆ ನಮ್ಮ ಸೇನೆ ಸದಾ ಬದ್ಧ -ರಕ್ಷಣಾ ಸಚಿವ ರಾಜನಾಥ್​ ಸಿಂಗ್​

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us