ಮೈಸೂರು: ಎಸ್ಎಸ್ಎಲ್ಸಿ, ಪದವಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನ ಹಾರ್ಡಿಂಜ್ ವೃತ್ತದ ಬಳಿ SSLC, ಪದವಿ ಪರೀಕ್ಷೆಗಳನ್ನು ನಡೆಸದೆ ಪಾಸ್ ಮಾಡಬೇಕು. ಆನ್ಲೈನ್ ಶಿಕ್ಷಣ ಪದ್ಧತಿ ಕೈಬಿಡಬೇಕು ಎಂದು ಮೊಬೈಲ್ ಪೋನ್ ಹಿಡಿದು ವಾಟಾಳ್ ಪ್ರತಿಭಟನೆ ಕೈಗೊಂಡಿದ್ದಾರೆ.
ಆನ್ಲೈನ್ ಒಂದು ದೊಡ್ಡ ನರಕ. ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಸರಿ ಇಲ್ಲ. ನೆಟ್ವರ್ಕ್ ಸಿಗಲ್ಲ. ಕೆಲವರಿಗೆ ಮೊಬೈಲ್ ಬಳಸೋಕೆ ಬರೋಲ್ಲ. ಕೊರೊನ ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಆನ್ಲೈನ್ ಶಿಕ್ಷಣ ಮಾಡಬಾರದು ಎಂದು ಪ್ರೊಟೆಸ್ಟ್ ಮಾಡಿದ್ದಾರೆ.
Published On - 3:18 pm, Tue, 2 June 20