ಬೆಂಗಳೂರಿನಲ್ಲಿ ತರಕಾರಿ ದರದಲ್ಲಿ ಇಳಿಕೆ

ತರಕಾರಿ ಬೆಲೆ ಏರಿಕೆಯಿಂದ ಆತಂಕಗೊಳಗಾದ ಜನರಿಗೆ ಖುಷಿ ಸಂಗತಿಯೊಂದಿದೆ. ತರಕಾರಿಯನ್ನು ಕೊಳ್ಳುವುದೇ ಕಷ್ಟ ಎಂದು ಕೆಲವು ದಿನಗಳ ಹಿಂದೆಯಿಂದ ಯೋಚಿಸುತ್ತಿದ್ದವರ ಮೊಗದಲ್ಲಿ ಸಂತಸ ಮೂಡಿದೆ. ಹೌದು ಕೆಲವು ದಿನಗಳಿಂದ ತರಕಾರಿ ಬೆಲೆ ಗಗನಕ್ಕೇರಿತ್ತು. ಮಧ್ಯಮ ವರ್ಗದ ಜನರಿಗೆ ತರಕಾರಿ ಕೊಳ್ಳುವುದು ತೀರಾ ಕಷ್ಟವಾಗಿತ್ತು. ಆದರೆ ಇದೀಗ ಟೊಮೇಟೊ, ಬೆಂಡೆಕಾಯಿ, ಹೀರೆಕಾಯಿ, ಬೀನ್ಸ್, ಹಾಗಲಕಾಯಿ, ಕ್ಯಾರೆಟ್, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕ್ಯಾರೆಟ್ ದರದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಭಾರಿ ಏರಿಕೆ ಕಂಡಿತ್ತು. […]

ಬೆಂಗಳೂರಿನಲ್ಲಿ ತರಕಾರಿ ದರದಲ್ಲಿ ಇಳಿಕೆ

Updated on: Nov 09, 2020 | 4:59 PM

ತರಕಾರಿ ಬೆಲೆ ಏರಿಕೆಯಿಂದ ಆತಂಕಗೊಳಗಾದ ಜನರಿಗೆ ಖುಷಿ ಸಂಗತಿಯೊಂದಿದೆ. ತರಕಾರಿಯನ್ನು ಕೊಳ್ಳುವುದೇ ಕಷ್ಟ ಎಂದು ಕೆಲವು ದಿನಗಳ ಹಿಂದೆಯಿಂದ ಯೋಚಿಸುತ್ತಿದ್ದವರ ಮೊಗದಲ್ಲಿ ಸಂತಸ ಮೂಡಿದೆ. ಹೌದು ಕೆಲವು ದಿನಗಳಿಂದ ತರಕಾರಿ ಬೆಲೆ ಗಗನಕ್ಕೇರಿತ್ತು. ಮಧ್ಯಮ ವರ್ಗದ ಜನರಿಗೆ ತರಕಾರಿ ಕೊಳ್ಳುವುದು ತೀರಾ ಕಷ್ಟವಾಗಿತ್ತು. ಆದರೆ ಇದೀಗ ಟೊಮೇಟೊ, ಬೆಂಡೆಕಾಯಿ, ಹೀರೆಕಾಯಿ, ಬೀನ್ಸ್, ಹಾಗಲಕಾಯಿ, ಕ್ಯಾರೆಟ್, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಕ್ಯಾರೆಟ್ ದರದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಭಾರಿ ಏರಿಕೆ ಕಂಡಿತ್ತು. ಕ್ಯಾರೆಟ್ ದರ ಒಂದು ಕೆ.ಜಿ. ಗೆ ಸುಮಾರು 150 ರೂ, ಒಂದು ಕೆ.ಜಿ ಹೀರೆಕಾಯಿಗೆ 60 ರೂ, ಟೊಮೆಟೊ 35 ರೂ, 50 ರಿಂದ 60 ರೂ ಬೀನ್ಸ್ ಏರಿಕೆಯಾಗಿತ್ತು. ಹಾಗಾಗಿ ಜನರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಇದೀಗ ದರದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖಗೊಂಡಿದೆ. ಸಕಾಲಕ್ಕೆ ಆದ ಮಳೆಯಿಂದ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದ ಕಾರಣ ಬೆಲೆಯಲ್ಲಿ ಇಳಿಕೆಯಾಗಿರುವುದು ಸ್ಪಷ್ಟವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಎಂ.ವಿ ಸುಮಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ತರಕಾರಿ ದರ :
ನುಗ್ಗೆಕಾಯಿ- 115 ರೂ, ಎಲೆಕೋಸು- 60 ರೂ, ಕ್ಯಾರೆಟ್- 90 ರೂ, ಬೇಟ್ ರೋಟ್- 54 ರೂ, ಬೀನ್ಸ್- 40 ರೂ, ಟೊಮೆಟೊ- 26 ರೂ, ಹಾಗಲಕಾಯಿ- 40 ರೂ, ಬೆಂಡೆಕಾಯಿ- 38 ರೂ, ಕರಿಬೇವು- 70 ರೂ, ಮೆಂತ್ಯೆ ಸೊಪ್ಪು- 82 ರೂ, ಪಾಲಕ್ ಸೊಪ್ಪು- 72 ರೂ, ಹೀರೆಕಾಯಿ- 38 ರೂ ದರದಲ್ಲಿ ಇಳಿಕೆ ಕಂಡಿದೆ.