Drugs ಕೇಸ್: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಬಂಧನವಾಗಿದ್ದು ಹೇಗೆ.. ಗೋವಾ ಲಿಂಕ್ ಏನು?
ಬೆಂಗಳೂರು: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಬಂಧನದ ಹಿಂದಿನ ರೋಚಕ ಮಾಹಿತಿ ಇದೀಗ ಬಯಲಾಗಿದೆ. ನವೆಂಬರ್ 4ರಂದು ನಗರದ ಚಾಮರಾಜಪೇಟೆಯಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲ ಪೆಡ್ಲರ್ಗಳು ವಿದೇಶದಿಂದ ಗಾಂಜಾ ತರಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ವಿದೇಶಿ ಅಂಚೆ ಕಚೇರಿಗೆ ಪಾರ್ಸಲ್ನಲ್ಲಿ ಗಾಂಜಾ ತರಿಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ಸುಜಯ್ ಎಂಬುವವನನ್ನು ಬಂಧಿಸಿ ಗಾಂಜಾ ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಸುಜಯ್ ಮತ್ತಿಬ್ಬರ […]

ಬೆಂಗಳೂರು: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಬಂಧನದ ಹಿಂದಿನ ರೋಚಕ ಮಾಹಿತಿ ಇದೀಗ ಬಯಲಾಗಿದೆ. ನವೆಂಬರ್ 4ರಂದು ನಗರದ ಚಾಮರಾಜಪೇಟೆಯಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲ ಪೆಡ್ಲರ್ಗಳು ವಿದೇಶದಿಂದ ಗಾಂಜಾ ತರಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ವಿದೇಶಿ ಅಂಚೆ ಕಚೇರಿಗೆ ಪಾರ್ಸಲ್ನಲ್ಲಿ ಗಾಂಜಾ ತರಿಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.
ದಾಳಿ ವೇಳೆ ಸುಜಯ್ ಎಂಬುವವನನ್ನು ಬಂಧಿಸಿ ಗಾಂಜಾ ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಸುಜಯ್ ಮತ್ತಿಬ್ಬರ ಬಗ್ಗೆ ಮಾಹಿತಿ ನೀಡಿದ್ದನಂತೆ. ಸಂಜಯ್ ಮಾಹಿತಿ ಮೇರೆಗೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ ಅಧಿಕಾರಿಗಳು ಗೋವಾದಲ್ಲಿ ಹೇಮಂತ್ ಹಾಗೂ ಸುನೀಶ್ ಎಂಬ ಇಬ್ಬರನ್ನು ಬಂಧಿಸಿದರು.
ಇವರಿಬ್ಬರ ಜೊತೆ ದರ್ಶನ್ ಕುಮಾರ್ ಸಹ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ದರ್ಶನ್ ಕುಮಾರ್ ಗೋವಾದಲ್ಲಿ ಹೇಮಂತ್, ಸುನೀಶ್ಗೆ ಆಶ್ರಯ ನೀಡಿದ್ದ ಎಂಬ ಮಾಹಿತಿ ಸಹ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳ ಜೊತೆ ದರ್ಶನ್ ಕುಮಾರ್ ನಿಕಟ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.



