Dark Web ಮೂಲಕ Drugs ಸಪ್ಲೇ.. ಮಾಜಿ ಸಚಿವನ ಪುತ್ರನ ಬಂಧನ
ಬೆಂಗಳೂರು: ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧನವಾಗಿದೆ. ನಗರದ ಪೊಲೀಸರಿಂದ ದರ್ಶನ್ ಲಮಾಣಿ ಅರೆಸ್ಟ್ ಆಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಖಾತೆ ಸಚಿವ ದರ್ಶನ್, ಡ್ರಗ್ಸ್ ಪೆಡ್ಲರ್‌ಗಳಿಗೆ ನೆರವು ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಪೆಡ್ಲರ್‌ಗಳಿಗೆ ಸಾಥ್ ಕೊಟ್ಟ ದರ್ಶನ್ ಲಮಾಣಿ ಡ್ರಗ್ಸ್ ಡೀಲಿಂಗ್‌ನಲ್ಲಿ ಸಿಕ್ಕಿಬಿದಿದ್ದಾನೆ. ದರ್ಶನ್ ಲಮಾಣಿ ಡೀಲಿಂಗ್‌ಗಳ ಕುರಿತು ತನಿಖೆ ನಡೆಸಿದ ವೇಳೆ ಆತ Dark Webನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎಂಬ ಮಾಹಿತಿ […]

ಬೆಂಗಳೂರು: ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಬಂಧನವಾಗಿದೆ. ನಗರದ ಪೊಲೀಸರಿಂದ ದರ್ಶನ್ ಲಮಾಣಿ ಅರೆಸ್ಟ್ ಆಗಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಖಾತೆ ಸಚಿವ ದರ್ಶನ್, ಡ್ರಗ್ಸ್ ಪೆಡ್ಲರ್‌ಗಳಿಗೆ ನೆರವು ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಪೆಡ್ಲರ್‌ಗಳಿಗೆ ಸಾಥ್ ಕೊಟ್ಟ ದರ್ಶನ್ ಲಮಾಣಿ ಡ್ರಗ್ಸ್ ಡೀಲಿಂಗ್‌ನಲ್ಲಿ ಸಿಕ್ಕಿಬಿದಿದ್ದಾನೆ.
ದರ್ಶನ್ ಲಮಾಣಿ ಡೀಲಿಂಗ್‌ಗಳ ಕುರಿತು ತನಿಖೆ ನಡೆಸಿದ ವೇಳೆ ಆತ Dark Webನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ದರ್ಶನ್ ಲಮಾಣಿ ತಂದೆ ರುದ್ರಪ್ಪ ಲಮಾಣಿ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಖಾತೆ ಸಚಿವರಾಗಿದ್ದರು.
ಏನಿದು ಡಾರ್ಕ್ ವೆಬ್? ಅಂದ ಹಾಗೆ, ಈ ಡಾರ್ಕ್ ವೆಬ್ ಅನ್ನೋದು ಅನೈತಿಕ ಚಟುವಟಿಕೆಗಳನ್ನು ನಡೆಸಲು ಬಳಸಲಾಗುವ ವೆಬ್ಸೈಟ್ಗಳು. ಈ ವೆಬ್ಸೈಟ್ಗಳು ಸಾರ್ವಜನಿಕರಿಗೆ ಚಿರಪರಿಚಿತವಾಗಿರುವ ಗೂಗಲ್ ಸರ್ಚ್ ಎಂಜಿನ್ನಲ್ಲಿ ಲಭ್ಯವಿರುವುದಿಲ್ಲ. ಕೆಲ ವಿಶೇಷ ಸಾಫ್ಟ್ವೇರ್ಗಳನ್ನು ಬಳಸಿ ಮಾತ್ರ ಈ ವೆಬ್ಸೈಟ್ಗಳಿಗೆ ಹೋಗಬಹುದಾಗಿದೆ. ಜಗತ್ತಿನಾದ್ಯಂತ ಈ ಡಾರ್ಕ್ ವೆಬ್ನ ತಾಣಗಳನ್ನು ಡ್ರಗ್ಸ್, ಶಸ್ತ್ರಾಸ್ತ್ರ ಮತ್ತು ಇತರೆ ಅನೈತಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ.
Drugs ಕೇಸ್: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಬಂಧನವಾಗಿದ್ದು ಹೇಗೆ.. ಗೋವಾ ಲಿಂಕ್ ಏನು?
ದರ್ಶನ್ ಒಳ್ಳೇ ಹುಡುಗ.. ಹೀಗ್ಯಾಕಾಯ್ತು ಅಂತಾ ಆಶ್ಚರ್ಯವಾಯ್ತು -ಪುತ್ರನ ಬಗ್ಗೆ ಮಾಜಿ ಸಚಿವ ಕಳವಳ
Published On - 2:58 pm, Mon, 9 November 20



