ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳು ರಸ್ತೆಗೆ ಇಳಿಯುವುದು ಯಾವಾಗ?
ಬೆಂಗಳೂರು: ಇತ್ತೀಚೆಗೆ ತುಂಬಾ ಸುದ್ದಿ ಮಾಡಿದ ಎಲೆಕ್ಟ್ರಿಕ್ ಬಸ್ಸುಗಳಲ್ಲಿ ಓಡಾಡಬೇಕೆಂದರೆ ಪ್ರಯಾಣಿಕರು ಇನ್ನೂ ಕೆಲವು ತಿಂಗಳು ಕಾಯಬೇಕಾಗಿದೆ. ಅಂದಾಜಿನ ಪ್ರಕಾರ ಈ ಬಸ್ಸುಗಳು ರಸ್ತೆಗಿಳಿಯಲು ಇನ್ನೂ 4-5 ತಿಂಗಳುಗಳ ಕಾಲಾವಕಾಶ ಬೇಕು. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರ ಪ್ರಕಾರ ಟೆಂಡರ್ ಪ್ರಕ್ರಿಯೆಯ ನಂತರ ಪ್ರಯಾಣಿಕರಿಗಾಗಿ ದೇಶೀಯ ಎಲೆಕ್ಟ್ರಿಕ್ ಬಸ್ ಸೇವೆಗಳನ್ನು ನೀಡುವ ಯೋಜನೆಯನ್ನು ಬೆಂಗಳೂರು ಮಹಾನಗರ ಪಾಲಿಗೆ ಹಮ್ಮಿಕೊಂಡಿದೆ. ಈ ಕುರಿತು ಪೂರ್ವ ತಯಾರಿಯಾಗಿ ಸಂಚಾರ ಕೈಗೊಂಡಿದ್ದೇವೆ. ಜನರಿಗೆ ಅನುಕೂಲಕರವಾಗುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ನಂದೀಶ್ ರೆಡ್ಡಿ ತಿಳಿಸಿದ್ದಾರೆ. […]

ಬೆಂಗಳೂರು: ಇತ್ತೀಚೆಗೆ ತುಂಬಾ ಸುದ್ದಿ ಮಾಡಿದ ಎಲೆಕ್ಟ್ರಿಕ್ ಬಸ್ಸುಗಳಲ್ಲಿ ಓಡಾಡಬೇಕೆಂದರೆ ಪ್ರಯಾಣಿಕರು ಇನ್ನೂ ಕೆಲವು ತಿಂಗಳು ಕಾಯಬೇಕಾಗಿದೆ. ಅಂದಾಜಿನ ಪ್ರಕಾರ ಈ ಬಸ್ಸುಗಳು ರಸ್ತೆಗಿಳಿಯಲು ಇನ್ನೂ 4-5 ತಿಂಗಳುಗಳ ಕಾಲಾವಕಾಶ ಬೇಕು.
ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರ ಪ್ರಕಾರ ಟೆಂಡರ್ ಪ್ರಕ್ರಿಯೆಯ ನಂತರ ಪ್ರಯಾಣಿಕರಿಗಾಗಿ ದೇಶೀಯ ಎಲೆಕ್ಟ್ರಿಕ್ ಬಸ್ ಸೇವೆಗಳನ್ನು ನೀಡುವ ಯೋಜನೆಯನ್ನು ಬೆಂಗಳೂರು ಮಹಾನಗರ ಪಾಲಿಗೆ ಹಮ್ಮಿಕೊಂಡಿದೆ. ಈ ಕುರಿತು ಪೂರ್ವ ತಯಾರಿಯಾಗಿ ಸಂಚಾರ ಕೈಗೊಂಡಿದ್ದೇವೆ. ಜನರಿಗೆ ಅನುಕೂಲಕರವಾಗುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ನಂದೀಶ್ ರೆಡ್ಡಿ ತಿಳಿಸಿದ್ದಾರೆ.
ಯಾವ ಘಟಕಗಳಿಂದ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರವಿದೆ?
3 ಡಿಪೋಗಳಿಂದ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಬಿಎಂಟಿಸಿ ಕಲ್ಪಿಸಿದೆ. ಯಶವಂತಪುರ, ಕೆಂಗೇರಿ, ಕೆ.ಆರ್. ಪುರ ಘಟಕಗಳಿಂದ ಬಸ್ ಸಂಚಾರಗೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಅನುಕೂಲಕರವಾಗಿದೆಯೇ ಎಂಬ ದೃಷ್ಟಿಯಿಂದ ಪೂರ್ವ ತಯಾರಿಯಾಗಿ ಬಸ್ ಸಂಚಾರವನ್ನು ಕೈಗೊಳ್ಳಲಾಗಿತ್ತು.
ಎಷ್ಟು ಕಿ.ಮೀ. ಚಲಿಸಬಹುದು? ಒಮ್ಮೆ2 ರಿಂದ3 ಗಂಟೆಗಳ ಕಾಲ ಚಾರ್ಜಿಂಗ್ ಸಂಪೂರ್ಣಗೊಂಡರೆ ಸುಮಾರು 250 ಕಿ.ಮೀ.ವರೆಗೆ ಎಲೆಕ್ಕ್ಟ್ರಿಕ್ ಬಸ್ಸುಗಳು ಸಂಚರಿಸಬಲ್ಲವು. ಹಾಗೆಯೇ 12ಮೀಟರ್ ಉದ್ದ ಹಾಗೂ 400 ಮೀಟರ್ ಫ್ಲೋರ್ ಎತ್ತರವಿರುವ ಈ ಬಸ್ಸುಗಳು ಹೊಗೆ ನಿಯಂತ್ರಣ ವ್ಯವಸ್ಥೆಯನ್ನು ಹಾಗೂ ಆಟೋಮೆಟಿಕ್ ಗೇರ್ ವ್ಯವಸ್ಥೆ ಹೊಂದಿದೆ.
ಮಾರ್ಗ ಮಧ್ಯದಲ್ಲಿ ಬಸ್ ಚಾರ್ಜ್ ಖಾಲಿ ಆಗಿ ಬಿಟ್ರೆ? ಮಾರ್ಗ ಮಧ್ಯದಲ್ಲಿ ಚಾರ್ಜ್ ಖಾಲಿಯಾದರೆ ಇತರ ಬಸ್ ನಿಲ್ದಾಣಗಳಲ್ಲಿ ಅಥವಾ ಘಟಕಗಳಲ್ಲಿ ಚಾರ್ಜಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಇನ್ನಿತರೇ ಸಮಸ್ಯೆಯಿಂದಾಗಿ ಮಧ್ಯದಲ್ಲಿ ಬಸ್ಸುಗಳು ನಿಂತು ಹೋದರೆ ಟೋಯಿಂಗ್ ಹುಕ್ ಮೂಲಕವಾಗಿ ಬಸ್ಸುಗಳನ್ನು ತರುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಜನರಿಗೆ ಅನುಕೂಲವೋ? ಅನಾನುಕೂಲವೋ?
ನಾಗರಿಕರ ಜೊತೆಗೆ ವಯಸ್ಕರಿಗೆ ಹೆಚ್ಚು ಅನುಕೂಲಕರವಾದ ವ್ಯವಸ್ಥೆ ಈ ಬಸ್ಸುಗಳಲ್ಲಿವೆ. ವೀಲ್ ಚೇರುಗಳು, ಹೊಗೆ ನಿಯಂತ್ರಣ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಕಿಟ್, ಆರಾಮಾಗಿ ಕೂರಲು ವ್ಯವಸ್ಥಿತ ಸೀಟುಗಳನ್ನು ಬಸ್ಸು ಹೊಂದಿದೆ.
Published On - 2:48 pm, Mon, 9 November 20




