AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಬ್ದರಹಿತ ದೀಪಾವಳಿಯಂತೆ.. ರಕ್ತರಹಿತ ಬಕ್ರೀದ್, ನಿಶ್ಯಬ್ದ ಶುಕ್ರವಾರ, ಪಟಾಕಿರಹಿತ ಹೊಸ ವರ್ಷ ಆಚರಿಸಲಿ’

ವಿಜಯಪುರ: ರಾಜ್ಯದಲ್ಲಿ ಕೊವಿಡ್ ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೇವಲ ಹಸಿರು ಪಟಾಕಿ ಬಳಸಬೇಕೆಂದು‌ ಮನವಿ ಸಹ ಮಾಡಿಕೊಂಡಿದೆ. ಇದಕ್ಕೆ ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್ ಹಿಂದೂಗಳು ದೀಪಾವಳಿ, ದಸರಾ, ಗಣೇಶ ಹಬ್ಬಗಳಂದು ಸಾಮೂಹಿಕವಾಗಿ ಸೇರುತ್ತಾರೆ. ಆಗ ಶಬ್ದರಹಿತ ದೀಪಾವಳಿ, ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ ಎಂದು ಬೋಧನೆ ಮಾಡಲಾಗುತ್ತದೆ. ಇದೇ ರೀತಿ ರಕ್ತರಹಿತ ಬಕ್ರೀದ್, […]

‘ಶಬ್ದರಹಿತ ದೀಪಾವಳಿಯಂತೆ.. ರಕ್ತರಹಿತ ಬಕ್ರೀದ್, ನಿಶ್ಯಬ್ದ ಶುಕ್ರವಾರ, ಪಟಾಕಿರಹಿತ ಹೊಸ ವರ್ಷ ಆಚರಿಸಲಿ’
KUSHAL V
|

Updated on:Nov 09, 2020 | 3:04 PM

Share

ವಿಜಯಪುರ: ರಾಜ್ಯದಲ್ಲಿ ಕೊವಿಡ್ ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೇವಲ ಹಸಿರು ಪಟಾಕಿ ಬಳಸಬೇಕೆಂದು‌ ಮನವಿ ಸಹ ಮಾಡಿಕೊಂಡಿದೆ. ಇದಕ್ಕೆ ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್ ಹಿಂದೂಗಳು ದೀಪಾವಳಿ, ದಸರಾ, ಗಣೇಶ ಹಬ್ಬಗಳಂದು ಸಾಮೂಹಿಕವಾಗಿ ಸೇರುತ್ತಾರೆ. ಆಗ ಶಬ್ದರಹಿತ ದೀಪಾವಳಿ, ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ ಎಂದು ಬೋಧನೆ ಮಾಡಲಾಗುತ್ತದೆ. ಇದೇ ರೀತಿ ರಕ್ತರಹಿತ ಬಕ್ರೀದ್, ನಿಶ್ಯಬ್ದ ಶುಕ್ರವಾರ ಹಾಗೂ ಪಟಾಕಿ ಇಲ್ಲದ ಡಿಸೆಂಬರ್ 31 ರಾತ್ರಿ ಸಹ ಜಾರಿಗೆ ಬರಲಿ ಎಂದು ಶಾಸಕ ಯತ್ನಾಳ್ ಪೋಸ್ಟ್ ಮಾಡಿದ್ದಾರೆ. ಧ್ವನಿವರ್ಧಕ ಬಳಸಿ ಕೂಗುವುದು, ರಸ್ತೆಯಲ್ಲಿ ನಮಾಜು ಮಾಡುವುದು ಬೇಡ ಎಂದು ಸಹ ಹೇಳಿದ್ದಾರೆ.

ನಾವು ಮನೆಯಲ್ಲೇ ದೀಪ ಹಚ್ಚುತ್ತೇವೆ. ಅವರು ಸ್ಪೀಕರ್ ಹಚ್ಚದೆ ನಮಾಜು ಮಾಡಲಿ, ರಸ್ತೆ ಮೇಲೆ ಬೇಡ ಎಂದೆಲ್ಲಾ ಸಲಹೆ ನೀಡುವ ಮೂಲಕ ದೀಪಾವಳಿ ಪಟಾಕಿ ನಿಷೇಧಕ್ಕೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Published On - 2:32 pm, Mon, 9 November 20