AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?

ಅಮೆರಿಕದ ಅಧ್ಯಕ್ಷಗಾದಿಗೆ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಖಚಿತಗೊಂಡಿರುವ ಬೆನ್ನಲ್ಲಿ, ಭಾರತದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಶುಭಕೋರಿರುವ ಎಸ್.ಎಂ. ಕೃಷ್ಣ ಬೈಡೆನ್ ಮತ್ತು ಕಮಲಾಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ. Congratulations to @JoeBiden being elected 46th President and @KamalaHarris Vice President of United States of America. All the best !!#BidenHarris2020 […]

ಬೈಡೆನ್-ಕಮಲಾಗೆ ಶುಭಕೋರಿದ SM ಕೃಷ್ಣ: ಭಾರತ-ಅಮೆರಿಕ ಉತ್ತಮ ಸಂಬಂಧಕ್ಕೆ ಕೃಷ್ಣ ಆಗುವರೇ ಕೊಂಡಿ?
ಸಾಧು ಶ್ರೀನಾಥ್​
|

Updated on:Nov 09, 2020 | 5:42 PM

Share

ಅಮೆರಿಕದ ಅಧ್ಯಕ್ಷಗಾದಿಗೆ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆ ಖಚಿತಗೊಂಡಿರುವ ಬೆನ್ನಲ್ಲಿ, ಭಾರತದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಶುಭಕೋರಿರುವ ಎಸ್.ಎಂ. ಕೃಷ್ಣ ಬೈಡೆನ್ ಮತ್ತು ಕಮಲಾಗೆ ಆಲ್ ದಿ ಬೆಸ್ಟ್ ಎಂದಿದ್ದಾರೆ.

ಬೈಡೆನ್, ಕಮಲಾ ಹ್ಯಾರಿಸ್ ಗೆ ಆತ್ಮೀಯರಂತೆ ಎಸ್.ಎಂ. ಕೃಷ್ಣ! ಈ ಹಿಂದೆ 2009ರಿಂದ 2012ರ ವರೆಗೆ, ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಎಸ್.ಎಂ. ಕೃಷ್ಣ, ಆಗ ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಬರಾಕ್ ಒಬಾಮಾ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ರನ್ನು ಕೃಷ್ಣ ಭೇಟಿಯಾಗಿದ್ದರು.

ಅಮೆರಿಕದ ಚುನಾವಣೆಗೂ ಮೊದಲೇ ಕೃಷ್ಣ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಶುಭ ಹಾರೈಸಿದ್ದರು ಮತ್ತು ಖಾಸಗಿಯಾಗಿ ತಮ್ಮ ಶುಭ ಸಂದೇಶವನ್ನು ರವಾನಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಮಲಾ, ಬೈಡೆನ್ ಜೊತೆಗೆ ಕೃಷ್ಣಗೆ ಉತ್ತಮ ಸಂಪರ್ಕವೂ ಇದೆ. ಅಮೆರಿಕಾದ ಮತದಾನಕ್ಕಿಂತ ಮೊದಲು ನಮ್ಮ ದೇಶದಲ್ಲಿ ಆಚರಿಸಿದ ದಸರಾ ಸಂದರ್ಭದಲ್ಲಿಯೇ ಕೃಷ್ಣ ಅವರು ಖಡಕ್ ಮಾತನಾಡಿದ್ದರು. ಅಮೆರಿಕಾದಲ್ಲಿ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರು ಗೆಲ್ಲಲಿ ಎಂದು ನೇರವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮೆರಿಕ ದಲ್ಲಾಸ್ ನ ಸಥರ್ನ್ ಮೆಥಡಿಸ್ಟ್ ಯುನಿವರ್ಸಿಟಿ, ವಾಷಿಂಗ್ಟನ್ ಡಿ.ಸಿ.ಯ ಜಾರ್ಜ್ ವಾಷಿಂಗ್ಟನ್ ಯುನಿವರ್ಸಿಟಿಗಳಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ ಎಸ್.ಎಂ. ಕೃಷ್ಣ ಅವರು ಅಮೆರಿಕದ ವ್ಯವಸ್ಥೆಯ ಕುರಿತು ಉತ್ತಮ ಜ್ಞಾನ ಪಡೆದವರಾಗಿದ್ದಾರೆ. ಭಾರತೀಯ ರಾಜಕೀಯ ಧುರೀಣ ಕೃಷ್ಣಗೆ ಈಗ 88 ವರ್ಷ ವಯಸ್ಸಾಗಿದ್ದು ಭಾರತೀಯ ರಾಜ್ಯ, ರಾಷ್ಟ್ರ ರಾಜಕಾರಣಗಳ ಅನುಭವ ಹೊಂದಿದ್ದಾರೆ.

1962ರಿಂದ ಭಾರತೀಯ ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವ ಅವರು 2017ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪ್ರಸ್ತುತ ಆಳ್ವಿಕೆ ನಡೆಸುತ್ತಿರುವುದು ನರೇಂದ್ರ ಮೋದಿ ಆಡಳಿತದ ಬಿಜೆಪಿ ಪಕ್ಷವಾಗಿರುವುದರಿಂದ, ದೇಶಕ್ಕೆ ಮತ್ತು ಪಕ್ಷಕ್ಕೆ, ಭಾರತ-ಅಮೆರಿಕ ಸಂಬಂಧವಾಗಿ ಎಸ್.ಎಂ. ಕೃಷ್ಣ ಕಡೆಯಿಂದ ಉತ್ತಮ ಸಹಾಯವಾಗುವ ನಿರೀಕ್ಷೆಯಿದೆ.

Published On - 5:39 pm, Mon, 9 November 20

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ