ದರ್ಶನ್ ಒಳ್ಳೇ ಹುಡುಗ.. ಹೀಗ್ಯಾಕಾಯ್ತು ಅಂತಾ ಆಶ್ಚರ್ಯವಾಯ್ತು -ಪುತ್ರನ ಬಗ್ಗೆ ಮಾಜಿ ಸಚಿವ ಕಳವಳ
ಹಾವೇರಿ: ಬೆಂಗಳೂರಿಗೆ ಹೋಗುತ್ತೇನೆ ಎಂದು ಬಂದಿದ್ದ. ಫ್ರೆಂಡ್ಸ್ ಜತೆ ಗೋವಾಕ್ಕೆ ಹೋಗಿದ್ದು ಅಂತಾ ನಂತರ ಗೊತ್ತಾಯ್ತು. ನಿನ್ನೆ ಅವನ ಫೋನ್ ಸ್ವಿಚ್ ಆಫ್ ಇತ್ತು ಎಂದು ಡ್ರಗ್ಸ್ ಕೇಸ್‌ನಲ್ಲಿ ತಮ್ಮ ಪುತ್ರನ ಬಂಧನ ವಿಚಾರವಾಗಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಟಿವಿ 9ಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್‌ಕುಮಾರ್ ಬಂಧನದ ಬಗ್ಗೆ ನನಗೇನೂ ಗೊತ್ತಿಲ್ಲ. ರಾಣೆಬೆನ್ನೂರಿನಲ್ಲಿ ದರ್ಶನ್‌ಕುಮಾರ್ ನಮ್ಮ ಜತೆ ಇರುತ್ತಿದ್ದ . ನಮ್ಮ ಕ್ರಷರ್, ಮೈನ್ಸ್, ಗಾಡಿ ನೋಡ್ಕೊಂಡು ಇರುತ್ತಿದ್ದ ಎಂದು ರುದ್ರಪ್ಪ ಲಮಾಣಿ ಹೇಳಿದರು. ದರ್ಶನ್ ಬಂಧನದ […]

ಹಾವೇರಿ: ಬೆಂಗಳೂರಿಗೆ ಹೋಗುತ್ತೇನೆ ಎಂದು ಬಂದಿದ್ದ. ಫ್ರೆಂಡ್ಸ್ ಜತೆ ಗೋವಾಕ್ಕೆ ಹೋಗಿದ್ದು ಅಂತಾ ನಂತರ ಗೊತ್ತಾಯ್ತು. ನಿನ್ನೆ ಅವನ ಫೋನ್ ಸ್ವಿಚ್ ಆಫ್ ಇತ್ತು ಎಂದು ಡ್ರಗ್ಸ್ ಕೇಸ್‌ನಲ್ಲಿ ತಮ್ಮ ಪುತ್ರನ ಬಂಧನ ವಿಚಾರವಾಗಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಟಿವಿ 9ಗೆ ಪ್ರತಿಕ್ರಿಯಿಸಿದ್ದಾರೆ.
ದರ್ಶನ್‌ಕುಮಾರ್ ಬಂಧನದ ಬಗ್ಗೆ ನನಗೇನೂ ಗೊತ್ತಿಲ್ಲ. ರಾಣೆಬೆನ್ನೂರಿನಲ್ಲಿ ದರ್ಶನ್‌ಕುಮಾರ್ ನಮ್ಮ ಜತೆ ಇರುತ್ತಿದ್ದ . ನಮ್ಮ ಕ್ರಷರ್, ಮೈನ್ಸ್, ಗಾಡಿ ನೋಡ್ಕೊಂಡು ಇರುತ್ತಿದ್ದ ಎಂದು ರುದ್ರಪ್ಪ ಲಮಾಣಿ ಹೇಳಿದರು. ದರ್ಶನ್ ಬಂಧನದ ವಿಷಯ ಕೇಳಿ ಆಶ್ಚರ್ಯವಾಯ್ತು. ಒಳ್ಳೇ ಹುಡುಗ. ಹೀಗ್ಯಾಕಾಯ್ತು ಎಂದು ಆಶ್ಚರ್ಯವಾಯ್ತು ನನಗೆ ಎಂದು ಹೇಳಿದರು.
ದರ್ಶನ್‌ಕುಮಾರ್ ಈಗಷ್ಟೇ BA ಮುಗಿಸಿದ್ದ. LLBಗೆ ಅಡ್ಮಿಷನ್ ಮಾಡಿಸ್ತೀನಿ ಎಂದು ಹೋಗಿದ್ದ. ಆದರೆ, ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು ಎಂದು ರುದ್ರಪ್ಪ ಲಮಾಣಿ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ.
Drugs ಕೇಸ್: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನ ಬಂಧನವಾಗಿದ್ದು ಹೇಗೆ.. ಗೋವಾ ಲಿಂಕ್ ಏನು? Dark Web ಮೂಲಕ Drugs ಸಪ್ಲೇ.. ಮಾಜಿ ಸಚಿವನ ಪುತ್ರನ ಬಂಧನ
Published On - 6:11 pm, Mon, 9 November 20