ಮೈಸೂರು: ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಬ್ಯಾರಿಕೇಡ್ ಬಳಿ ಸಾಗುತ್ತಿದ್ದ ಅರಣ್ಯ ಇಲಾಖೆ ವಾಹನದತ್ತ ಕಾಡಾನೆ ಆಕ್ರಮಣಕಾರಿ ಧೋರಣೆಯಲ್ಲಿ ಚೇಸ್ ಮಾಡಿದ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಮೈಸೂರಿನ ಸರಗೂರು ತಾಲ್ಲೂಕಿನ ದಡದಳ್ಳಿ ಕಾಲೋನಿಯ ಅರಣ್ಯ ಅಂಚಿನಲ್ಲಿ ನಡೆದ ಘಟನೆಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಮೈಸೂರು, ಜನವರಿ 10: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ದಡದಳ್ಳಿ ಕಾಲೋನಿಯ ಅರಣ್ಯ ಅಂಚಿನಲ್ಲಿ ಕಾಡಾನೆ ಅರಣ್ಯ ಇಲಾಖೆ ವಾಹನವನ್ನು ಚೇಸ್ ಮಾಡಿದ ಘಟನೆ ಆತಂಕ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಅಂಚಿನ ಬಳಿ ರೈಲು ಕಂಬಿ ಬ್ಯಾರಿಕೇಡ್ ಹಾಕಲಾಗಿದ್ದ ಪ್ರದೇಶದಲ್ಲಿ ಒಂಟಿ ಸಲಗ ಸಂಚರಿಸುತ್ತಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಇರುವ ವಾಹನವನ್ನು ಕಂಡ ತಕ್ಷಣ ಕಾಡಾನೆ ಘೀಳಿಟ್ಟು ದೌಡಾಯಿಸಿದೆ. ಬ್ಯಾರಿಕೇಡ್ ಒಳಗಿಂದಲೇ ವಾಹನದತ್ತ ನುಗ್ಗಲು ಯತ್ನಿಸಿದ ಕಾಡಾನೆ, ಅಡ್ಡಿಯಿದ್ದ ಕಾರಣ ದಾಳಿ ನಡೆಸಲು ಸಾಧ್ಯವಾಗಿಲ್ಲ.
Latest Videos
