‘ಕೊಹ್ಲಿಗೆ ಮಾಡಿದ ಅನ್ಯಾಯದ ಫಲ.. ಕರ್ಮ ಯಾರನ್ನು ಬಿಡುವುದಿಲ್ಲ’; ಗಂಗೂಲಿ ಕಾಲೆಳೆದ ನೆಟ್ಟಿಗರು
ಐಸಿಸಿ ಈವೆಂಟ್ಗಳನ್ನು ಗೆಲ್ಲದಿದ್ದರು ಕೊಹ್ಲಿ ತಂಡವನ್ನು ಗೆಲುವಿನ ಲಯದಲ್ಲಿರಿಸಿದ್ದರು. ಆದರೆ ನೀವು ಏಕಾಏಕಿ ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಿದಿರಿ. ಈ ನಿರ್ಧಾರದಿಂದ ಬೇಸರಗೊಂಡ ಕೊಹ್ಲಿ ಒಂದು ತಿಂಗಳ ಬಳಿಕ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಮಾಡಿದರು.
ಬಿಸಿಸಿಐ (BCCI) ಅಧ್ಯಕ್ಷರಾಗಿ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರ ಅಧಿಕಾರಾವಧಿ ಮುಗಿದಿದ್ದು, ಅವರ ಸ್ಥಾನಕ್ಕೆ ಈಗ ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ (Roger Binny) ಅವರನ್ನು ಆಯ್ಕೆ ಮಢಲು ನಿರ್ಧರಿಸಲಾಗಿದೆ. ಗಂಗೂಲಿ ಅವರಿಗೆ ಎರಡನೇ ಅವಧಿಗೂ ಬಿಸಿಸಿಐ ಮುಖ್ಯಸ್ಥರಾಗಿ ಮುಂದುವರಿಯುವ ಆಸೆ ಇತ್ತು. ಆದರೆ ಅವರ ಈ ನಿರ್ಧಾರವನ್ನು ಬಿಸಿಸಿಐ ಪುರಸ್ಕರಿಸಲಿಲ್ಲ ಎಂದು ವರದಿಯಾಗಿದೆ. ಆದರೆ ಜಯ್ ಶಾ ಮಾತ್ರ ಎಂದಿನಂತೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಈ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಊಹಾಪೋಹಾಗಳ ಬಗ್ಗೆ ಗಂಗೂಲಿ ಕೊನೆಗೂ ನಿನ್ನೆ ಮೌನ ಮುರಿದಿದ್ದಾರೆ. ಗಂಗೂಲಿ ಹೇಳಿಕೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ (Virat Kohli) ಅಭಿಮಾನಿಗಳು ದಾದಾ ಅವರನ್ನು ಕಾಲೆಳೆಯಲು ಆರಂಭಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಗಂಗೂಲಿಯನ್ನು ತರಾಟೆಗೆ ತೆಗೆದುಕೊಂಡಿರುವ ಅಭಿಮಾನಿಗಳು ಇದೆಲ್ಲ ನೀವು ಕೊಹ್ಲಿಗೆ ಮಾಡಿದ ಅನ್ಯಾದ ಫಲ ಎಂದಿದ್ದಾರೆ. ಐಸಿಸಿ ಈವೆಂಟ್ಗಳನ್ನು ಗೆಲ್ಲದಿದ್ದರು ಕೊಹ್ಲಿ ತಂಡವನ್ನು ಗೆಲುವಿನ ಲಯದಲ್ಲಿರಿಸಿದ್ದರು. ಆದರೆ ನೀವು ಏಕಾಏಕಿ ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಿದಿರಿ. ಈ ನಿರ್ಧಾರದಿಂದ ಬೇಸರಗೊಂಡ ಕೊಹ್ಲಿ ಒಂದು ತಿಂಗಳ ಬಳಿಕ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಮಾಡಿದರು. ಆ ಬಳಿಕ ಏಕದಿನ ನಾಯಕತ್ವವನ್ನು ಅವರಿಂದ ಕಿತ್ತುಕೊಂಡಿರಿ. ಹೀಗಾಗಿ ಈಗ ನೀವು ಅನುಭವಿಸುತ್ತಿರುವ ಅವಮಾನ ಅಂದು ಕೊಹ್ಲಿಗೆ ಮಾಡಿದ ಪಾಪದ ಫಲ ಎಂದು ನೆಟ್ಟಿಗರು ಟ್ವೀಟ್ ಮಾಡಲು ಆರಂಭಿಸಿದ್ದಾರೆ.
ಕೊಹ್ಲಿ- ಗಂಗೂಲಿ ನಡುವಿನ ಮುಸುಕಿನ ಗುದ್ದಾಟ
ವಾಸ್ತವವಾಗಿ, ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ಸೌರವ್ ಗಂಗೂಲಿ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವೆ ವೈಮನಸ್ಸು ಮೂಡಿತ್ತು. ಇದಕ್ಕೆ ಮುಖ್ಯ ಕಾರಣ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದು. ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ವಜಾಗೊಳಿಸಲಾಗಿತ್ತು. ಇದಕ್ಕೂ ಮುನ್ನ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ್ದರು. ಆದರೆ ವಿರಾಟ್ ಕೊಹ್ಲಿ ಟಿ20 ನಾಯಕತ್ವವನ್ನು ತ್ಯಜಿಸಿದ ಕಾರಣ ಅವರನ್ನು ಏಕದಿನ ತಂಡದ ಕಪ್ತಾನನ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು.
ಅಲ್ಲದೆ ಈ ವೇಳೆ ಗಂಗೂಲಿ ನಾನು ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿದ್ದೆ ಎಂದು ತಿಳಿಸಿದ್ದರು. ಆದರೆ ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೊಹ್ಲಿ, ಟಿ20 ನಾಯಕತ್ವವನ್ನು ಬಿಟ್ಟುಕೊಡದಂತೆ ಯಾರೂ ಕೂಡ ನನಗೆ ಹೇಳಿಲ್ಲ ಎಂದಿದ್ದರು. ನನ್ನೊಂದಿಗೆ ಈ ಬಗ್ಗೆ ಯಾರು ಕೂಡ ಚರ್ಚಿಸಿಲ್ಲ. ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸುವ ಗಂಟೆಗೂ ಮೊದಲು ನನಗೆ ಕರೆ ಮಾಡಿ ತಿಳಿಸಿದ್ದರು ಎಂದು ಕೊಹ್ಲಿ ಹೇಳಿದ್ದರು.
ಗಂಗೂಲಿ ಸ್ಪಷ್ಟನೆ ಹೀಗಿದೆ
ಬಿಸಿಸಿಐ ಅಧ್ಯಕ್ಷಗಿರಿಯಿಂದ ಕೆಳಗಿಳಿಸಿದ ಬಳಿಕ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಗಂಗೂಲಿ, ನಾನು ಅಡ್ಮಿನಿಸ್ಟ್ರೇಟರ್ ಆಗಿ ಸುದೀರ್ಘ ಇನ್ನಿಂಗ್ಸ್ ಆಡಿದ್ದು, ಈಗ ಬೇರೆ ಕೆಲಸಗಳತ್ತ ಗಮನ ಹರಿಸುವ ಸಮಯ ಬಂದಿದೆ. ನೀವು ಶಾಶ್ವತವಾಗಿ ಆಟಗಾರರಾಗಿರಲು ಸಾಧ್ಯವಿಲ್ಲ. ಹಾಗೆಯೇ ಶಾಶ್ವತವಾಗಿ ಅಡ್ಮಿನಿಸ್ಟ್ರೇಟರ್ ಆಗಿ ಇರುವುದಕ್ಕೂ ಸಾಧ್ಯವಿಲ್ಲ. ಆದರೆ ನಾನು ಈ ಎರಡನ್ನೂ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ನಾನು ದೀರ್ಘ ಕಾಲದಿಂದ ಆಡಳಿತದ ಚುಕ್ಕಾಣಿ ಹಿಡಿದಿದ್ದೆ. ಆದರೆ, ಈಗ ನಾನು ನನ್ನ ಜೀವನದಲ್ಲಿ ಬೇರೆಡೆ ಗಮನಹರಿಸುವ ಉದ್ದೇಶ ಹೊಂದಿದ್ದೇನೆ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.
ಗಂಗೂಲಿಯನ್ನು ನೆಟ್ಟಿಗರು ಕಾಲೆಳೆದಿದ್ದು ಹೀಗೆ
Karma hits you back Sir???#SouravGanguly | #CricketTwitter pic.twitter.com/VR7qqASArr
— Shaurya (@Kohli_Devotee) October 12, 2022
Ganguly literally ruined the mental peace of Virat Kohli, who's India's greatest cricketer & pride
This is just karma which hit him very hard
You truly deserves this.
— Marc Spector ? (@sylesh146) October 12, 2022
Karma hits back.Now Ganguly has been sacked the way he did with Virat Kohli. pic.twitter.com/MtsVd4MFKk
— RITIK NAGAR GURJÂR (@ritiknagarjds) October 13, 2022
Karma Strikes Back!’ BCCI Treats Sourav Ganguly The Same Way He Treated Virat Kohli
What do u think? (Note : I respect & admire both Ganguly & Kohli) for their contribution
— RJ Ritesh-journalist # Nation first (@rjritesh1987) October 12, 2022
Virat Kohli after knowing that BCCI removed saurav ganguly from his president position! pic.twitter.com/GnKhJpa2SD
— ಭಲೇ ಬಸವ (@Basavachethanah) October 12, 2022
Ganguly worked hard to take Kohli out. Not only has Kohli regained his form but the one sabotaging him has been sabotaged. pic.twitter.com/Pz1pzJrvJ8
— Jas Oberoi | ਜੱਸ ਓਬਰੌਏ (@iJasOberoi) October 11, 2022
Just got to know that BCCI removed saurav ganguly from his president position ??pic.twitter.com/WX1VyPA2rC
— Yashvi (@BreatheKohli) October 11, 2022
Published On - 9:48 am, Fri, 14 October 22