ಕ್ವಾರಂಟೈನ್‌ಗೆ ವಿರೋಧ: ಪೊಲೀಸರು, ಅಧಿಕಾರಿಗಳ ಜತೆ ಗ್ರಾಮಸ್ಥರ ವಾಗ್ವಾದ
ಚಿತ್ರದುರ್ಗ: ಕೊರೊನಾ ವೈರಸ್ ದೇಶವನ್ನು ಆವರಿಸಿದೆ. ಕೊರೊನಾ ಶಂಕಿತರಿಗೆ ಅಥವಾ ಬೇರೆ ದೇಶದಿಂದ ಬಂದ ಜನರಿಗೆ ಕ್ವಾರಂಟೈನ್ ಮಾಡುವುದಕ್ಕೆ ರಾಜ್ಯದ ಹಲವೆಡೆ ವಿರೋಧ ವ್ಯಕ್ತವಾಗುತ್ತಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ತಂಡಗ ಗ್ರಾಮದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ಗೆ ವಿರೋಧ ವ್ಯಕ್ತವಾಗಿದೆ. ಹಾಸ್ಟೆಲ್‌ನಲ್ಲಿ 20 ಜನರ ಕ್ವಾರಂಟೈನ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕ್ವಾರಂಟೈನ್‌ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡ್ತು. ಆದರೆ ಅಲ್ಲೂ ಕೂಡ ಕ್ವಾರಂಟೈನ್‌ಗೆ ವಿರೋಧ ಉಂಟಾಗಿದೆ. […]
ಚಿತ್ರದುರ್ಗ: ಕೊರೊನಾ ವೈರಸ್ ದೇಶವನ್ನು ಆವರಿಸಿದೆ. ಕೊರೊನಾ ಶಂಕಿತರಿಗೆ ಅಥವಾ ಬೇರೆ ದೇಶದಿಂದ ಬಂದ ಜನರಿಗೆ ಕ್ವಾರಂಟೈನ್ ಮಾಡುವುದಕ್ಕೆ ರಾಜ್ಯದ ಹಲವೆಡೆ ವಿರೋಧ ವ್ಯಕ್ತವಾಗುತ್ತಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ತಂಡಗ ಗ್ರಾಮದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ಗೆ ವಿರೋಧ ವ್ಯಕ್ತವಾಗಿದೆ.
ಹಾಸ್ಟೆಲ್‌ನಲ್ಲಿ 20 ಜನರ ಕ್ವಾರಂಟೈನ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕ್ವಾರಂಟೈನ್‌ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡ್ತು.
ಆದರೆ ಅಲ್ಲೂ ಕೂಡ ಕ್ವಾರಂಟೈನ್‌ಗೆ ವಿರೋಧ ಉಂಟಾಗಿದೆ. ಸಾಮಾಜಿಕ ಅಂತರವನ್ನು ಮರೆತು ಕ್ವಾರಂಟೈನ್‌ಗೆ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರೆ. ಪೊಲೀಸರು, ಅಧಿಕಾರಿಗಳ ಜತೆ ಗ್ರಾಮಸ್ಥರು ವಾಗ್ವಾದಕ್ಕೆ ಇಳಿದಿದ್ದಾರೆ.
Published On - 7:22 am, Tue, 12 May 20