‘ಪ್ರಕರಣ ಸದ್ಯ ಸರಿ ದಾರಿಯಲ್ಲಿ ಸಾಗ್ತಿದೆ.. ದಿನಾ ಕೋರ್ಟ್​ಗೆ ವರದಿ ಕೊಡ್ತಾ ಇದ್ದೇವೆ’

‘ಪ್ರಕರಣ ಸದ್ಯ ಸರಿ ದಾರಿಯಲ್ಲಿ ಸಾಗ್ತಿದೆ.. ದಿನಾ ಕೋರ್ಟ್​ಗೆ ವರದಿ ಕೊಡ್ತಾ ಇದ್ದೇವೆ’
ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣ ಸಂಬಂಧ ಎಲ್ಲಾ ವಿಷಯದ ಬಗ್ಗೆ ಕೋರ್ಟ್‌ಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ರು.

ಪ್ರಕರಣಕ್ಕೆ ಸಂಬಂಧಿಸಿ ಪ್ರತಿನಿತ್ಯ ನ್ಯಾಯಾಲಯಕ್ಕೆ ವರದಿಯನ್ನು ನೀಡುತ್ತಿದ್ದೇವೆ. ಈಗ ಇ.ಡಿ. ಕೂಡ ವಿಚಾರಣೆಗೆ ಮುಂದೆ ಬಂದಿದೆ. ನಟಿಯರನ್ನ ಯಾವ ಕಾರಣಕ್ಕೆ ಬಂಧಿಸಿದ್ದೇವೆಂದು ಈ ಹಂತದಲ್ಲಿ ಬಹಿರಂಗಪಡಿಸಲಾಗುವುದಿಲ್ಲ. ಆದರೆ ಡ್ರಗ್ಸ್ ಮಾಫಿಯಾ ಕೇಸ್ ತನಿಖೆ ಸರಿ ದಾರಿಯಲ್ಲಿ ನಡೀತಿದೆ. ಸಿಸಿಬಿ ತನಿಖೆಗೆ ಯಾವುದೇ ರಾಜಕೀಯ ಒತ್ತಡ ಇಲ್ಲ. ನಮಗೆ ಒತ್ತಡವಿದ್ದರೂ ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ರು.

ಜೊತೆಗೆ ನಾವು ಎಲ್ಲಾ ರೂಲ್ಸ್, ಕಾನೂನು ಪ್ರಕಾರ ತನಿಖೆ ಮಾಡ್ತಿದ್ದೇವೆ. ರಾಷ್ಟ್ರೀಯ ‌ಮಟ್ಟಕ್ಕೆ ಹೋದರೂ ನಾವು ಪ್ರಕರಣ ತನಿಖೆ ಮಾಡ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಇನ್ನು ಮುಂದೆ ಯಾರ ಹೆಸರು ಈ ಪ್ರಕರಣದಲ್ಲಿ ಕೇಳಿ ಬರುತ್ತೋ ಕಾದು ನೋಡಬೇಕಾಗಿದೆ ಎಂದು ಕ್ಲುಪ್ತವಾಗಿ ಹೇಳಿದರು.

Click on your DTH Provider to Add TV9 Kannada