ಹೊಸ ಸಂಶೋಧನೆ: ಹೀಗೆ ಮಾಡುವುದರಿಂದ ಕೊರೊನಾ ವೇಗವಾಗಿ ಹರಡುತ್ತದೆ!
ಹುಟ್ಟುಹಬ್ಬದ ಆಚರಣೆ ಸಮಯದಲ್ಲಿ ಜನ್ಮದಿನದ ಶುಭಾಶಯಗಳು ಹಾಡನ್ನು ಹಾಡುವುದರಿಂದ ಕೊರೊನಾ ವೈರಸ್ ಬಹು ಬೇಗನೆ ಹರಡುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ. ಸ್ವೀಡನ್‌ನ ಲುಂಡ್ ವಿಶ್ವವಿದ್ಯಾಲಯದ ಏರೋಸಾಲ್ ಸಂಶೋಧಕರು ನಾವು ಜನ್ಮದಿನದ ಶುಭಾಶಯಗಳು ಹಾಡನ್ನು ಹಾಡುವಾಗ ಹೊರಸೂಸುವ ಕಣಗಳ ಪ್ರಮಾಣವನ್ನು ಅಧ್ಯಯನ ಮಾಡಿದ್ದು, ಅದು ಕೋವಿಡ್-19 ರ ಹರಡುವಿಕೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಕಂಡು ಬಂದಿದೆ. ನಾವು ಹಾಡುವಾಗ ಎಷ್ಟು ವೈರಸ್ ಕಣಗಳು ಹೊರಸೂಸಲ್ಪಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಸಂಶೋಧಕರು 12 ಆರೋಗ್ಯವಂತ ಗಾಯಕರು ಮತ್ತು […]
ಹುಟ್ಟುಹಬ್ಬದ ಆಚರಣೆ ಸಮಯದಲ್ಲಿ ಜನ್ಮದಿನದ ಶುಭಾಶಯಗಳು ಹಾಡನ್ನು ಹಾಡುವುದರಿಂದ ಕೊರೊನಾ ವೈರಸ್ ಬಹು ಬೇಗನೆ ಹರಡುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.
ಸ್ವೀಡನ್‌ನ ಲುಂಡ್ ವಿಶ್ವವಿದ್ಯಾಲಯದ ಏರೋಸಾಲ್ ಸಂಶೋಧಕರು ನಾವು ಜನ್ಮದಿನದ ಶುಭಾಶಯಗಳು ಹಾಡನ್ನು ಹಾಡುವಾಗ ಹೊರಸೂಸುವ ಕಣಗಳ ಪ್ರಮಾಣವನ್ನು ಅಧ್ಯಯನ ಮಾಡಿದ್ದು, ಅದು ಕೋವಿಡ್-19 ರ ಹರಡುವಿಕೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಕಂಡು ಬಂದಿದೆ.
ನಾವು ಹಾಡುವಾಗ ಎಷ್ಟು ವೈರಸ್ ಕಣಗಳು ಹೊರಸೂಸಲ್ಪಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಸಂಶೋಧಕರು 12 ಆರೋಗ್ಯವಂತ ಗಾಯಕರು ಮತ್ತು ಕೋವಿಡ್-19 ಹೊಂದಿರುವ ಇಬ್ಬರು ವ್ಯಕ್ತಿಗಳನ್ನು ಈ ಅಧ್ಯಯನದಲ್ಲಿ ಬಳಸಿಕೊಂಡು ಹಾಡಲು ವ್ಯವಸ್ಥೆ ಮಾಡಿದ್ದರು. ಮೇಣದ ಬತ್ತಿಗಳನ್ನು ಊದುವುದು ಭಾರಿ ಅಪಾಯಕಾರಿ.. ಜನ್ಮದಿನದ ಶುಭಾಶಯಗಳಂತಹ ಹಾಡುಗಳ ಹಾಡುವಿಕೆಯಲ್ಲಿ ವಿಶೇಷವಾಗಿ ಜೋರಾಗಿ ಮತ್ತು ಸ್ವರಭರಿತವಾಗಿ ಹಾಡುವುದರಿಂದ ಸುತ್ತಮುತ್ತಲಿನ ಗಾಳಿಯಲ್ಲಿ ಸಾಕಷ್ಟು ಹನಿಗಳು ಹರಡುತ್ತವೆ ಎಂದು ಅಧ್ಯಯನ ತೋರಿಸುತ್ತಿದೆ.
ಗಾಯಕರು ಫೇಸ್ ಮಾಸ್ಕ್ ಧರಿಸಿದರೆ ಮತ್ತು ಹಾಡುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರೆ ಹಾಡುವಿಕೆಯಿಂದಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ. ಜೊತೆಗೆ ಕೇಕ್ ಮೇಲೆ ಮೇಣದಬತ್ತಿಗಳನ್ನು ಊದುವುದು ವೈರಸ್ ಕಣಗಳು ವೇಗವಾಗಿ ಹರಡಲು ಇನ್ನಷ್ಟು ಸಹಾಯ ಮಾಡಿದಂತಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.
Published On - 2:46 pm, Thu, 10 September 20