2500 ವರ್ಷದಷ್ಟು ಹಳೆಯ 13 ಶವ ಪೆಟ್ಟಿಗೆಗಳು ದೊಡ್ಡ ಬಾವಿಯಲ್ಲಿ ಪತ್ತೆ!

2500 ವರ್ಷದಷ್ಟು ಹಳೆಯ 13 ಶವ ಪೆಟ್ಟಿಗೆಗಳು ದೊಡ್ಡ ಬಾವಿಯಲ್ಲಿ ಪತ್ತೆ!

ಈಜಿಪ್ಟ್‌ನ ಪ್ರವಾಸೋದ್ಯಮ ಮತ್ತು ಪ್ರಾಚೀನ ಸಚಿವಾಲಯವು ಸಕ್ಕರಾ ಪ್ರದೇಶದಲ್ಲಿ 2,500 ವರ್ಷ ಪುರಾತನವಾದ 13 ಮಾನವ ಶವಪೆಟ್ಟಿಗೆಗಳನ್ನು ಪತ್ತೆಹಚ್ಚಿದೆ.

ಸುಮಾರು 11 ಮೀಟರ್ ಆಳ ಹೊಂದಿರುವ ಬಾವಿಯಲ್ಲಿ ಬಣ್ಣದ ಮರದ ಶವಪೆಟ್ಟಿಗೆಗಳನ್ನು ಒಂದರ ಮೇಲೊಂದು ಜೋಡಿಸಲಾಗಿತ್ತು ಎಂದು ತಿಳಿದುಬಂದಿದೆ. ಮರದ ಪೆಟ್ಟಿಗೆಗಳ ಮೇಲೆ ಬಳಸಲಾಗಿದ್ದ ಕೆಲವು ಬಣ್ಣಗಳು ಇನ್ನೂ ಸಹ ಹಾಗೇ ಇವೆ.  ಜೊತೆಗೆ, ಸಮಾಧಿ ಸುರಂಗದ ಒಳಗೆ ಮೂರು ಗೂಡುಗಳು ಸಹ ಪತ್ತೆಯಾಗಿದೆ.

3,000 ವರ್ಷಗಳ ಕಾಲ, ಈಜಿಪ್ಟಿನವರು ಸತ್ತವರನ್ನು ಅಲ್ಲಿಯೇ ಸಮಾಧಿ ಮಾಡುತ್ತಿದ್ದರು..
ಒಂದು ಕಾಲದಲ್ಲಿ ಪ್ರಾಚೀನ ಈಜಿಪ್ಟ್​ನ ರಾಜಧಾನಿಯಾದ ಮೆಂಫಿಸ್‌ಗೆ ಸಮೀಪದ ಸಕ್ಕರಾ ಮಸಣವಾಗಿತ್ತು (ನೆಕ್ರೋಪೊಲಿಸ್) ಎಂದು ನಂಬಲಾಗಿದೆ. ಸುಮಾರು 3,000 ವರ್ಷಗಳ ಕಾಲ ಈಜಿಪ್ಟ್​ನವರು ಸತ್ತವರನ್ನು ಅಲ್ಲೇ ಸಮಾಧಿ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಹಾಗಾಗಿ, ಈ ಸ್ಥಳವು ಪುರಾತತ್ತ್ವ ಶಾಸ್ತ್ರದ ಪ್ರಮುಖ ತಾಣವಾಗಿದೆ.

ಶವಪೆಟ್ಟಿಗೆಯನ್ನು ಮರದಿಂದ ಮಾಡಲಾಗಿದ್ದು, ಒಣಗಿದ ಸ್ಥಳದಲ್ಲಿ ಹೂಳಲಾಗಿದೆಯೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೂ, ಇಲ್ಲಿ ಯಾರನ್ನು ಸಮಾಧಿ ಮಾಡಲಾಗಿದೆಯೆಂದು ನಮಗೆ ಹೇಳಲು ಸಾಧ್ಯವಾಗಲಿಲ್ಲ. ಆದರೆ ಈ  ಶೋಧ ಪ್ರಾಚೀನ ಈಜಿಪ್ಟ್​ನ ಅಂತ್ಯಕ್ರಿಯೆಯ ಪದ್ಧತಿಗಳ ಬಗ್ಗೆ ಇರುವ ತಿಳುವಳಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಶವಪೆಟ್ಟಿಗೆಗಳಲ್ಲಿ ಸಮಾಧಿ ಮಾಡಲಾಗಿರುವ ವ್ಯಕ್ತಿಗಳ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದರೆ, ಸ್ಥಳದಲ್ಲಿ ಉತ್ಖನನ ಕಾರ್ಯ ಮುಂದುವರೆದಂತೆ, ಈ ಮಾಹಿತಿಯೂ ಶೀಘ್ರದಲ್ಲೇ ಪತ್ತೆಯಾಗುವ ನಿರೀಕ್ಷೆಯಿದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Click on your DTH Provider to Add TV9 Kannada