ಇಡೀ ಬೆಂಗಳೂರು ಮತ್ತೆ ಸ್ತಬ್ಧ..!

ಬೆಂಗಳೂರು: ಈಗಾಗಲೇ ಕೊರೊನಾ ಲಾಕ್​ಡೌನ್​ನಿಂದ ಇಡೀ ರಾಜ್ಯವೇ ಪತರಗುಟ್ಟಿಹೋಗಿದೆ. ಅದ್ರಲ್ಲಂತೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನಕ್ಕೆ ಸಾವಿರ ಗಡಿ ಸಮೀಪಿಸುತ್ತಿದೆ. ಈ ಮಧ್ಯೆ ನಾಳೆ ವೀಕೆಂಡ್ ಇದೆ ಎಂದು ನಗರ ಬಿಟ್ಟು ಎಲ್ಲಾದ್ರು ಹೋಗೋಣ ಅಂನ್ಕೊಂಡಿದ್ರೆ, ನಿಮಗೆ ನಿರಾಸೆ ಗ್ಯಾರಂಟಿ. ಹೌದು, ನಾಳೆ ಶನಿವಾರದಿಂದ ವೀಕ್ ಎಂಡ್ ಲಾಕ್​ಡೌನ್ ಜಾರಿಯಾಗಲಿದೆ. ನಾಳೆ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕಂಪ್ಲೀಟ್​ ಲಾಕ್​ ಆಗಲಿದೆ. ಹಾಗಾಗಿ ಮನೆಯಿಂದ ಹೊರಬರುವ ಮುನ್ನ ಬೆಂಗಳೂರಿಗರೇ ಎಚ್ಚರಿಕೆಯಿಂದಿರಿ. ಯಾಕಂದ್ರೆ […]

ಇಡೀ ಬೆಂಗಳೂರು ಮತ್ತೆ ಸ್ತಬ್ಧ..!
ಭಾಸ್ಕರ್ ರಾವ್
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jul 03, 2020 | 2:35 PM

ಬೆಂಗಳೂರು: ಈಗಾಗಲೇ ಕೊರೊನಾ ಲಾಕ್​ಡೌನ್​ನಿಂದ ಇಡೀ ರಾಜ್ಯವೇ ಪತರಗುಟ್ಟಿಹೋಗಿದೆ. ಅದ್ರಲ್ಲಂತೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನಕ್ಕೆ ಸಾವಿರ ಗಡಿ ಸಮೀಪಿಸುತ್ತಿದೆ. ಈ ಮಧ್ಯೆ ನಾಳೆ ವೀಕೆಂಡ್ ಇದೆ ಎಂದು ನಗರ ಬಿಟ್ಟು ಎಲ್ಲಾದ್ರು ಹೋಗೋಣ ಅಂನ್ಕೊಂಡಿದ್ರೆ, ನಿಮಗೆ ನಿರಾಸೆ ಗ್ಯಾರಂಟಿ.

ಹೌದು, ನಾಳೆ ಶನಿವಾರದಿಂದ ವೀಕ್ ಎಂಡ್ ಲಾಕ್​ಡೌನ್ ಜಾರಿಯಾಗಲಿದೆ. ನಾಳೆ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕಂಪ್ಲೀಟ್​ ಲಾಕ್​ ಆಗಲಿದೆ. ಹಾಗಾಗಿ ಮನೆಯಿಂದ ಹೊರಬರುವ ಮುನ್ನ ಬೆಂಗಳೂರಿಗರೇ ಎಚ್ಚರಿಕೆಯಿಂದಿರಿ. ಯಾಕಂದ್ರೆ ಸುಖಾ ಸುಮ್ಮನೇ ಮನೆಯಿಂದ ಹೊರ ಬಂದ್ರೆ ಫೈನ್ ಬೀಳುತ್ತೆ. ಅಲ್ಲದೆ, ಲಿಮಿಟೆಡ್ ಕ್ರಾಸ್ ಮಾಡಿದ್ರೆ, ಕೇಸ್ ಸಹ ನಿಮ್ಮ ಮೇಲೆ ಬೀಳುತ್ತೆ. ಜೈಲಿಗೂ ಹಾಕುವ ಸಾಧ್ಯತೆಯಿದೆ.

ವೀಕೆಂಡ್ ಲಾಕ್​ಡೌನ್​ನಲ್ಲಿ ಏನಿರುತ್ತೆ?
ಕೊರೊನಾ ಕಂಟ್ರೋಲ್ ಮಾಡಲು ಸ್ಟ್ರಿಕ್ಟ್​ ವೀಕೆಂಡ್​ ಲಾಕ್​ಡೌನ್​ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶ ನೀಡಲಾಗಿದೆ. ಇನ್ನು ಲಾಕ್​ಡೌನ್​ ಅವಧಿಯಲ್ಲಿ ಏನಿರುತ್ತೆ ಅನ್ನೋದು ನೋಡೋದಾದ್ರೆ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ದಿನಸಿ ಅಂಗಡಿ, ಹೋಟೆಲ್​ನಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗುತ್ತೆ. ತರಕಾರಿ, ಮಾಂಸದ ಅಂಗಡಿ ಲಭ್ಯವಿರುತ್ತೆ. ಈ ಹಿಂದೆ ಇದ್ದಂತೆ ಲಾಕ್​ಡೌನ್ ಮುಂದುವರೆಯುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

Published On - 2:29 pm, Fri, 3 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us