
ಹಾಸನ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಹಾಸನ ಜಿಲ್ಲೆಯಲ್ಲಿ ಗಂಡ ಹೆಂಡತಿ ಜಗಳ ಗಂಡನ ಕೊಲೆಯಲ್ಲಿ ಅಂತ್ಯವಾದ ಘಟನೆ ಸಂಭವಿಸಿದೆ.
ಹೌದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಾಗಿನಕೆರೆ ಕಲ್ಲಹಳ್ಳಿಯಯಲ್ಲಿ ಈ ಘಟನೆ ಸಂಭವಿಸಿದೆ. ಅನೈತಿಕ ಸಂಬಂಧ ಹೊಂದಿದ ಆರೋಪದಿಂದ ಶುರವಾದ ಗಂಡ ಹೆಂಡತಿ ಜಗಳ ಪತ್ನಿಯಿಂದ ಪತಿ ಹತ್ಯೆಯಲ್ಲಿ ಅಂತ್ಯವಾಗಿದೆ. ಗಂಡನ ವರ್ತನೆಯಿಂದ ರೊಚ್ಚಿಗೆದ್ದ ಪತ್ನಿ ಇಂದ್ರಮ್ಮ ಮಚ್ಚಿನಿಂದ ಪತಿ ಚಂದ್ರೇಗೌಡ (52) ನನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ.
ಪತಿ ಆಗಿಂದಾಗ್ಗೆ ಮನೆಗೆ ಬಾರದೆ ಹೊರಗೆ ಇರುತ್ತಿದ್ದನಂತೆ. ಹೀಗಾಗಿ ನಿನಗೆ ಬೇರೆ ಅನೈತಿಕ ಸಂಬಂಧ ಇದೆ ಅನ್ನೋ ವಿಚಾರದಲ್ಲಿ ಪತಿ ಪತ್ನಿ ನಡುವೆ ಕಲಹ ಶುರವಾಗಿದೆ. ಆಗ ರೊಚ್ಚಿಗೆದ್ದ ಪತ್ನಿ ಮನೆಯಲ್ಲಿದ್ದ ಮಚ್ಚು ಎತ್ತಿಕೊಂಡು ಪತಿ ಮೇಲೆ ಹಲ್ಲೆ ಮಾಡಿದ್ದಾಳೆ. ಪತ್ನಿಯ ಮಚ್ಚಿನೇಟಿನಿಂದ ತೀವ್ರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬೇಲೂರು ಠಾಣೆ ಪೊಲೀಸರು ಪತ್ನಿ ಇಂದ್ರಮ್ಮನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಘಟನೆ ನಡೆದ ಸ್ಥಳವನ್ನು ಮಹಜರು ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.