ಸತ್ತ ಎಮ್ಮೆಗಾಗಿ ಗುಂಡಿ ತೋಡಿಸಿ.. ಗಂಡನನ್ನೇ ಹೂತು ಹಾಕಿದಳು ಐನಾತಿ ಮಳ್ಳಿ!

ಸತ್ತ ಎಮ್ಮೆಗಾಗಿ ಗುಂಡಿ ತೋಡಿಸಿ.. ಗಂಡನನ್ನೇ ಹೂತು ಹಾಕಿದಳು ಐನಾತಿ ಮಳ್ಳಿ!

ಬೆಳಗಾವಿ: ಪತಿಯೇ ಪರದೈವ ಅಂದರೆ ಪತಿ ದೇವರಿಗೆ ಸಮಾನ ಎಂಬ ಮಾತು ತಲೆತಲಾಂತರದಿಂದ ಕೇಳಿಕೊಂಡು ಬಂದಿದ್ದೇವೆ. ಆದರೆ, ನಾರಿ ಮುನಿದರೆ ತನ್ನ ಪತಿಯನ್ನು ಕೊಲೆಮಾಡಲು ಸಹ ಹಿಂಜರಿಯುವುದಿಲ್ಲ ಎಂಬ ಉದಾಹರಣೆ ಸಹ ಸಾಕಷ್ಟು ನೋಡಿದ್ದೇವೆ. ಅಂತೆಯೇ, ಇಲ್ಲೊಬ್ಬಳು ಐನಾತಿ ಲೇಡಿ ತನ್ನ ಎಮ್ಮೆ ಸತ್ತಿದೆ ಅಂತಾ ಗುಂಡಿ ತೆಗೆಸಿ ಕೊಲೆಗೈದ ಗಂಡನ ಶವವನ್ನು ಹೂಳಿರುವ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ ನಿವಾಸಿಯಾದ 35 ವರ್ಷದ ಸಚಿನ್ ಭೋಪಳೆಯನ್ನು ಆತನ ಪತ್ನಿ ಅನಿತಾ(35) ತಾನೇ ಕೊಲೆಗೈದಿದ್ದಾಳೆ. ನಂತರ ತನ್ನ ಸಹೋದರನ ಜೊತೆ ಸೇರಿ ಎಮ್ಮೆ ಸತ್ತಿದೆ ಎಂದು ಹೇಳಿ ರಾತ್ರೋರಾತ್ರಿ JCB ತರಿಸಿ ಗುಂಡಿ ತೋಡಿಸಿದ್ದಾಳೆ. ಬಳಿಕ ಪತಿ ಸಚಿನ್​ ಶವವನ್ನು ಅದರಲ್ಲಿ ಹೂತು ಹಾಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಹೂತಿದ್ದ ಶವವನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನಿನ್ನೆ ಹೊರತೆಗೆದಿದ್ದಾರೆ. ತನ್ನ ಸಹೋದರನ ಜೊತೆ ಸೇರಿ ಗಂಡನಿಗೆ ಗುಂಡಿ ತೋಡಿದ ಪತ್ನಿ ಸೆರೆಗೆ ನಿಪ್ಪಾಣಿ ಪೊಲೀಸರು ಬಲೆ ಬೀಸಿದ್ದಾರೆ.

Click on your DTH Provider to Add TV9 Kannada