ತುರಿಯೋ ಮಣೆಯಿಂದ ಗಂಡ, ಅತ್ತೆ-ಮಾವನ ಮೇಲೆ ಭೀಕರ ಹಲ್ಲೆ: ಪತಿ ಸಾವು, ಅತ್ತೆ-ಮಾವ ಗಂಭೀರ
ಮಂಡ್ಯ: ಪತ್ನಿಯಿಂದ ಗಂಡ ಹಾಗೂ ಅತ್ತೆ, ಮಾವನ ಮೇಲೆ ಹಲ್ಲೆ ನಡೆದಿದ್ದು ಹಲ್ಲೆಗೊಳಗಾಗಿದ್ದ ಪತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ನಡೆದಿದೆ. ನಾಗಮಣಿ ತನ್ನ ಪತಿ ಹಾಗೂ ಅತ್ತೆ ಮಾವನ ಮಾರಣಾಂತಿಕೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಮೂವರ ಮೇಲೂ ಹಲ್ಲೆ ನಡೆಸಿದ್ದ ನಾಗಮಣಿ ಎರಡು ದಿನಗಳ ಹಿಂದೆ ತುರಿಯುವ ಮಣೆಯಿಂದ ಗಂಡ ನಾಗರಾಜು(43), ಅತ್ತೆ ಕುಳಮ್ಮ(60) ಮತ್ತು ಮಾವ ವೆಂಕಟೇಗೌಡ(70) ಮೇಲೆ ಹಲ್ಲೆ ಮಾಡಿದ್ದಾಳೆ. […]
ಮಂಡ್ಯ: ಪತ್ನಿಯಿಂದ ಗಂಡ ಹಾಗೂ ಅತ್ತೆ, ಮಾವನ ಮೇಲೆ ಹಲ್ಲೆ ನಡೆದಿದ್ದು ಹಲ್ಲೆಗೊಳಗಾಗಿದ್ದ ಪತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ನಡೆದಿದೆ. ನಾಗಮಣಿ ತನ್ನ ಪತಿ ಹಾಗೂ ಅತ್ತೆ ಮಾವನ ಮಾರಣಾಂತಿಕೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಮೂವರ ಮೇಲೂ ಹಲ್ಲೆ ನಡೆಸಿದ್ದ ನಾಗಮಣಿ ಎರಡು ದಿನಗಳ ಹಿಂದೆ ತುರಿಯುವ ಮಣೆಯಿಂದ ಗಂಡ ನಾಗರಾಜು(43), ಅತ್ತೆ ಕುಳಮ್ಮ(60) ಮತ್ತು ಮಾವ ವೆಂಕಟೇಗೌಡ(70) ಮೇಲೆ ಹಲ್ಲೆ ಮಾಡಿದ್ದಾಳೆ. ಹಲ್ಲೆಗೊಳಗಾಗಿದ್ದ ಮೂವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ನಾಗರಾಜು ಸಾವನ್ನಪ್ಪಿದ್ದಾನೆ. ಇತ್ತ, ಕುಳಮ್ಮ ಮತ್ತು ವೆಂಕಟೇಗೌಡರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಇನ್ನ ಪ್ರಕರಣದ ಆರೋಪಿ ನಾಗಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.
Published On - 2:54 pm, Wed, 21 October 20