ವರುಣನ ನರ್ತನ: ಪಾತಾಳ ಕಚ್ಚಿದ ಈರುಳ್ಳಿ ಬೆಳೆ, ಗಗನದತ್ತ ಚಿಮ್ಮಲಿದೆ ಬೆಲೆ
ಗದಗ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಈರುಳ್ಳಿ ಬೆಳೆ ಹಾನಿಯಾಗಿದೆ. ಸಾಲಾಸೂಲ ಮಾಡಿ ಬೆಳೆದ ಈರುಳ್ಳಿ ನೀರು ಪಾಲಾಗಿದೆ ಎಂದು ರೈತ ಗೋಳಾಡಿದ್ದಾನೆ. ಹೊಂಬಳ ಗ್ರಾಮದ ರೈತ ಸಿದ್ದಪ್ಪ ನಾಲ್ಕುವರೆ ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾನೆ. ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಕಷ್ಟಪಟ್ಟು ಬೆವರು ಸುರಿಸಿ ರೈತರು ಬೆಳೆದ ಬೆಳೆ ನಾಶವಾಗುತ್ತಿದೆ. ಕಟಾವು ಮಾಡಿ ಜಮೀನನಲ್ಲಿ ಇಟ್ಟಿದ ಈರುಳ್ಳಿ ಕೊಳೆತು ನಾರುತ್ತಿದೆ. ಮಳೆಗೆ ಹಾನಿಯಾದ ಈರುಳ್ಳಿ ಉಳಿಸಿಕೊಳ್ಳಲು ರೈತ ಪರದಾಡ್ತಿದ್ದಾನೆ. ಇಷ್ಟೇಲ್ಲಾ ಹಾನಿ ಸಂಭವಿಸಿದ್ರು […]
ಗದಗ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಈರುಳ್ಳಿ ಬೆಳೆ ಹಾನಿಯಾಗಿದೆ. ಸಾಲಾಸೂಲ ಮಾಡಿ ಬೆಳೆದ ಈರುಳ್ಳಿ ನೀರು ಪಾಲಾಗಿದೆ ಎಂದು ರೈತ ಗೋಳಾಡಿದ್ದಾನೆ. ಹೊಂಬಳ ಗ್ರಾಮದ ರೈತ ಸಿದ್ದಪ್ಪ ನಾಲ್ಕುವರೆ ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾನೆ.
ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಕಷ್ಟಪಟ್ಟು ಬೆವರು ಸುರಿಸಿ ರೈತರು ಬೆಳೆದ ಬೆಳೆ ನಾಶವಾಗುತ್ತಿದೆ. ಕಟಾವು ಮಾಡಿ ಜಮೀನನಲ್ಲಿ ಇಟ್ಟಿದ ಈರುಳ್ಳಿ ಕೊಳೆತು ನಾರುತ್ತಿದೆ. ಮಳೆಗೆ ಹಾನಿಯಾದ ಈರುಳ್ಳಿ ಉಳಿಸಿಕೊಳ್ಳಲು ರೈತ ಪರದಾಡ್ತಿದ್ದಾನೆ. ಇಷ್ಟೇಲ್ಲಾ ಹಾನಿ ಸಂಭವಿಸಿದ್ರು ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರ್ತಿಲ್ಲ. ರೈತರ ಕಷ್ಟಕ್ಕೆ ನೆರವಾಗುತ್ತಿಲ್ಲ. ಹೀಗಾಗಿ ಗ್ರಾಮದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಗದಗ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಹಾನಿಯಾಗಿದೆ.
ಉತ್ತರ ಕರ್ನಾಟಕದಲ್ಲಿ ವರುಣನ ಅಬ್ಬರಕ್ಕೆ ರೈತರು ಬೆಳೆದ ಬೆಳೆ ಹಾನಿಯಾಗುತ್ತಿದೆ. ಅದರಲ್ಲೂ ಈರುಳ್ಳಿ ಬೆಳೆ ಮೇಲೆ ಭಾರಿ ಪರಿಣಾಮ ಬಿರಿದೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ. 35 ರೂಪಾಯಿಗೆ ಸಿಗುತ್ತಿದ್ದ ಈರುಳ್ಳಿ ಕೆ.ಜಿ 65 ರೂ ಆಗಿದೆ. ಈಗ ಇನ್ನಷ್ಟು ಬೆಲೆ ಏರಿಕೆಯಾಗುವ ಸಂಭವವಿದೆ.