AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂಗ್ರೆಸ್‌ನವ್ರು ಸುಮ್ಮನೆ ಪ್ರಚಾರ ಮಾಡುತ್ತಿಲ್ಲ.. ಹೊರಗಡೆಯಿಂದ 4,000 ಜನರು ಬಂದಿದ್ದಾರೆ’

ಬೆಂಗಳೂರು: ವೋಟರ್ ಲಿಸ್ಟ್ ಇನ್ನೂ ಬಂದೇ ಇಲ್ಲ. ಆಗಲೇ, ಪ್ರತಿ ಮನೆಗೆ ಹೋಗಿ ಜಾತಿಯನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್‌ನವರು ಸುಮ್ಮನೆ ಪ್ರಚಾರ ಮಾಡುತ್ತಿಲ್ಲ. ಹೊರಗಡೆಯಿಂದ 4 ಸಾವಿರ ಜನರು ಬಂದಿದ್ದಾರೆ ಎಂದು ಟಿವಿ 9ಗೆ ರಾಜರಾಜೇಶ್ವರಿನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ. ಬೆಂಗಳೂರು ನಗರ ನೆಮ್ಮದಿಯಾಗಿದೆ. ಕಾಂಗ್ರೆಸ್‌ನವರು ಮತಯಾಚನೆ ಮಾಡಲಿ. ನನ್ನ ವಿರುದ್ಧ ಬೇಕಾದಷ್ಟು ವಾಗ್ದಾಳಿ ನಡೆಸಲಿ. ನಾನು ನ್ಯಾಯಯುತವಾಗಿ ಚುನಾವಣೆ ಎದುರಿಸುತ್ತಿದ್ದೇನೆ. ನನ್ನ ಕಡೆಯಿಂದ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದು […]

‘ಕಾಂಗ್ರೆಸ್‌ನವ್ರು ಸುಮ್ಮನೆ ಪ್ರಚಾರ ಮಾಡುತ್ತಿಲ್ಲ.. ಹೊರಗಡೆಯಿಂದ 4,000 ಜನರು ಬಂದಿದ್ದಾರೆ’
KUSHAL V
|

Updated on:Oct 21, 2020 | 2:26 PM

Share

ಬೆಂಗಳೂರು: ವೋಟರ್ ಲಿಸ್ಟ್ ಇನ್ನೂ ಬಂದೇ ಇಲ್ಲ. ಆಗಲೇ, ಪ್ರತಿ ಮನೆಗೆ ಹೋಗಿ ಜಾತಿಯನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್‌ನವರು ಸುಮ್ಮನೆ ಪ್ರಚಾರ ಮಾಡುತ್ತಿಲ್ಲ. ಹೊರಗಡೆಯಿಂದ 4 ಸಾವಿರ ಜನರು ಬಂದಿದ್ದಾರೆ ಎಂದು ಟಿವಿ 9ಗೆ ರಾಜರಾಜೇಶ್ವರಿನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ. ಬೆಂಗಳೂರು ನಗರ ನೆಮ್ಮದಿಯಾಗಿದೆ. ಕಾಂಗ್ರೆಸ್‌ನವರು ಮತಯಾಚನೆ ಮಾಡಲಿ. ನನ್ನ ವಿರುದ್ಧ ಬೇಕಾದಷ್ಟು ವಾಗ್ದಾಳಿ ನಡೆಸಲಿ. ನಾನು ನ್ಯಾಯಯುತವಾಗಿ ಚುನಾವಣೆ ಎದುರಿಸುತ್ತಿದ್ದೇನೆ. ನನ್ನ ಕಡೆಯಿಂದ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದು ಕೇಳುತ್ತಿದ್ದೇನೆ. ನಾನು ಶಾಂತಿಯುತವಾಗಿ ಚುನಾವಣೆ ಎದುರಿಸುತ್ತಿದ್ದೇನೆ ಎಂದು ಮುನಿರತ್ನ ಹೇಳಿದ್ದಾರೆ.

‘ಕೈ’ ಕಾರ್ಯಕರ್ತರ ಮೇಲೆ ಬಿಜೆಪಿಯವರಿಂದ ಹಲ್ಲೆ ಆರೋಪ ಮುನಿರತ್ನ ಬೆಂಬಲಿಗರ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹೇಳಿಕೆಕೊಟ್ಟಿದ್ದಾರೆ. ‘ಕೈ’ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಚುನಾವಣಾ ಪ್ರಚಾರದ ವೇಳೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್​ ಕಾರ್ಯಕರ್ತರ ಪ್ರಚಾರಕ್ಕೆ ಅಡ್ಡಿಪಡಿಸಿ ವೋಟರ್​ ಲಿಸ್ಟ್​ ಹರಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ವೇಲು 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಜೊತೆ ಬಂದಿದ್ದರು ಎಂದು ಹೇಳಲಾಗಿದೆ.

ಈ ನಿಟ್ಟಿನಲ್ಲಿ, ನಂದಿನಿ ಲೇಔಟ್ ಪೊಲೀಸ್​​ ಠಾಣೆಗೆ ದೂರು ದಾಖಲಾಗಿದೆ. ಜೊತೆಗೆ, ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಠಾಣೆ ಬಳಿ ಪ್ರತಿಭಟನೆ ಸಹ ನಡೆಯಿತು. ಮುನಿರತ್ನ ಹಾಗೂ ವೇಲು ನಾಯ್ಕರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಎರಡೂ ಬಣಗಳಿಂದ ಘೋಷಣೆ, ಕೂಗಾಟ ಸ್ವಲ್ಪ ಹೊತ್ತಿನ ಬಳಿಕ ಸ್ಟೇಷನ್ ಎದುರು ಬಿಜೆಪಿ ಕಾರ್ಯಕರ್ತರು ಸಹ ಜಮಾಯಿಸಿದರು. ಎರಡೂ ಬಣಗಳು ಘೋಷಣೆ ಕೂಗುತ್ತ ಗದ್ದಲ ಎಬ್ಬಿಸಿದರು. ಕಾಂಗ್ರೆಸ್ ಕಾರ್ಯಕರ್ತರಿಂದ ಡಿ.ಕೆ. ಡಿ.ಕೆ. ಎಂದು ಘೋಷಣೆ ಕೂಗಿದರೆ ಬಿಜೆಪಿ ಕಾರ್ಯಕರ್ತರು ಮುನಿರತ್ನ ಪರ ಘೋಷಣೆ ಕೂಗಿದರು. ಎರಡು ಕಡೆಯ ಕಾರ್ಯಕರ್ತರ ತಡೆಯಲು ಪೊಲಿಸರ ಪರದಾಡುವ ಸ್ಥಿತಿ ಎದುರಾಯ್ತ.

‘ಅಣ್ಣ ಕಾಯ್ತವ್ರೆ ಅಂತಾ ಮುನಿರತ್ನಗೆ ಹೇಳಿ’ ಅಣ್ಣ ಕಾಯ್ತವ್ರೆ ಅಂತಾ ಮುನಿರತ್ನಗೆ ಹೇಳಿ ಎಂದು ಆಶ್ರಯ ನಗರದ ಪ್ರಚಾರದಲ್ಲಿ ಮುನಿರತ್ನಗೆ ಸಂಸದ ಡಿ.ಕೆ. ಸುರೇಶ್ ಬಹಿರಂಗವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಚುನಾವಣೆ ಅದರ ಪಾಡಿಗೆ ನಡೀಬೇಕು. ನಮ್ಮವರನ್ನು ಹೆದರಿಸೋದು, ಬೆದರಿಸೋದು ಮಾಡಿದ್ರೆ ಪೊಲೀಸ್ ಸ್ಟೇಷನ್ ಮುಂದೆ ರಾಜಕೀಯ ನಡೆಯಬೇಕಾಗುತ್ತೆ. ಮುನಿರತ್ನಗೆ ಹೇಳಿ ಅಣ್ಣ ಕಾಯ್ತವ್ರೆ ಅಂತಾ ಸಂಸದ ಡಿ.ಕೆ.ಸುರೇಶ್​ ಭಾಷಣದ ವೇಳೆ ಹೇಳಿದ್ದಾರೆ. ಏನಾದ್ರೂ ಹೆಚ್ಚು ಕಮ್ಮಿ ಮಾಡಿದ್ರೆ ನಾನು ಕಾಯ್ತಿದ್ದೀನಿ ಎಂದು ಪ್ರಚಾರ ಭಾಷಣದ ವೇಳೆ ಡಿ.ಕೆ.ಸುರೇಶ್ ಮುನಿರತ್ನಗೆ ಎಚ್ಚರಿಕೆ ನೀಡಿದ್ದಾರೆ.

Published On - 2:24 pm, Wed, 21 October 20

Follow Us
KUSHAL V
KUSHAL V
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!