3 ಸೋಂಕಿತರು, ಒಬ್ಬರು ಬಲಿ: ಕುಟುಂಬದ ನರಳಾಟ, BBMP ನಿರ್ಲಕ್ಷ್ಯ ಜಗಜ್ಜಾಹೀರು

[lazy-load-videos-and-sticky-control id=”dB6iPPjwVbE”] ಬೆಂಗಳೂರು: ಒಂದು ಮನೆಯಲ್ಲಿ ಮೂರು ಜನ‌ ಕೊರೊನಾ ರೋಗಿಗಳ ರೋಧನೆ, ಕಳೆದ ಮಂಗಳವಾರದಿಂದಲೂ ಬಿಬಿಎಂಪಿ ಸಹಾಯವಾಣಿಗೆ ಫೋನ್ ಮಾಡಿದ್ರೂ ಯಾರೂ ಸರಿಯಾಗಿ ಸ್ಪಂದಿಸದ ಕಾರಣ ಬರೊಬ್ಬರಿ ನಾಲ್ಕು ದಿನಗಳ ಕಾಲ ಮಹಿಳೆಯೊಬ್ಬರು ನರಳಾಡಿ ಪ್ರಾಣ ಬಿಟ್ಟ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ. ನಮ್ಮ ಮನೆಯಲ್ಲಿ ಮೂರು ಜನ ಇದ್ದೀವಿ, ನಮಗೆ ಕೊರೊನಾ ಪಾಸಿಟಿವ್ ಆಗಿದೆ. ದಯವಿಟ್ಟು ನಮ್ಮನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದ್ರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಕರೆಗೆ ಸರಿಯಾಗಿ ಸ್ಪಂದಿಸದೆ, ಆಸ್ಪತ್ರೆಗಳಲ್ಲಿ ಬೆಡ್ […]

3 ಸೋಂಕಿತರು, ಒಬ್ಬರು ಬಲಿ: ಕುಟುಂಬದ ನರಳಾಟ, BBMP ನಿರ್ಲಕ್ಷ್ಯ ಜಗಜ್ಜಾಹೀರು
ಸಾಧು ಶ್ರೀನಾಥ್​

Updated on: Jul 18, 2020 | 2:40 PM

[lazy-load-videos-and-sticky-control id=”dB6iPPjwVbE”]

ಬೆಂಗಳೂರು: ಒಂದು ಮನೆಯಲ್ಲಿ ಮೂರು ಜನ‌ ಕೊರೊನಾ ರೋಗಿಗಳ ರೋಧನೆ, ಕಳೆದ ಮಂಗಳವಾರದಿಂದಲೂ ಬಿಬಿಎಂಪಿ ಸಹಾಯವಾಣಿಗೆ ಫೋನ್ ಮಾಡಿದ್ರೂ ಯಾರೂ ಸರಿಯಾಗಿ ಸ್ಪಂದಿಸದ ಕಾರಣ ಬರೊಬ್ಬರಿ ನಾಲ್ಕು ದಿನಗಳ ಕಾಲ ಮಹಿಳೆಯೊಬ್ಬರು ನರಳಾಡಿ ಪ್ರಾಣ ಬಿಟ್ಟ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ.

ನಮ್ಮ ಮನೆಯಲ್ಲಿ ಮೂರು ಜನ ಇದ್ದೀವಿ, ನಮಗೆ ಕೊರೊನಾ ಪಾಸಿಟಿವ್ ಆಗಿದೆ. ದಯವಿಟ್ಟು ನಮ್ಮನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದ್ರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಕರೆಗೆ ಸರಿಯಾಗಿ ಸ್ಪಂದಿಸದೆ, ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ, ವೆಂಟಿಲೇಶನ್ ಇಲ್ಲ ಅಂತಾ ಸಬೂನು ಹೇಳಿ ಹೇಳಿ, ನಾಲ್ಕು ದಿನ‌ ಸೋಂಕಿತ ಕುಟುಂಬವನ್ನು ಸತಾಯಿಸಿದ್ದಾರೆ.

ಇದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನಿನ್ನೆ ತೀವ್ರ ಉಸಿರಾಟದ ತೊಂದರೆಯಾಗಿ ವಿವಿಪುರಂ ಮನೆಯಲ್ಲಿಯೇ ಮಹಿಳೆ ಪ್ರಾಣಬಿಟ್ಟಿದ್ದಾರೆ. ಮಗ, ಸೊಸೆಗೂ ಕೊರೊನಾ‌ ಪಾಸಿಟಿವ್ ಇದ್ದ ಕಾರಣ ಕೊನೆಗೆ ಬಿಬಿಎಂಪಿ ಅಧಿಕಾರಿಗಳೇ ಮೃತ ದೇಹವನ್ನ ಅನಾಥರಂತೆ ಸಂಸ್ಕಾರ ಮಾಡಿದ್ದಾರೆ. ಬಿಬಿಎಂಪಿ ‌ಹಾಗೂ ಸರ್ಕಾರ ಸ್ವಲ್ಪ ಎಚ್ಚೆತ್ತುಕೊಂಡಿದ್ರೆ ನಮ್ಮ ತಾಯಿ ಬದುಕುತ್ತಿದ್ದರೆಂದು ಸೋಂಕಿತ ಮಗ ತಮ್ಮ ಅಳಲ್ಲನ್ನು ತೊಡಿಕೊಂಡಿದ್ದಾರೆ.

Published On - 10:56 am, Sat, 18 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us