ಸ್ಕೂಟರ್ ಕಳವು ವಿಚಾರ ತಿಳಿದ ಮಹಿಳೆಗೆ ಹೃದಯಾಘಾತ, ಎಲ್ಲಿ?

ಬೆಂಗಳೂರು: ತನ್ನ ಸ್ಕೂಟರ್ ಕಳ್ಳತನವಾಗಿರುವ ವಿಚಾರ ತಿಳಿದ ಮಹಿಳೆಗೆ ಹೃದಯಾಘಾತವಾಗಿದ್ದು, ಸದ್ಯ ಮಹಿಳೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕತ್ರಿಗುಪ್ಪೆಯ ಕಾವೇರಿ ನಗರದ ನಿವಾಸಿಯಾಗಿರುವ ಮಮತಾ ಎಂಬ ಮಹಿಳೆ ಜಯನಗರದಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಜುಲೈ 13ರಂದು ವಿಠ್ಠಲನಗರದ ಗೌರಿಶಂಕರ ದೇವಸ್ಥಾನಕ್ಕೆ ಮಮತಾ ಪೂಜೆಗೆಂದು ತಮ್ಮ ಸ್ಕೂಟರ್ ನಲ್ಲಿ ತೆರಳಿದ್ದಾರೆ. ತಮ್ಮ ಸ್ಕೂಟರ್ ಅನ್ನು ದೇವಸ್ಥಾನದ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಿ ಒಳಹೋಗಿದ್ದಾರೆ. ದೇವಸ್ಥಾನದ ಒಳಗೆ ಪೂಜೆಯಲ್ಲಿ ನಿರತರಾಗಿದ್ದ […]

ಸ್ಕೂಟರ್ ಕಳವು ವಿಚಾರ ತಿಳಿದ ಮಹಿಳೆಗೆ ಹೃದಯಾಘಾತ, ಎಲ್ಲಿ?

Updated on: Jul 28, 2020 | 12:40 PM

ಬೆಂಗಳೂರು: ತನ್ನ ಸ್ಕೂಟರ್ ಕಳ್ಳತನವಾಗಿರುವ ವಿಚಾರ ತಿಳಿದ ಮಹಿಳೆಗೆ ಹೃದಯಾಘಾತವಾಗಿದ್ದು, ಸದ್ಯ ಮಹಿಳೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕತ್ರಿಗುಪ್ಪೆಯ ಕಾವೇರಿ ನಗರದ ನಿವಾಸಿಯಾಗಿರುವ ಮಮತಾ ಎಂಬ ಮಹಿಳೆ ಜಯನಗರದಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಜುಲೈ 13ರಂದು ವಿಠ್ಠಲನಗರದ ಗೌರಿಶಂಕರ ದೇವಸ್ಥಾನಕ್ಕೆ ಮಮತಾ ಪೂಜೆಗೆಂದು ತಮ್ಮ ಸ್ಕೂಟರ್ ನಲ್ಲಿ ತೆರಳಿದ್ದಾರೆ. ತಮ್ಮ ಸ್ಕೂಟರ್ ಅನ್ನು ದೇವಸ್ಥಾನದ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಿ ಒಳಹೋಗಿದ್ದಾರೆ.

ದೇವಸ್ಥಾನದ ಒಳಗೆ ಪೂಜೆಯಲ್ಲಿ ನಿರತರಾಗಿದ್ದ ಮಹಿಳೆಯ ಸ್ಕೂಟರ್ ಕೀ ಯನ್ನು ಎಗರಿಸಿದ ಕಳ್ಳ ಹೊರಗೆ ನಿಲ್ಲಿಸಿದ ಸ್ಕೂಟರ್ ಕದ್ದು ಪರಾರಿಯಾಗಿದ್ದಾನೆ. ಪೂಜೆ ಮುಗಿಸಿ ಹೊರಬಂದ ಮಹಿಳೆಗೆ ತನ್ನ ಸ್ಕೂಟರ್ ಕಾಣದೇ ಹೋದಾಗ, ದೇವಸ್ಥಾನದ ಎದುರಿಗಿರುವ ಅಂಗಡಿಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ವೇಳೆ ಕಳ್ಳನ ಕರಾಮತ್ತು ತಿಳಿದಿದೆ.

ತನ್ನ ಸ್ಕೂಟರ್ ಕಳ್ಳತನ ವಾಗಿರುವುದರಿಂದ ತೀವ್ರ ಆತಂಕಕ್ಕೆ ಒಳಗಾದ ಮಹಿಳೆಗೆ ಹೃದಯಾಘಾತವಾಗಿದ್ದು, ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

Published On - 11:37 am, Tue, 28 July 20