ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಬೆಂಗಳೂರಿಗರನ್ನ ಬೆಚ್ಚಿಬೀಳುವಂತೆ ಮಾಡಿದೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ ಅರ್ಧದಷ್ಟು ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಈ ರೀತಿ ಕೊರೊನಾ ರಾಜಧಾನಿಯನ್ನು ಆವರಿಸಿಕೊಂಡಿದೆ.
ಬಡವ ಶ್ರೀಮಂತ ಎನ್ನದೆ ದೇಹ ಸೇರುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಪುರುಷರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಕೊರೊನಾ ಸೋಂಕು ಮಹಿಳೆಯರನ್ನು ಬಿಟ್ಟು ಹೆಚ್ಚಾಗಿ ಪುರುಷರನ್ನೇ ಅಟ್ಯಾಕ್ ಮಾಡುತ್ತಿದೆ.
ಬೆಂಗಳೂರಿನಲ್ಲಿ ಈವರೆಗೆ 46,923 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 29,060 ಕೊರೊನಾ ಸೋಂಕಿತರು ಪುರುಷರೇ ಆಗಿದ್ದಾರೆ. ಜೊತೆಗೆ ಕೊರೊನಾಗೆ ಬಲಿಯಾದವರಲ್ಲೂ ಪುರುಷರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನಲ್ಲಿ ಸೋಂಕಿಗೆ ಒಟ್ಟು 918 ಜನ ಬಲಿಯಾಗಿದ್ದಾರೆ. 918 ಮೃತರ ಪೈಕಿ 623 ಪುರುಷ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಯಲ್ಲಿ ದಾಖಲಾಗಿರುವ ಕೇಸ್ಗಳ ವಿವರ