AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದುವೆಯಾದ ಗಂಡ ನಾಪತ್ತೆ: ಅನಾಥ ಪ್ರಜ್ಞೆ ಅನುಭವಿಸುತ್ತಿರುವ ಪತ್ನಿ

ಫೇಸ್​ಬುಕ್​ನಲ್ಲಿ ಪರಿಚಿತನಾಗಿದ್ದ ಸುಳ್ಯದ ಇಬ್ರಾಹಿಂ ಖಲೀಲ್ ಎಂಬಾತನನ್ನು ಪ್ರೀತಿಸಿದ್ದ ಶಾಂತಿ, ಮೊದಲ ಪತಿಯನ್ನು ತೊರೆದಿದ್ದರು. ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರವಾಗಿ, ಜೂಬಿ ಆಸಿಯಾ ಎಂದು ಹೆಸರು ಬದಲಿಸಿಕೊಂಡರು. 2017ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಿಖಾ ಆಗಿದ್ದರು.

ಇಬ್ರಾಹಿಂ ಖಲೀಲ್ - ಆಸಿಯಾ
guruganesh bhat
| Edited By: |

Updated on:Nov 26, 2020 | 4:09 PM

Share

ದಕ್ಷಿಣ ಕನ್ನಡ: ಪ್ರೀತಿಸಿ ಮದುವೆಯಾಗಿದ್ದ ಗಂಡ ಕೈಬಿಟ್ಟ ಕಾರಣ ಕೇರಳ ರಾಜ್ಯದ ಕಣ್ಣೂರು ಮೂಲದ ಯುವತಿ ಅಕ್ಷರಶಃ ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಇತ್ತ ಗಂಡನ ಮನೆಯಿಂದ ಹೊರದೂಡಿಸಿಕೊಂಡು, ಅತ್ತ ತವರು ಮನೆಗೂ ಹೋಗಲು ಸಾಧ್ಯವಾಗದೆ ಸುಳ್ಯ ಪಟ್ಟಣದ ಲಾಡ್ಜ್​ನಲ್ಲಿ ದಿನದೂಡುತ್ತಿದ್ದಾರೆ.

ಫೇಸ್​ಬುಕ್​ನಲ್ಲಿ ಪರಿಚಿತನಾಗಿದ್ದ ಸುಳ್ಯದ ಇಬ್ರಾಹಿಂ ಖಲೀಲ್ ಎಂಬಾತನನ್ನು ಪ್ರೀತಿಸಿದ್ದ ಶಾಂತಿ, ಮೊದಲ ಪತಿಯನ್ನು ತೊರೆದಿದ್ದರು. ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರವಾಗಿ, ಜೂಬಿ ಆಸಿಯಾ ಎಂದು ಹೆಸರು ಬದಲಿಸಿಕೊಂಡರು. 2017ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಿಖಾ ಆಗಿದ್ದರು.

ಮದುವೆಯಾದ ಮೂರು ವರ್ಷಗಳ ನಂತರ ಇಬ್ರಾಹಿಂ ಏಕಾಏಕಿ ಮನೆಯಿಂದ ನಾಪತ್ತೆಯಾದ. ಅನಂತರ ಇಬ್ರಾಹಿಂ ಮನೆಯವರು ಆಸಿಯಾಳನ್ನು ಮನೆಯಿಂದ ಹೊರಗೆ ಹಾಕಿದರು. ಅತ್ತ ಆಸಿಯಾ ತವರಿಗೂ ಹೋಗಲು ಆಗದೆ, ಇತ್ತ ಅತ್ತೆ ಮನೆಯಲ್ಲೂ ಬದುಕಲು ಅವಕಾಶ ಸಿಗದೆ ಅಸಿಯಾ ಇದೀಗ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಇಬ್ರಾಹಿಂನನ್ನು ಹುಡುಕಿಕೊಡುವಂತೆ ಮುಸ್ಲಿಂ ನಾಯಕರಲ್ಲಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಕೊನೇ ಪ್ರಯತ್ನವೆಂಬಂತೆ ಈಗ ಮಾನವ ಹಕ್ಕು ಸಂಘಟನೆಯ ಮೊರೆಹೋಗಿದ್ದೇನೆ. ಶುಕ್ರವಾರದವರೆಗೆ ಕಾಯುತ್ತೇನೆ. ಗಂಡನ ಸುಳಿವು ಸಿಗದಿದ್ದರೆ ಆತ್ಮಹತ್ಯೆಯ ಹಾದಿ ಹಿಡಿಯುತ್ತೇನೆ ಎಂದು ಅಸಿಯಾ ಟಿವಿ9 ಪ್ರತಿನಿಧಿ ಎದುರು ಅಳಲು ತೋಡಿಕೊಂಡರು.

Published On - 12:09 pm, Thu, 26 November 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ