
ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಸೈಡರ್ ಪೋರ್ಜ್ ಕಂಪನಿ ಲಾಕ್‌ಡೌನ್‌ಗೆ ಮುಂದಾಗಿದೆ. ಆದರೆ ಲಾಕ್ಡೌನ್ ಮಾಡುವುದರಿಂದ ನಮ್ಮ ಸಂಸಾರ ಬೀದಿಗೆ ಬೀಳುತ್ತೆ ಎಂದು ಕಾರ್ಮಿಕರು ಕೆಲಸಕ್ಕೆ ಬಂದಿದ್ದಾರೆ.
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೈಡರ್ ಪೋರ್ಜ್ ಕಂಪನಿ ಲಾಕ್‌ಡೌನ್‌ಗೆ ಮುಂದಾಗಿದೆ. ಅಲ್ಲದೆ ಆಡಳಿತ ಮಂಡಳಿಗೆ ಕಾರ್ಮಿಕರು ಹಲವು ಬೇಡಿಕೆಗಳನ್ನು ಇಟ್ಟಿದ್ದರು. ಇದೇ ನೆಪ ಮಾಡಿಕೊಂಡು ಲಾಕ್‌ಡೌನ್‌ಗೆ ಚಿಂತನೆ ನಡೆಸಿದೆ.
ಆದರೆ ಕೆಲಸಕ್ಕೆ ಬಂದ ಕಾರ್ಮಿಕರನ್ನ ಕಂಪನಿ ಒಳಗೆ ಸೇರಿಸದೆ ಹೊರಗೆ ನಿಲ್ಲಿಸಿದ್ದಾರೆ. ಕೆಲ ಕಾರ್ಮಿಕರು ಮಳೆಯಲ್ಲೇ ಕಂಪನಿ ಮುಂದೆ ನಿಂತಿದ್ದಾರೆ. ಅಲ್ಲದೆ ರಾತ್ರಿ ಪಾಳಿಯಲ್ಲಿದ್ದವರು ಕಾರ್ಖಾನೆ ಒಳಗಿದ್ದಾರೆ. ಕಾರ್ಮಿಕರು ಹೊರಗೆ ಬಂದ್ರೆ ಕಂಪನಿ ಮುಚ್ಚುವ ಭಯದಲ್ಲಿ ಕೆಲ ಕಾರ್ಮಿಕರು ಒಳಗೆ ಉಳಿದಿದ್ದಾರೆ.
ರಿಲೀವರ್ ಬರುವವರೆಗೂ ಹೊರಗೆ ಬರಲ್ಲವೆಂದು ಪಟ್ಟುಹಿಡಿದಿದ್ದಾರೆ. ಈ ಕಂಪನಿ ಆಟೋ ಮೊಬೈಲ್ಸ್ ಬಿಡಿ ಭಾಗದ ತಯಾರಿಕಾ ಘಟಕವಾಗಿದ್ದು, ಇಲ್ಲಿ ಸುಮಾರು 140 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸ್ಥಳಕ್ಕೆ ಮೇಟಗಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Published On - 9:32 am, Mon, 20 July 20