AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cancer Day 2021 | ಆಹಾರದ ಬಗ್ಗೆ ಇರಲಿ ಎಚ್ಚರ, ಸಂಸ್ಕರಿಸಿದ ಮಾಂಸ, ತಿಂಡಿಗಳಿಂದ ದೂರ ಇದ್ದುಬಿಡಿ

ಮಾರಣಾಂತಿಕ ಕ್ಯಾನ್ಸರ್​ ರೋಗ ಬಾರದಂತೆ ತಡೆಯಲು ಆದಷ್ಟು ನಾರಿನ ಅಂಶ ಇರುವ ಹಸಿರು ತರಕಾರಿಗಳು, ಹಣ್ಣುಗಳು, ಕಂದು ಅಕ್ಕಿ, ಪ್ರೋಟಿನ್​ಯುಕ್ತ ದ್ವಿದಳ ಧಾನ್ಯಗಳು, ತಾಜಾ ಇರುವ ಚಿಕನ್​, ಮೀನು, ಬೀನ್ಸ್​ಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಬಳಸಿ ಎಂದು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ.

World Cancer Day 2021 | ಆಹಾರದ ಬಗ್ಗೆ ಇರಲಿ ಎಚ್ಚರ, ಸಂಸ್ಕರಿಸಿದ ಮಾಂಸ, ತಿಂಡಿಗಳಿಂದ ದೂರ ಇದ್ದುಬಿಡಿ
Lakshmi Hegde
|

Updated on: Feb 04, 2021 | 7:09 PM

Share

ತಿನ್ನುವ ಆಹಾರಗಳೂ ಕ್ಯಾನ್ಸರ್​ ತರಬಲ್ಲವು.. ಕೆಲವು ತರಕಾರಿ, ಹಣ್ಣು ತರಕಾರಿಗಳನ್ನು ನಿಯಮಿತವಾಗಿ ತಿನ್ನುವುದರಿಂದ ಕ್ಯಾನ್ಸರ್ ಸೇರಿ ಹಲವು ರೋಗಗಳು​ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈಗಂತೂ ನಾವು ತಿನ್ನುವ ತರಕಾರಿ, ಹಣ್ಣುಗಳೆಲ್ಲ ರಾಸಾಯನಿಕ ತುಂಬಿಕೊಂಡೇ ಬಂದವು. ಸಾವಯವ ಕೃಷಿ ಜನ್ಯ ತರಕಾರಿ, ಹಣ್ಣುಗಳು ಸಿಗುವುದೇ ಅಪರೂಪ ಎಂಬ ಸ್ಥಿತಿ ಎದುರಾಗಿದೆ.

ಅದೇನೇ ಇರಲಿ ಮಾರಣಾಂತಿಕ ಕ್ಯಾನ್ಸರ್​ ರೋಗ ಬಾರದಂತೆ ತಡೆಯಲು ಆದಷ್ಟು ನಾರಿನ ಅಂಶ ಇರುವ ಹಸಿರು ತರಕಾರಿಗಳು, ಹಣ್ಣುಗಳು, ಕಂದು ಅಕ್ಕಿ, ಪ್ರೋಟಿನ್​ಯುಕ್ತ ದ್ವಿದಳ ಧಾನ್ಯಗಳು, ತಾಜಾ ಇರುವ ಚಿಕನ್​, ಮೀನು, ಬೀನ್ಸ್​ಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಬಳಸಿ ಎಂದು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಡಬ್ಲ್ಯೂಎಚ್ಒ (WHO-ವಿಶ್ವ ಆರೋಗ್ಯ ಸಂಸ್ಥೆ) ಶಿಫಾರಸ್ಸು ಮಾಡುತ್ತದೆ. ಹಾಗೇ ಸಂಸ್ಕರಿಸಿದ ಮಾಂಸಗಳ ಗುಂಪಿಗೆ ಸೇರುವ ಹ್ಯಾಮ್​ (ಹಂದಿಯ ತೊಡೆಯ ಭಾಗ), ಬೇಕನ್ (ಉಪ್ಪು ಹಾಕಿ ಒಣಗಿಸಿದ ಹಂದಿಯ ಮಾಂಸ), ಸಲಾಮಿ (ಹಂದಿಯ ಒಣ ಮಾಂಸ), ಫ್ರ್ಯಾಂಕ್​ಫ್ರುಟ್ಸ್​ (ಮಿಶ್ರ ಹಂದಿ ಮಾಂಸ, ಗೋಮಾಂಸಗಳನ್ನೊಳಗೊಂಡ ಮಸಾಲೆ ಭರಿತ ಮಾಂಸಾಹಾರ)ಗಳು ಕ್ಯಾನ್ಸರ್​ಗೆ ಕಾರಣವಾಗುವ ಆಹಾರಗಳಲ್ಲಿ ನಂ.1ಪಟ್ಟದಲ್ಲಿವೆ ಎಂದೂ ಡಬ್ಲ್ಯೂಎಚ್​ಒ ತಿಳಿಸಿದೆ.

ಕರುಳು ಕ್ಯಾನ್ಸರ್ ತರುವ ಸಂಸ್ಕರಿಸಿದ ಮಾಂಸ ಸಂಸ್ಕರಿಸಿದ ಮಾಂಸಗಳ ಸೇವನೆ ಮಾಡುವವರು ಕ್ಯಾನ್ಸರ್​ಗೆ ಕರುಳು ಕ್ಯಾನ್ಸರ್​ಗೆ ತುತ್ತಾಗುವ ಪ್ರಮಾಣ ಹೆಚ್ಚು ಎಂಬುದಕ್ಕೆ ಈಗಾಗಲೇ ಹಲವು ಪುರಾವೆಗಳು ಸಿಕ್ಕಿವೆ. ಇತ್ತೀಚೆಗಷ್ಟೇ ವಿಶ್ವ ಕ್ಯಾನ್ಸರ್​ ಸಂಶೋಧನಾ ಫಂಡ್​ (WCRF) ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸಾಧ್ಯವಾದಷ್ಟು ಸಂಸ್ಕರಿಸಿದ ಮಾಂಸಾಹಾರಗಳ ಸೇವನೆ ಕಡಿಮೆ ಮಾಡಿ. ತಿನ್ನದೆ ಇದ್ದರೂ ಆರೋಗ್ಯ ದೃಷ್ಟಿಯಿಂದ ಒಳ್ಳೆಯದೇ ಎಂದೂ ಹೇಳಿದೆ. ಇಂಥ ಮಾಂಸದ ಆಹಾರಗಳನ್ನು ಸಂಸ್ಕರಿಸಿ, ಸಂರಕ್ಷಿಸಿ ಇಡಲು, ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ರಾಸಾಯನಿಕಗಳು ಅಪಾಯಕಾರಿ ಕ್ಯಾನ್ಸರ್​ಕಾರಕಗಳಾಗಿವೆ ಎಂದು ಸ್ಪಷ್ಟವಾಗಿ ಹೇಳಿದೆ.

ಇನ್ನು ರೆಡ್​ ಮೀಟ್​ ಸಾಲಿಗೆ ಸೇರುವ ಹಂದಿ ಮಾಂಸ, ಗೋಮಾಂಸ, ಕುರಿ, ಮೇಕೆಗಳ ಮಾಂಸಗಳನ್ನು ತಾಜಾ ತಿಂದರೂ ಸಹ ಅದರ ಪ್ರಮಾಣ ಕಡಿಮೆ ಇರಲಿ. ಯಾಕೆಂದರೆ ಇವುಗಳ ಅತಿಯಾದ ಸೇವನೆ ಕ್ಯಾನ್ಸರ್​ ತರಬಲ್ಲದು. ಹಾಗಾಗಿ ಒಂದು ವಾರದಲ್ಲಿ 500 ಗ್ರಾಂ.ಗಿಂತಲೂ ಕಡಿಮೆ ಬೇಯಿಸಿದ ಕೆಂಪುಮಾಂಸ ಸೇವಿಸುವಂತೆ ನಾನ್​ವೆಜ್​ ಪ್ರಿಯರಿಗೆ WCRF ಶಿಫಾರಸ್ಸು ಮಾಡಿದೆ. ಇನ್ನು ಸುಟ್ಟ ಮಾಂಸದಿಂದಲೂ ಕ್ಯಾನ್ಸರ್ ಅಪಾಯ ಹೆಚ್ಚು ಎನ್ನುತ್ತಾರೆ ಆಸ್ಟ್ರೇಲಿಯಾದ ತಜ್ಞರು.

ಸಂಸ್ಕರಿಸಿದ, ಹೆಚ್ಚು ಕ್ಯಾಲರಿ ಇರುವ ಮಾಂಸಾಹಾರದ ಬದಲು ತಾಜಾ ಸಿಗುವ ಚಿಕನ್​, ಮೀನು, ಕಡಿಮೆ ಕೊಬ್ಬಿನ ಅಂಶ ಇರುವ ಚೀಸ್​​ಗಳ ಬಳಕೆ ಮಾಡುವುದು ಒಳ್ಳೆಯದು. ಅದರಲ್ಲೂ ಸಂಸ್ಕರಿಸಿದ ಮಾಂಸಾಹಾರದಿಂದ ಮಕ್ಕಳನ್ನು ದೂರವೇ ಇಡಬೇಕು ಎಂದು WCRF ಹೇಳಿದೆ. ಹಾಗೇ, ಅತಿಯಾದ ಕೊಬ್ಬಿನಾಂಶ ಇರುವ ಆಹಾರಗಳ ಸೇವನೆ ನೇರವಾಗಿ ಕ್ಯಾನ್ಸರ್​ಗೆ ಕಾರಣವಾಗದೆ ಇದ್ದರೂ ಪರೋಕ್ಷವಾಗಿ ಅಪಾಯ ತಂದೊಡ್ಡುತ್ತದೆ. ಕೊಬ್ಬಿನಂಶ ಮೈಯೊಳಗೆ ಸೇರಿದಷ್ಟೂ ಬೊಜ್ಜು ಹೆಚ್ಚುತ್ತದೆ. ಬೊಜ್ಜಿನಿಂದ ಹಾರ್ಮೋನುಗಳಲ್ಲಿ ವ್ಯತ್ಯಾಸವಾಗಿ ಕೋಶಗಳ ವಿಭಜನೆ ಮಿತಿಮೀರುತ್ತದೆ ಎಂಬುದನ್ನು ಲಂಡನ್​ ಕ್ಯಾನ್ಸರ್​ ಸಂಶೋಧನಾ ಸಂಸ್ಥೆ ವಿವರಿಸಿದೆ.

ಸಂಸ್ಕರಿಸಿದ ಮೀನುಗಳು ಬೇಡ, ಫಾಸ್ಟ್​ಫುಡ್​ನಿಂದ ದೂರ ಇರಿ ಮೀನಿನ ತಾಜಾ ಮಾಂಸ ಒಳ್ಳೆಯದು. ಆದರೆ  ಒಣಗಿಸಿದ ಮೀನು ಮಾಂಸ ಕ್ಯಾನ್ಸರ್​ ತರಬಲ್ಲದು. ಹಾಗೇ ಹೊರಗೆ ಸಿಗುವ ಫಾಸ್ಟ್​ಫುಡ್​ಗಳ ಸೇವನೆಯೂ ನಿಯಂತ್ರಣದಲ್ಲಿದ್ದರೆ ಒಳಿತು. ಯಾವುದೇ ತಿಂಡಿಯಿರಲಿ ಸಂಸ್ಕರಿಸಿದ್ದಾದರೆ ಸೇವನೆ ಬೇಡ ಎನ್ನುವುದು World Cancer Research Fund ನ ಶಿಫಾರಸ್ಸು. ಸಕ್ಕರೆಯುಕ್ತ ಆಹಾರವನ್ನೂ ಕಡಿಮೆ ಸೇವಿಸಬೇಕು. ಆದಷ್ಟು ಮನೆಯಲ್ಲೇ ತಯಾರು ಮಾಡಿಕೊಂಡ ಸ್ಯಾಂಡ್​ವಿಚ್​, ಸಲಾಡ್​ಗಳನ್ನು ಸೇವಿಸಿ ಎಂದೂ ಹೇಳಿದೆ.

ನಾವು ನಿತ್ಯ ಸೇವಿಸುವ ಆಹಾರದ ಮೇಲೆಯೇ ನಮ್ಮ ಆರೋಗ್ಯ ನಿಂತಿದೆ. ಆದಷ್ಟು ಸಮತೋಲಿತ, ಒಳ್ಳೆಯ ಆಹಾರಗಳನ್ನು ತೆಗೆದುಕೊಳ್ಳಬೇಕು. ಟೊಮ್ಯಾಟೊ, ಬೆಳ್ಳುಳ್ಳಿ, ಕಿತ್ತಳೆ ಹಣ್ಣು, ಕ್ಯಾರೆಟ್​​ಗಳೆಲ್ಲ ಕ್ಯಾನ್ಸರ್​ ನಿಯಂತ್ರಣದಲ್ಲಿ ಸಹಾಯ ಮಾಡಬಲ್ಲವು. ಪ್ರೋಟಿನ್​ ಯುಕ್ತ ಆಹಾರಗಳು ಬಹುಮುಖ್ಯ ಎನ್ನುತ್ತಾರೆ ತಜ್ಞರು.

World Cancer Day 2021 ಕ್ಯಾನ್ಸರ್​ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !

ಎಚ್ಚರ! ದಿನನಿತ್ಯದಲ್ಲಿ ಬಳಸುವ ಈ ಐದು ಆಹಾರಗಳು ಕ್ಯಾನ್ಸರ್​ ತರಬಹುದು

Follow Us
Lakshmi Hegde
Lakshmi Hegde
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್