Floating Church: ಕರ್ನಾಟಕದಲ್ಲಿದೆ ನಿಮ್ಮನ್ನು ಅಚ್ಚರಿಗೊಳಿಸುವ ತೇಲುವ ಚರ್ಚ್​

| Updated By: ಅಕ್ಷತಾ ವರ್ಕಾಡಿ

Updated on: Dec 13, 2022 | 5:30 PM

ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ನದಿಯ ದಡದಲ್ಲಿ ನಿರ್ಮಿಸಲಾಗಿರುವ ಈ ಚರ್ಚ್. ಗೋಥಿಕ್ ವಾಸ್ತುಶಿಲ್ಪದ ಒಂದು ಶ್ರೇಷ್ಠ ಉದಾಹರಣೆಯಾಗಿದೆ.

Floating Church: ಕರ್ನಾಟಕದಲ್ಲಿದೆ ನಿಮ್ಮನ್ನು ಅಚ್ಚರಿಗೊಳಿಸುವ ತೇಲುವ ಚರ್ಚ್​
ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ರೋಸರಿ ಚರ್ಚ್
Image Credit source: TripAdvisor
Follow us on

ಚರ್ಚ್​(Church) ಎಂದಾಕ್ಷಣ ಸುಂದರ ಕಟ್ಟಡ, ಗಂಟೆಯ ಸದ್ದು, ಪ್ರತಿ ಆದಿತ್ಯವಾರ ಇಲ್ಲಿನ ತುಂಬಿದ ಜನಸಾಗರ ಹೀಗೆಲ್ಲಾ ನಿಮ್ಮ ಕಲ್ಪನೆಗೆ ಬರುವುದು ಸಹಜ. ಆದರೆ ಈ ಚರ್ಚ್​ನಲ್ಲಿ ಯಾವುದೇ ಸಂಭ್ರಮಗಳಿಲ್ಲ, ಗಂಟೆಯ ಸದ್ದಿಲ್ಲ. ಬದಲಾಗಿ ಎಕಾಂಗಿಯಾಲಿದೆ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ರೋಸರಿ ಚರ್ಚ್.ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ನದಿಯ ದಡದಲ್ಲಿ ನಿರ್ಮಿಸಲಾಗಿರುವ ಈ ಚರ್ಚ್ ನ್ನು​ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಅರ್ಧ ಗಂಟೆಯಲ್ಲಿ ತಲುಪಬಹುದು. ಗೋಥಿಕ್ ವಾಸ್ತುಶಿಲ್ಪದ ಒಂದು ಶ್ರೇಷ್ಠ ಉದಾಹರಣೆಯಾಗಿದೆ.ಹಳೆಯ ವಾಸ್ತುಶೈಲಿಗಳು, ಅವಶೇಷಗಳು, ಹಾಗೂ ಈ ಕಟ್ಟಡದ ಪ್ರತಿಯೊಂದು ಮೂಲೆಯ ಇಟ್ಟಿಗೆಗಳು ಕೂಡ ಇತಿಹಾಸವನ್ನು ಹೊಂದಿದೆ.

ಇತಿಹಾಸ:
ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ನದಿಯ ದಡದಲ್ಲಿ ನಿರ್ಮಿಸಲಾಗಿದೆ. (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಅರ್ಧ ಗಂಟೆ), ಇದು ಗೋಥಿಕ್ ವಾಸ್ತುಶಿಲ್ಪದ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಇದನ್ನು 1860 ರಲ್ಲಿ ಅಬ್ಬೆ ಜೆ ಎ ಡುಬೊಯಿಸ್ ಎಂಬ ಫ್ರೆಂಚ್ ಮಿಷನರಿ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಡಿಸೆಂಬರ್ ರಜೆಯಲ್ಲಿ ಭಾರತದ ಈ ಪ್ರದೇಶಗಳಿಗೆ ಭೇಟಿ ನೀಡಿ

1960 ರಲ್ಲಿ, ಗೊರೂರು-ಹೇಮಾವತಿ ಅಣೆಕಟ್ಟನ್ನು ನಿರ್ಮಿಸುವ ಸಂದರ್ಭದಲ್ಲಿ ಈ ಚರ್ಚ್ ಪ್ರದೇಶದ ಸುತ್ತಲಿನ ಎಲ್ಲಾ ಹಳ್ಳಿಗಳನ್ನು ಖಾಲಿ ಮಾಡಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಜೂನ್ ನಿಂದ ಅಕ್ಟೋಬರ್ ವರೆಗೆ ಈ ಚರ್ಚ್​ನ ಒಳಭಾಗದಲ್ಲಿ ನೀರು ತುಂಬಿರುತ್ತದೆ ಮತ್ತು ಆದರೆ ಇದರ ವಿಶೇಷತೆ ಎಂದರೆ ನೀರು ಬಂದರೂ ಸಹ ಇನ್ನೂ ಈ ಚರ್ಚ್​ ಗಟ್ಟಿಯಾಗಿಯೇ ನಿಂತಿದೆ. ಆದ್ದರಿಂದ ಇದಕ್ಕೆ ತೇಲುವ ಚರ್ಚ್​ ಎಂದು ಹೆಸರು ಬಂತು. ಹತ್ತಿರದ ಗೊರೂರ್ ಅಣೆಕಟ್ಟಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಚರ್ಚ್​ ಕಾಣಸಿಗುತ್ತದೆ. ಇದರ ಜೊತೆಗೆ ಇಲ್ಲಿ ದೋಣಿಗಳಲ್ಲಿ ಪ್ರಯಾಣ ಮಾಡುವ ಅವಕಾಶವೂ ಕೂಡ ಇದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಪ್ರಯಾಣ ಸುರಕ್ಷಿತವೇ ತಜ್ಞರ ಸಲಹೆ ಇಲ್ಲಿದೆ

ಬೆಂಗಳೂರಿನಿಂದ 200 ಕಿಮೀ ದೂರದಲ್ಲಿರುವ ಈ ಚರ್ಚ್​ ಜುಲೈ ಅಕ್ಟೋಬರ್ ತಿಂಗಳಿನಲ್ಲಿ ನೀರಿನಲ್ಲಿ ಮುಳುಗಿರುತ್ತದೆ. ಡಿಸೆಂಬರ್ ಮೇ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಚರ್ಚ್ ಕೆಲ ಆವರಣಗಳು ಕಾಣ ಸಿಗುತ್ತದೆ. ರಸ್ತೆಗಳ ಮೂಲಕ ಸುಲಭವಾಗಿ ನೀವು ಇಲ್ಲಿಗೆ ಹೋಗಿಬರಬಹುದು. ಶೆಟ್ಟಿಹಳ್ಳಿ ಚರ್ಚ್‌ಗೆ ಬಸ್ಸುಗಳು ಲಭ್ಯವಿವೆ. ಶೆಟ್ಟಿಹಳ್ಳಿಯಿಂದ ಸರಿಸುಮಾರು 20 ಕಿಮೀ ದೂರದಲ್ಲಿರುವ ಹಾಸನಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಪ್ರತಿದಿನವೂ ರೈಲುಗಳ ಸೇವೆಯೂ ಇದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: