AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ಮೂರ್ಖರ ಜೊತೆಗೆ ಹೇಗೆ ವರ್ತಿಸಬೇಕು? ಚಾಣಕ್ಯ ಹೀಗೆನ್ನುವುದು ಯಾಕೆ?

ಜೀವನದಲ್ಲಿ ನಮ್ಮ ಜೊತೆಗೆ ಸ್ನೇಹ ಸಂಬಂಧ ಬೆಳೆಸುವ ವ್ಯಕ್ತಿಗಳೆಲ್ಲರೂ ಬುದ್ಧಿವಂತರಾಗಿರುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಕೆಲವೊಮ್ಮೆ ಮೂರ್ಖರು ಕೂಡ ಸ್ನೇಹಿತರಾಗಬಹುದು. ಒಂದು ವೇಳೆ ಸುತ್ತಮುತ್ತಲಿನಲ್ಲಿ ಮೂರ್ಖ ವ್ಯಕ್ತಿಗಳಿದ್ದರೆ ಆ ವ್ಯಕ್ತಿಗಳ ಜೊತೆಗೆ ಹೇಗಿರಬೇಕು.ಈ ಗುಣಸ್ವಭಾವ ವ್ಯಕ್ತಿಗಳ ಜೊತೆಗೆ ಯಾವತ್ತಿಗೂ ಜಾಗರೂಕರಾಗಿರಬೇಕು ಎಂದು ಚಾಣಕ್ಯನು ತಿಳಿಸಿದ್ದಾನೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಮೂರ್ಖರ ಜೊತೆಗೆ ಹೇಗೆ ವರ್ತಿಸಬೇಕು? ಚಾಣಕ್ಯ ಹೀಗೆನ್ನುವುದು ಯಾಕೆ?
ಸಾಂದರ್ಭಿಕ ಚಿತ್ರ (ಚಾಣಕ್ಯ ನೀತಿ)
ಅಕ್ಷಯ್​ ಪಲ್ಲಮಜಲು​​
|

Updated on: Nov 15, 2024 | 10:34 AM

Share

ಜೀವನವು ನಾವು ಅಂದುಕೊಂಡಷ್ಟು ಸುಲಭವಲ್ಲ. ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ವಿಭಿನ್ನ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ಹೀಗಾಗಿ ಆಚಾರ್ಯ ಚಾಣಕ್ಯನು ಕೆಲವು ವ್ಯಕ್ತಿಗಳನ್ನು ಹೇಗೆ ಎದುರಿಸಬೇಕು, ಅವರೊಂದಿಗೆ ಹೇಗೆ ವ್ಯವಹರಿಸಬೇಕು. ಹಾಗೂ ಸ್ನೇಹಿತನ್ನಾಗಿ ಮಾಡಿಕೊಳ್ಳುವಾಗ ಕೆಲವು ವಿಷಯಗಳ ಬಗ್ಗೆ ಗಮನ ವಹಿಸಬೇಕು ಎಂದು ತಿಳಿಸಿದ್ದಾನೆ. ಚಾಣಕ್ಯನ ಈ ಸಲಹೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬೇಡದ ವ್ಯಕ್ತಿಗಳಿಂದ ದೂರವಿರಲು ಸಾಧ್ಯ.

  • ಮೂರ್ಖನೊಂದಿಗೆ ವಾದಬೇಡ : ಆಚಾರ್ಯ ಚಾಣಕ್ಯನು ಮೂರ್ಖರೊಂದಿಗೆ ಎಂದಿಗೂ ವಾದಿಸಬೇಡಿ ಎನ್ನುತ್ತಾನೆ. ಈ ವ್ಯಕ್ತಿಗಳಿಗೆ ಸರಿ ತಪ್ಪುಗಳನ್ನು ವಿಮರ್ಶಿಸುವ ಬುದ್ಧಿಯೂ ಇರುವುದಿಲ್ಲ. ಯಾವುದೇ ಜ್ಞಾನವಿಲ್ಲದ ಕಾರಣ ಈ ಜನರೊಂದಿಗೆ ವಾದ ಮಾಡಿದರೆ ಸಮಯವು ವ್ಯರ್ಥ ಹಾಗೂ ಮನಸ್ಸಿನ ನೆಮ್ಮದಿಯೂ ಹಾಳಾಗುತ್ತದೆ. ಹೀಗಾಗಿ ಅಂತಹ ಜನರಿಂದ ಆದಷ್ಟು ದೂರವಿರುವುದೇ ಉತ್ತಮ. ವಾದಿಸುವ ವ್ಯಕ್ತಿಯ ಗೌರವಕ್ಕೆ ಕುತ್ತು ಬರುವ ಕಾರಣ ಮೂರ್ಖ ಜನರೊಂದಿಗೆ ವಾದಿಸುವ ಬದಲು ಮೌನವಾಗಿರುವುದೇ ಉತ್ತಮ ಮಾರ್ಗ ಎಂದಿದ್ದಾನೆ.
  • ಈ ವ್ಯಕ್ತಿಗಳು ನಂಬಿಕೆಗೆ ಯೋಗ್ಯರಲ್ಲ : ನೀವು ನಂಬಿಕೆಯಿಟ್ಟು ಬೆಳೆಸುವ ಸ್ನೇಹ ಸಂಬಂಧದಲ್ಲಿ ಈ ರೀತಿಯ ಸ್ನೇಹಿತರು ನಂಬಿಕೆಗೆ ಅರ್ಹರಲ್ಲ ಎಂದು ಚಾಣಕ್ಯ ಎಚ್ಚರಿಕೆ ನೀಡಿದ್ದಾನೆ. ಸ್ನೇಹಿತರಲ್ಲಿ ಕೆಲವರು ನಿಮ್ಮೊಂದಿಗೆ ಕುಳಿತು ನಿಮ್ಮೊಂದಿಗೆ ಮಾತನಾಡುತ್ತಾರೆ. ಆದರೆ ನೀವು ಕೆಲವು ಪ್ರಮುಖ ವಿಷಯಗಳ ಬಗ್ಗೆ ಹೇಳುವಾಗ ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಈ ಗುಣಸ್ವಭಾವ ಹೊಂದಿರುವ ಸ್ನೇಹಿತನು ನಂಬಿಕೆಗೆ ಯೋಗ್ಯನಾಗಿರುವುದಿಲ್ಲ. ಯಾವ ಸನ್ನಿವೇಶದಲ್ಲಿಯೂ ಬೆನ್ನಿಗೆ ಚೂರಿ ಹಾಕಬಹುದು, ಇಲ್ಲದಿದ್ದರೆ ಮೋಸ ಮಾಡಬಹುದು. ಹೀಗಾಗಿ ಅಂತಹ ಸ್ನೇಹಿತನು ನಿಮ್ಮ ಸುತ್ತಮುತ್ತಲಿನಲ್ಲಿದ್ದರೆ ಅಂತಹರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸುವುದನ್ನು ಆದಷ್ಟು ತಪ್ಪಿಸಿ.
  • ನಿಮಗಿಂತ ಉನ್ನತ ಮತ್ತು ಕಳಪೆ ಮಟ್ಟದ ಜನರೊಂದಿಗೆ ಸ್ನೇಹ ಸಂಬಂಧ ಬೇಡ : ಹೆಚ್ಚಿನವರು ಸ್ನೇಹ ಬೆಳೆಸುವಾಗ ವ್ಯಕ್ತಿಯ ಗುಣಸ್ವಭಾವವನ್ನು ನೋಡುತ್ತಾರೆ. ಆದರೆ ಚಾಣಕ್ಯನು ನಿಮಗಿಂತ ಉನ್ನತ ಮತ್ತು ಕಳಪೆ ಮಟ್ಟದ ಜನರೊಂದಿಗೆ ಸ್ನೇಹ ಬೆಳೆಸಬೇಡಿ. ಈ ವ್ಯಕ್ತಿಗಳಿಂದ ಎಂದಿಗೂ ಸಂತೋಷ ಸಿಗುವುದಿಲ್ಲ. ನಿಮಗಿಂತ ಕೆಳಮಟ್ಟದ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿದರೆ ತೊಂದರೆಯಲ್ಲಿ ಸಿಲುಕುವ ಸಾಧ್ಯತೆಯೇ ಹೆಚ್ಚು. ಈ ಸ್ನೇಹಿತರು ಯಾವಾಗಲೂ ನಿಮ್ಮಿಂದ ಸಹಾಯವನ್ನು ನಿರೀಕ್ಷಿಸುವುದೇ ಹೆಚ್ಚು. ಅದಲ್ಲದೇ, ಉನ್ನತ ಸ್ಥಾನಮಾನದ ಜನರೊಂದಿಗೆ ಸ್ನೇಹ ಬೆಳೆಸಿದರೆ ಯಾವಾಗಲೂ ನಿಮ್ಮನ್ನು ನಿಮ್ಮ ಸ್ನೇಹಿತನೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತೀರಿ. ತೊಂದರೆಕ್ಕೊಳಗಾದ ಸಮಯದಲ್ಲಿ ಸ್ನೇಹಿತನು ಸಹಾಯ ಮಾಡದಿದ್ದರೆ ಕೋಪವು ಬರುತ್ತದೆ. ಹೀಗಾಗಿ ಸ್ನೇಹ ಮಾಡುವಾಗ ಈ ಬಗ್ಗೆ ಹೆಚ್ಚು ಗಮನ ನೀಡಬೇಕಂತೆ.
  • ವೈಯುಕ್ತಿಕ ದೌರ್ಬಲ್ಯವನ್ನು ಈ ವ್ಯಕ್ತಿಗಳೊಂದಿಗೆ ಹೇಳಬೇಡಿ : ಪ್ರತಿಯೊಬ್ಬ ವ್ಯಕ್ತಿಯು ಕೆಲವು ದೌರ್ಬಲ್ಯಗಳನ್ನು ಹೊಂದಿರುತ್ತಾನೆ. ಆದರೆ, ಹೆಚ್ಚಿನ ಜನರು ತಮ್ಮ ಕೆಲ ದೌರ್ಬಲ್ಯವನ್ನು ಹತ್ತಿರದ ಸಂಬಂಧಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ನಿಮ್ಮ ಸ್ನೇಹಿತ ಅಥವಾ ಹೆಂಡತಿಯೇ ಆಗಿರಲಿ ವೈಯುಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಸರಿಯಲ್ಲ. ಯಾರಿಗೂ ಕೆಲವು ಸೂಕ್ಷ್ಮ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ವೈಯುಕ್ತಿಕ ವಿಚಾರಗಳನ್ನೆ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಬಹುದು.
  • ಮೂರ್ಖರ ಅಪಪ್ರಚಾರಕ್ಕೆ ಹೆದರಿ ಬೇಡಿ : ಎಲ್ಲರೂ ಕೂಡ ಎಲ್ಲರ ಮುಂದೆ ಒಳ್ಳೆಯವರಾಗಿರಬೇಕು, ತಮ್ಮ ಬಗ್ಗೆ ಯಾರು ಕೂಡ ಅಪಪ್ರಚಾರ ಮಾಡಬಾರದು ಎಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ತಮ್ಮನ್ನು ತಪ್ಪು ಅರ್ಥ ಮಾಡಿಕೊಂಡವರು ಇಲ್ಲ ಸಲ್ಲದ್ದನ್ನು ಹೇಳಿ ಅಪಪ್ರಚಾರ ಮಾಡುತ್ತಾರೆ. ಈ ತಮ್ಮ ಬಗ್ಗೆ ಕೆಟ್ಟದ್ದನ್ನು ಹೇಳಿದರೆ ಅದಕ್ಕೆ ಹೆದರಬೇಡಿ. ಅವಮಾನವು ಜೀವನದ ಪ್ರತಿ ಕ್ಷಣವು ಕೊರಗುವಂತೆ ಮಾಡುತ್ತದೆ. ಹೀಗಾಗಿ ಮೂರ್ಖರ ಸಹವಾಸ ಮಾಡದೇ ಇದ್ದರೆ ತಮ್ಮ ಬಕ್ಗ್ಗೆ ಸಮಾಜವು ಏನು ತಿಳಿಯುತ್ತದೆಯೇ ಎಂದು ಭಯ ಪಡುವ ಪ್ರಮೇಯವೇ ಬರುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ