Vidura Niti :ಬದುಕನ್ನೇ ಹಾಳುಮಾಡುವ ಮನುಷ್ಯನ ಕೆಟ್ಟ ಗುಣಗಳು ಇವೆಯಂತೆ
ಜಗತ್ತಿನಲ್ಲಿ ಬದುಕುವ ಯಾರಿಗೆ ನಾವು ಸಂತೋಷವಾಗಿ ಇರಬೇಕು ಎನ್ನುವ ಆಸೆ ಇರಲ್ಲ ಹೇಳಿ. ಆದರೆ ಎಲ್ಲರಿಗೂ ಕೂಡ ಸಂತೋಷಕರ ಜೀವನ ಸಿಕ್ಕರೆ ಕಷ್ಟ ಎನ್ನುವ ಪದವೇ ಅರ್ಥ ಕಳೆದುಕೊಳ್ಳುತ್ತದೆ. ಹೆಚ್ಚಿನವರು ತಮ್ಮ ಕೆಲವು ಕೆಟ್ಟ ಗುಣಗಳಿಂದ ಸಂತೋಷವನ್ನು ಹಾಳು ಮಾಡಿಕೊಳ್ಳುತ್ತಾರೆ. ಈ ಬಗ್ಗೆ ವಿದುರನು ಸ್ಪಷ್ಟವಾಗಿ ಹೇಳಿದ್ದು , ಹೀಗಾಗಿ ಈ ಕೆಟ್ಟ ಗುಣಗಳನ್ನು ತ್ಯಜಿಸಿ ಬಿಡುವುದು ಉತ್ತಮ ಎಂದಿದ್ದಾನೆ. ಹಾಗಾದ್ರೆ ಬದುಕಿನಲ್ಲಿ ಖುಷಿಯಾಗಿರಲು ಏನು ಮಾಡ್ಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜೀವನವೂ ಸುಖ ದುಃಖಗಳ ಸಮ್ಮಿಲನವಾಗಿದೆ. ಆದರೆ ಪ್ರತಿಯೊಬ್ಬರು ಬಯಸೋದು ಸಂತೋಷವನ್ನು ಮಾತ್ರವೇ. ಯಾರ ಬದುಕಿನಲ್ಲಿ ಖುಷಿ, ನೆಮ್ಮದಿಯಿದೆಯೋ ಆ ವ್ಯಕ್ತಿ ತನ್ನ ಬದುಕಿನಲ್ಲಿ ಅರ್ಧ ಯಶಸ್ಸು ಕಂಡಂತೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕುಟುಂಬ ಸದಸ್ಯರ ನಗು, ಸಂತೋಷ ಕಾಪಾಡುವುದು ಅತ್ಯವಶ್ಯಕ. ಮನುಷ್ಯನ ಈ ಕೆಲವು ಕೆಟ್ಟ ಗುಣಗಳು ಸಂತೋಷವನ್ನೇ ಹಾಳು ಮಾಡುತ್ತದೆ ಎನ್ನುತ್ತಾನೆ ವಿದುರ. ಈ ಐದು ಕೆಟ್ಟ ಗುಣಗಳನ್ನು ತ್ಯಜಿಸಿದರೆ ಮಾತ್ರ ನಾವಂದು ಕೊಂಡಂತಹ ಸಂತೋಷಮಯ ಜೀವನವೂ ನಮ್ಮದಾಗಲು ಸಾಧ್ಯವಂತೆ.
* ದುರಾಸೆ : ಜೀವನದಲ್ಲಿ ಎಲ್ಲವೂ ಬೇಕು, ಆದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ಅದೇ ರೀತಿ ಆಸೆ ಇರಬೇಕು, ದುರಾಸೆ ಇರಬಾರದು ಎಂದು ವಿದುರ ತನ್ನ ನೀತಿಯಲ್ಲಿ ಹೇಳುತ್ತಾನೆ. ಸ್ವಾರ್ಥ ಹಾಗೂ ದುರಾಸೆಯಿರುವ ವ್ಯಕ್ತಿಯು ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಇತರ ಏಳಿಗೆಯನ್ನು ಸಹಿಸಲು ಸಾಧ್ಯವಾಗಲ್ಲ, ತನ್ನ ಸುತ್ತಮುತ್ತಲಿನ ವ್ಯಕ್ತಿಗಳ ಬಳಿ ಏನೆಲ್ಲಾ ಇದೆ ಅದೆಲ್ಲಾ ನನಗೂ ಬೇಕು ಎನ್ನುವ ಆಸೆಯಿಂದ ತನ್ನ ಹೆಚ್ಚಿನ ಸಮಯವನ್ನು ಇತರರ ಬಗ್ಗೆ ಯೋಚಿಸುವುದರಲ್ಲೇ ಕಳೆಯುತ್ತಾನೆ. ಯಾವಾಗ ನಮ್ಮ ಬದುಕಿನ ಬಗ್ಗೆ ಯೋಚಿಸುವುದು ಬಿಟ್ಟು, ಬೇರೆಯವರ ಬಗ್ಗೆ ಚಿಂತಿಸುತ್ತೇವೋ ಅಲ್ಲಿಂದಲೇ ಜೀವನದ ಖುಷಿಯು ದೂರವಾಗುತ್ತದೆ. ಈ ಗುಣವನ್ನು ಬಿಡುವುದು ಸೂಕ್ತ ಎನ್ನುತ್ತಾನೆ ವಿದುರ.
* ಸ್ವಾರ್ಥ : ಕುಟುಂಬ ಹಾಗೂ ತನ್ನವರ ಸಂತೋಷಕ್ಕೆ ಗಮನ ಕೊಡದೇ, ತನ್ನ ಸ್ವಾರ್ಥಕ್ಕಾಗಿಯೇ ಬದುಕುವ ವ್ಯಕ್ತಿ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸುತ್ತಾನೆ. ಸ್ವಾರ್ಥ ತುಂಬಿದ ವ್ಯಕ್ತಿಗೆ ಕಷ್ಟದ ದಿನಗಳಲ್ಲಿ ಯಾರು ಕೂಡ ಸಹಾಯ ಮಾಡಲು ಬರುವುದಿಲ್ಲ. ಹೀಗಾಗಿ ಯಾರು ಸ್ವಾರ್ಥವನ್ನು ಬಿಟ್ಟು ತ್ಯಾಗದ ಭಾವನೆ ಬೆಳೆಸಿಕೊಳ್ಳ ಬೇಕು. ಆ ವ್ಯಕ್ತಿಗಳು ಮಾತ್ರ ಜೀವನದಲ್ಲಿ ಖುಷಿಯಾಗಲು ಸಾಧ್ಯ.
* ಕೀಳರಿಮೆ : ವಿದುರ ನೀತಿಯಲ್ಲಿ ಹೇಳಿರುವಂತೆ ಯಾವ ವ್ಯಕ್ತಿಯು ಕೀಳರಿಮೆ ಭಾವವನ್ನು ಬೆಳೆಸಿಕೊಂಡಿರುತ್ತಾನೋ ಆ ವ್ಯಕ್ತಿಯು ಸಂತೋಷವಾಗಿರಲು ಸಾಧ್ಯವೇ ಇಲ್ಲವಂತೆ. ತನ್ನಿಂದ ಏನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಾರೇ ಆಗಲಿ ತನ್ನ ಸಾಮಾರ್ಥ್ಯದ ಬಗ್ಗೆ ಅನುಮಾನ ಹೊಂದಿರಬಾರದು. ಅಂತಹ ಗುಣವಿದ್ದರೆ ಅದನ್ನು ತ್ಯಜಿಸುವುದೇ ಉತ್ತಮ. ಮೊದಲು ತನ್ನನ್ನು ತಾನು ಇದ್ದಂತೆ ಒಪ್ಪಿಕೊಂಡು ಪ್ರೀತಿಸಬೇಕು. ಆತ್ಮವಿಶ್ವಾಸ ವ್ಯಕ್ತಿಯನ್ನು ಬಲಶಾಲಿಯಾಗಿಸುವುದು ಮಾತ್ರವಲ್ಲದೇ ಜೀವನದಲ್ಲಿ ಸದಾ ಸಂತೋಷವಾಗಿರುವಂತೆ ಮಾಡುತ್ತದೆ.
* ಕೋಪ : ಈ ಭೂಮಿ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯು ನಾನಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಅದರಲ್ಲಿ ಕೋಪ ಕೂಡ ಒಂದು. ಅದರೆ ವಿದುರ ಹೇಳುವಂತೆ ವ್ಯಕ್ತಿಯ ದೊಡ್ಡ ಶತ್ರುವೆಂದರೆ ಅದುವೇ ಕೋಪವಂತೆ. ಸದಾ ಕೋಪ ಮಾಡಿಕೊಳ್ಳುವ ವ್ಯಕ್ತಿಗೆ ಸರಿತಪ್ಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಷ್ಟು ವ್ಯವದಾನವಿರುವುದಿಲ್ಲ. ಸಿಟ್ಟಿನಲ್ಲಿದ್ದಾಗ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವವೇ ಹೆಚ್ಚು. ಇದೇ ಎಷ್ಟೋ ಬಾರಿ ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಹೀಗಾಗಿ ಕೋಪವನ್ನು ಹತೋಟಿಯಲ್ಲಿಡಲು ಕಲಿಯುವುದು ಮುಖ್ಯ.
ಇದನ್ನೂ ಓದಿ: ಮೂರ್ಖರ ಜೊತೆಗೆ ಹೇಗೆ ವರ್ತಿಸಬೇಕು? ಚಾಣಕ್ಯ ಹೀಗೆನ್ನುವುದು ಯಾಕೆ?
* ಅಹಂಕಾರ: ಮನುಷ್ಯನ ಜೀವನವನ್ನೇ ಹಾಳು ಮಾಡುವುದೇ ಈ ಅಹಂ ಎನ್ನುವ ಎರಡಕ್ಷರ. ಯಾವ ವ್ಯಕ್ತಿಯು ನಾನು, ನನ್ನದು ಹಾಗೂ ನನ್ನಿಂದಲೇ ಎಲ್ಲಾ ಎಂದು ಕೊಳ್ಳುತ್ತಾನೋ ಆತನ ಜೀವನದಲ್ಲಿ ಖುಷಿಯೆನ್ನುವುದು ಮರಿಚಿಕೆಯಾಗುತ್ತದೆ. ಅಹಂಕಾರವನ್ನು ಹೊಂದಿದ ವ್ಯಕ್ತಿಯ ಬುದ್ಧಿಯು ಮಂಕಾಗುತ್ತದೆ..ಆತನಿಗೆ ಸರಿ ತಪ್ಪುಗಳ ತಿಳುವಳಿಕೆಯೇ ಇರುವುದಿಲ್ಲ. ಹೀಗಾಗಿ ವಿದುರನು ಈ ಅಹಂ ಎನ್ನುವ ಭಾವವನ್ನು ತ್ಯಜಿಸಿದರೆ ಮಾತ್ರ ಜೀವನದಲ್ಲಿ ಎಲ್ಲವೂ ಸಿಗುತ್ತದೆಯಂತೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ