ನವೆಂಬರ್ 16 ರಂದು ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನು ಆಚರಿಸುವುದು ಏಕೆ?

International day for tolerance 2024: ಸಹಿಷ್ಣುತೆ ಮತ್ತು ತಾರತಮ್ಯದಂತಹ ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಲು ಹಾಗೂ ಸಹಿಷ್ಣುತೆ ಮತ್ತು ಅಹಿಂಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 16 ರಂದು ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆಯು ಹುಟ್ಟಿಕೊಂಡದ್ದು? ಏನಿದರ ವಿಶೇಷ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ನವೆಂಬರ್ 16 ರಂದು ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನು ಆಚರಿಸುವುದು ಏಕೆ?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 16, 2024 | 10:03 AM

ಇಂದಿನ ವೇಗದ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿರುವುದರಿಂದ ತಾಳ್ಮೆ, ಸಹನೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಅಹಿಂಸೆ ಹಾಗೂ ಹಿಂಸಾಚಾರದಂತಹ ಘಟನೆಗಳು ಹೆಚ್ಚು ನಡೆಯುತ್ತಲೇ ಇದೆ. ಈ ದಿನವೂ ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಯಲು ಸಹಿಷ್ಣುತೆಯನ್ನು ಉತ್ತೇಜಿಸುವುದು ಹಾಗೂ ಅಸಹಿಷ್ಣುತೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ. ಸಹಿಷ್ಣುತೆ ಎಂದರೆ ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸುವುದು, ಇತರರ ಭಾವನೆಗಳನ್ನು ಗೌರವಿಸುವುದು ಹಾಗೂ ಶಾಂತಿಯುತವಾಗಿ ವರ್ತಿಸುವುದು. ಇದು ವ್ಯಕ್ತಿಗಳಿಗೆ ಮಾತ್ರವಲ್ಲ ಸಮಾಜಕ್ಕೂ ಅತ್ಯಗತ್ಯವಾಗಿದ್ದು ಈ ಹಿನ್ನಲೆಯಲ್ಲಿ ನವೆಂಬರ್ 16 ರಂದು ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಸಹಿಷ್ಣುತೆ ದಿನದ ಇತಿಹಾಸ ಹಾಗೂ ಮಹತ್ವ

ಮಹಾತ್ಮಾ ಗಾಂಧಿಯವರ 125 ನೇ ಜನ್ಮದಿನದ ಸಂದರ್ಭದಲ್ಲಿ ಯುನೈಟೆಡ್ ನ್ಯಾಶನಲ್ ಜನರಲ್ ಅಸೆಂಬ್ಲಿಯು 1995 ನೇ ವರ್ಷವನ್ನು ಅಂತಾರಾಷ್ಟ್ರೀಯ ಸಹಿಷ್ಣುತೆಯ ವರ್ಷವೆಂದು ಘೋಷಿಸಿತು. ಅದೇ ವರ್ಷ ಜಗತ್ತಿನಲ್ಲಿ ಅಹಿಂಸೆ ಮತ್ತು ಸಹಿಷ್ಣುತೆಯ ಜಾಗೃತಿಯನ್ನು ಉತ್ತೇಜಿಸುವುದರೊಂದಿಗೆ “ಯುನೆಸ್ಕೋ ಮದನ್‌ಜಿತ್ ಸಿಂಗ್ ಪ್ರಶಸ್ತಿ” ನೀಡಲು ಮುಂದಾಯಿತು. ಆ ಬಳಿಕ 1996 ರಲ್ಲಿ, ಯುನೈಟೆಡ್ ನ್ಯಾಶನಲ್ ಜನರಲ್ ಅಸೆಂಬ್ಲಿಯು ನವೆಂಬರ್ 16 ರಂದು ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಕರ್ತವ್ಯವೇನು? ಇಲ್ಲಿದೆ ಮಾಹಿತಿ

ಅಂತಾರಾಷ್ಟ್ರೀಯ ಸಹಿಷ್ಣುತೆ ದಿನದ ಮಹತ್ವ ಹಾಗೂ ಆಚರಣೆ

ಸಮಾಜವು ಅನೇಕ ದುಷ್ಕೃತ್ಯಗಳು ಮತ್ತು ಹಿಂಸೆಗಳಿಂದ ಸುತ್ತುವರೆದಿದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ದೌರ್ಜನ್ಯಗಳು, ಹಿಂಸೆ ಮತ್ತು ಅನ್ಯಾಯವನ್ನು ನಿಲ್ಲಿಸುವುದು ಹಾಗೂ ಸಹಿಷ್ಣುತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಜಗತ್ತಿನಲ್ಲಿ ಹಿಂಸೆ ಮತ್ತು ನಕಾರಾತ್ಮಕತೆಯ ಭಾವನೆಯನ್ನು ತೊಡೆದುಹಾಕುವ ಮೂಲಕ ಅಹಿಂಸೆಯನ್ನು ಉತ್ತೇಜಿಸುವ ಸಲುವಾಗಿ ಈ ದಿನವೂ ಮಹತ್ವದ್ದಾಗಿದೆ. ಈ ದಿನವನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಹಬ್ಬದಂತೆ ಆಚರಿಸಲಾಗುತ್ತಿದ್ದು, ಅನೇಕ ಸಭೆಗಳು ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ