ಇಲಿಗಳ ಕಾಟದಿಂದ ಶಾಶ್ವತ ಪಡೆಯಲು ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರಸಿ
ಹೆಚ್ಚಿನ ಮನೆಗಳಲ್ಲಿ ಇಲಿ, ಹಲ್ಲಿ, ಕೀಟಗಳ ಕಾಟ ಇದ್ದೇ ಇರುತ್ತದೆ. ಇವುಗಳನ್ನು ಓಡಿಸುವುದೇ ದೊಡ್ಡ ತಲೆ ನೋವು. ಹಲವರು ಇವುಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ, ಇನ್ನೂ ಹಲವಾರು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇವುಗಳ ಬದಲು ನೆಲ ಒರೆಸುವ ನೀರಿಗೆ ಬರೀ ಈ ಒಂದು ವಸ್ತುವನ್ನು ಬೆರೆಸಿ ಮನೆ ಒರೆಸುವ ಮೂಲಕ ಇಲಿ, ಕೀಟಗಳು ಮನೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.

ಬಹುತೇಕರ ಮನೆಗಳಲ್ಲಿ ಹಲ್ಲಿ, ಸೊಳ್ಳೆ, ಇಲಿಗಳ (rats) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಈ ಇಲಿಗಳು ಅಡುಗೆ ಸಾಮಾಗ್ರಿಗಳ ಜೊತೆಗೆ ಬಟ್ಟೆ, ಮನೆಯಲ್ಲಿರುವ ಇತರೆ ವಸ್ತುಗಳನ್ನು ಸಹ ಹಚ್ಚಿ ಹಾಳು ಮಾಡಿ ಬಿಡುತ್ತವೆ. ಇವುಗಳ ಈ ಕಾಟದಿಂದ ಮುಕ್ತಿ ಪಡೆಯಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಉಪಯೋಗ ಮಾಡುತ್ತಾರೆ, ಇನ್ನೂ ಕೆಲವು ಹಲವು ಬಗೆಯ ಮನೆ ಮದ್ದುಗಳನ್ನು ಸಹ ಪ್ರಯೋಗ ಮಾಡುತ್ತಾರೆ. ಆದ್ರೆ ಇವುಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದಾದ್ರೆ, ನೆಲ ಒರೆಸುವ ನೀರಿಗೆ ಕರ್ಪೂರವನ್ನು ಸೇರಿಸಿ ಮನೆಯನ್ನು ಕ್ಲೀನ್ ಮಾಡಿ. ಈ ಒಂದು ಸರಳ ಪರಿಹಾರದಿಂದ ಯಾವುದೇ ಹೆಣಗಾಟವಿಲ್ಲದೆ ಸುಲಭವಾಗಿ ಇಳಿಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಇಲಿಗಳನ್ನು ಓಡಿಸಲು ಕರ್ಪೂರ ಹೇಗೆ ಸಹಾಯ ಮಾಡುತ್ತದೆ?
ಇಲಿಗಳನ್ನು ಮನೆಯಿಂದ ಓಡಿಸಲು ಕರ್ಪೂರ ಅಗ್ಗದ ಮತ್ತು ಪರಿಣಾಮಕಾರಿ ಮನೆಮದ್ದಾಗಿದೆ. ಕರ್ಪೂರವು ತುಂಬಾ ಬಲವಾದ ವಾಸನೆಯನ್ನು ಹೊಂದಿರುತ್ತದೆ, ಇದನ್ನು ಇಲಿಗಳು ಇಷ್ಟಪಡುವುದಿಲ್ಲ. ಅವು ಅದರ ಬಲವಾದ ವಾಸನೆಯನ್ನು ಸಹಿಸುವುದಿಲ್ಲ ಮತ್ತು ತಕ್ಷಣವೇ ಆ ಪ್ರದೇಶದಿಂದ ಓಡಿಹೋಗಲು ಪ್ರಯತ್ನಿಸುತ್ತವೆ. ಇದು ಇಲಿಗಳನ್ನು ಓಡಿಸಲು ನೈಸರ್ಗಿಕ ಪರಿಹಾರ ಮಾತ್ರವಲ್ಲದೆ ಸುರಕ್ಷಿತ ಪರಿಹಾರವು ಹೌದು.
ಇಲಿಗಳನ್ನು ಓಡಿಸಲು ಕರ್ಪೂರವನ್ನು ಹೇಗೆ ಬಳಸಬೇಕು?
ನೀವು ನೆಲ ಒರೆಸುವ ನೀರಿಗೆ ನೀರಿಗೆ 4-5 ತುಂಡು ಕರ್ಪೂರವನ್ನು ಸೇರಿಸಿ, ಈ ನೀರನ್ನು ಬಳಸಿ ಇಡೀ ಮನೆಯನ್ನು ಒರೆಸಿ. ಕರ್ಪೂರ ಕಡಿಮೆ ಇದ್ದರೆ ಅದಕ್ಕೆ ನೀವು ಸ್ವಲ್ಪ ಪುದೀನಾ ಎಣ್ಣೆಯನ್ನೂ ಸೇರಿಸಬಹುದು. ಇಲಿಗಳು ಹೆಚ್ಚಾಗಿ ಓಡಾಡುವ ಸ್ಥಳಗಳಾದ ಅಡುಗೆಮನೆ, ಬಾಗಿಲು, ಕಿಟಕಿಗಳ ಬಳಿ ಚೆನ್ನಾಗಿ ಸ್ವಚ್ಛಗೊಳಿಸಿ, ನೀವು ನಿಮ್ಮ ಮನೆಯನ್ನು ಕರ್ಪೂರ ಬೆರೆಸಿದ ನೀರಿನಿಂದ ಒರೆಸಿದ ತಕ್ಷಣ, ಅದರ ವಾಸನೆಯು ಇಲಿಗಳನ್ನು ಕೆರಳಿಸಲು ಪ್ರಾರಂಭಿಸುತ್ತದೆ. ಅವು ಶೀಘ್ರದಲ್ಲೇ ಅಲ್ಲಿಂದ ಓಡಿಹೋಗುತ್ತವೆ. ಪ್ರತಿನಿತ್ಯ ಈ ರೀತಿ ಮಾಡುವುದರಿಂದ ಇಲಿಗಳ ಕಾಟದಿಂದ ಸುಲಭವಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಬಯಸಿದರೆ ನೀವು ಇಲಿಗಳು ಕಂಡುಬರುವ ಇಂತಹ ಸ್ಥಳಗಳಲ್ಲಿ ಸಣ್ಣ ತುಂಡು ಕರ್ಪೂರವನ್ನು ಇಡಬಹುದು.
ಇದನ್ನೂ ಓದಿ: ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ
ಕರ್ಪೂರದ ಇತರೆ ಪ್ರಯೋಜನಗಳೇನು?
ಕರ್ಪೂರವು ಇಲಿಗಳನ್ನು ಹಿಮ್ಮೆಟ್ಟಿಸುವುದು ಮಾತ್ರವಲ್ಲದೆ, ಮನೆಗೆ ಸುವಾಸನೆಯನ್ನು ಕೂಡ ನೀಡುತ್ತದೆ. ಇದರ ಪರಿಮಳವು ತಾಜಾತನದ ಭಾವನೆಯನ್ನು ಸೃಷ್ಟಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ಮನೆಯಿಂದ ದೂರವಿಡುತ್ತದೆ. ಇದು ನೈಸರ್ಗಿಕ ಮತ್ತು ರಾಸಾಯನಿಕ-ಮುಕ್ತ ವಿಧಾನವಾಗಿದೆ. ಕರ್ಪೂರ ಇಲಿಗಳನ್ನು ಮಾತ್ರವಲ್ಲದೆ ಕೀಟಗಳ ಕಾಟದಿಂದಲೂ ಪರಿಹಾರ ಒದಗಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




