ಬಾತ್‌ರೂಮ್ ಟ್ಯಾಪ್, ಕನ್ನಡಿಯ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಸಲಹೆ
ಬಾತ್‌ರೂಮ್‌ನ ಕನ್ನಡಿ ಮತ್ತು ಟ್ಯಾಪ್‌ಗಳನ್ನು ಎಷ್ಟೇ ಕ್ಲೀನ್ ಮಾಡಿದ್ರೂ ಅವುಗಳಲ್ಲಿನ ಹಠಮಾರಿ ಕಲೆಗಳು ಹಾಗೆಯೇ ಉಳಿದು ಬಿಡುತ್ತವೆ. ಈ ಕಲೆಗಳನ್ನು ಹೋಗಲಾಡಿಸುವುದು ಕಷ್ಟದ ಕೆಲಸ ಅದಕ್ಕಾಗಿ ಹಲವರು ದುಬಾರಿ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಇದ್ಯಾವುದ ಅವಶ್ಯಕತೆಯೇ ಇಲ್ಲ, ಮನೆಯಲ್ಲೇ ಸಿಗುವಂತಹ ಈ ಕೆಲವೊಂದು ವಸ್ತುಗಳ ಸಹಾಯದಿಂದ ಯಾವುದೇ ಹೆಣಗಾಟವಿಲ್ಲದೆ ಬಾತ್‌ರೂಮ್‌ನ ಟ್ಯಾಪ್ ಮತ್ತು ಕನ್ನಡಿಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಬಾತ್‌ರೂಮ್ ಕ್ಲೀನ್ ಮಾಡುವುದು ಸಹ ಅತೀ ಮುಖ್ಯವಾಗಿದೆ. ಸ್ನಾನಗೃಹದ ಶುಚಿತ್ವವನ್ನು ಕಾಪಾಡದೇ ಇದ್ದರೆ ಅನೇಕ ರೋಗಗಳನ್ನು ಆಹ್ವಾನ ಮಾಡಿದಂತೆ. ಹಾಗಾಗಿ ಬಹುತೇಕರು ಪ್ರತಿನಿತ್ಯ ತಪ್ಪದೇ ಬಾತ್‌ರೂಮ್ ಕ್ಲೀನ್ ಮಾಡುತ್ತಾರೆ. ಆದ್ರೆ ಬಾತ್‌ರೂಮ್‌ನಲ್ಲಿರು ಟ್ಯಾಪ್ ಮತ್ತು ನಲ್ಲಿಯ ಸ್ವಚ್ಛತೆಗೆ ಗಮನವೇ ಕೊಡುವುದಿಲ್ಲ. ಅವುಗಳಲ್ಲಿ ಮೊಂಡತನದ ಕಲೆಗಳು (stains) ಹಾಗೆಯೇ ಉಳಿದು ಬಿಡುತ್ತವೆ. ಈ ಹಠಮಾರಿ ಕಲೆಗಳನ್ನು ಹೋಗಲಾಡಿಸುವುದು ಬಲು ಕಷ್ಟದ ಕೆಲಸ. ಹಾಗಾಗಿ ಇವುಗಳ ಸ್ವಚ್ಛಗೊಳಿಸಲು ಜನ ದುಬಾರಿ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಆದರೆ ಇದ್ಯಾವುದರ ಅವಶ್ಯಕತೆಯೇ ಇಲ್ಲ, ಈ ಕೆಲವು ಮನೆಮದ್ದುಗಳ ಸಹಾಯದಿಂದ ನಲ್ಲಿ ಮತ್ತು ಕನ್ನಡಿ ಮೇಲಿನ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ಬಾತ್‌ರೂಮ್‌ನ ನಲ್ಲಿ, ಕನ್ನಡಿಯನ್ನು ಸ್ವಚ್ಛಗೊಳಿಸುವ ಮನೆಮದ್ದುಗಳು:
ವಿನೆಗರ್ ಮತ್ತು ನಿಂಬೆ:
ನಲ್ಲಿಯಿಂದ ಸೋಪಿನ ಕಲ್ಮಶ ಹಾಗೂ ಕಲೆಗಳನ್ನು ತೆಗೆದುಹಾಕಲು ನೀವು ವಿನೆಗರ್ ಮತ್ತು ನಿಂಬೆಹಣ್ಣನ್ನು ಬಳಸಬಹುದು. ಇದಕ್ಕಾಗಿ ಒಂದು ಹತ್ತಿ ಬಟ್ಟೆಯನ್ನು ವಿನೆಗರ್‌ನಲ್ಲಿ ಚೆನ್ನಾಗಿ ನೆನೆಸಿ ಆ ಬಟ್ಟೆಯನ್ನು ನಲ್ಲಿಗೆ ಸುತ್ತಿ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಬಟ್ಟೆಯನ್ನು ತೆಗೆದು, ನಿಂಬೆ ಹೋಳಿನ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಅದನ್ನು ನಲ್ಲಿಯ ಮೇಲೆ ಉಜ್ಜಿ. ಇದಾದ ಬಳಿಕ ನೀರಿನಿಂದ ತೊಳೆದು, ಒಣ ಬಟ್ಟೆಯಿಂದ ಒರೆಸಿದರೆ ಟ್ಯಾಪ್ ಹೊಸದರಂತೆ ಹೊಳೆಯುತ್ತದೆ.
ಇದನ್ನೂ ಓದಿ: ಇಲಿಗಳ ಕಾಟದಿಂದ ಶಾಶ್ವತ ಪಡೆಯಲು ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರಸಿ
ಬೇಕಿಂಗ್ ಸೋಡಾ ಸ್ಪ್ರೇ:
ಬಾತ್‌ರೂಮ್‌ನಲ್ಲಿರುವ ಕನ್ನಡಿಯ ಕಲೆಗಳನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಬಳಸಬಹುದು. ಇದಕ್ಕಾಗಿ ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯನ್ನು ತುಂಬಿಸಿ. ಅದನ್ನು ಗಾಜಿನ ಮೇಲೆ ಸಿಂಪಡಿಸಿ ಮತ್ತು 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಒಂದು ನ್ಯೂಸ್ ಪೇಪರ್ ತೆಗೆದುಕೊಂಡು ವೃತ್ತಾಕಾರದ ಚಲನೆಯಲ್ಲಿ ಒರೆಸಿ. ಈ ಮನೆಮದ್ದು ಸುಲಭವಾಗಿ ಕನ್ನಡಿಯಲ್ಲಿ ಅಂಟಿರುವ ಕಲೆಗಳನ್ನು ತೆಗೆದುಹಾಕುತ್ತವೆ.
ಇದಲ್ಲದೆ ವಿನೆಗರ್ ಅಥವಾ ನಿಂಬೆ ರಸವನ್ನು ಹಲ್ಲುಜ್ಜುವ ಬ್ರಷ್‌ಗೆ ಹಚ್ಚಿ ನಲ್ಲಿಯನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ. ಇದು ಕೂಡ ತುಂಬಾನೇ ಪರಿಣಾಮಕಾರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




