ಮಧುಮೇಹ ರೋಗಕ್ಕೆ ರಾಮಬಾಣ ನೆಲ್ಲಿಕಾಯಿ, ಇದನ್ನು ದಿನನಿತ್ಯದ ಆಹಾರದಲ್ಲಿ ಈ ರೀತಿ ಸೇರಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 22, 2023 | 6:41 PM

ಮಧುಮೇಹವನ್ನು ನಿಯಂತ್ರಣದಲ್ಲಿಡಲು ನೆಲ್ಲಿಕಾಯಿಯು ಪರಿಣಾಮಕಾರಿ ಎಂದು ಹೇಳಲಾಗುತ್ತದೆ.  ಆದರೆ ಇದರಲ್ಲಿನ  ಕಹಿ ಗುಣದ ಕಾರಣದಿಂದಾಗಿ ಹೆಚ್ಚಿನ ಜನರು ನೆಲ್ಲಿಕಾಯಿಯನ್ನು ಸೇವನೆ ಮಾಡಡಲು ಇಷ್ಟಪಡುವುದಿಲ್ಲ. ಹಾಗಿರುವಾಗ ಈ ಕೆಲವು ರೀತಿಯಲ್ಲಿ  ನೆಲ್ಲಿಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ  ಸೇರಿಸುವ ಮೂಲಕ ನೆಲ್ಲಿಕಾಯಿಯನ್ನು  ಸೇವನೆ ಮಾಡಬಹುದು. 

ಮಧುಮೇಹ ರೋಗಕ್ಕೆ ರಾಮಬಾಣ ನೆಲ್ಲಿಕಾಯಿ, ಇದನ್ನು ದಿನನಿತ್ಯದ ಆಹಾರದಲ್ಲಿ ಈ ರೀತಿ ಸೇರಿಸಿ
ಸಾಂದರ್ಭಿಕ ಚಿತ್ರ
Follow us on
ಮಧುಮೇಹವು ಜೀವನಶೈಲಿ ಸಂಬಂಧಿತ ಕಾಯಿಲೆಗಳಲ್ಲಿ ಒಂದಾಗಿದೆ.  ಕಳಪೆಮಟ್ಟದ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಸೇವನೆಯ ಕಾರಣದಿಂದಾಗಿ ಇಂದು ಪ್ರಪಂಚದಾದ್ಯಂತ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮಧುಮೇಹದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಧುಮೇಹಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲದಿದ್ದರೂ, ಆಹಾರ ಮತ್ತು ಜೀವನಶೈಲಿಯ ಬದಲಾವಣೆ, ಔಷಧಿಗಳು, ವ್ಯಾಯಾಮದ ಮೂಲಕ  ರಕ್ತದಲ್ಲಿನ  ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. ಮಾತ್ರವಲ್ಲದೆ ನೆಲ್ಲಿಕಾಯಿಯ ನಿಯಮಿತ ಸೇವನೆಯಿಂದಲೂ ಮಧುಮೇಹ ರೋಗವನ್ನು ನಿಯಂತ್ರಣದಲ್ಲಿಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆರೋಗ್ಯ ತಜ್ಞರ ಪ್ರಕಾರ ನೆಲ್ಲಿಕಾಯಿಯನ್ನು ತಿನ್ನುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸಬಹುದು. ನೆಲ್ಲಿಕಾಯಿಯನ್ನು ಮಧುಮೇಹ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ನೆಲ್ಲಿಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿದ್ದು, ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ನೆಲ್ಲಿಕಾಯಿಯು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದ್ದು, ಇದು ದೃಷ್ಟಿಯನ್ನು ಸುಧಾರಿಸಲು ಸಹಾಯಕವಾಗಿದೆ. ಮಧುಮೇಹ ಮಾತ್ರವಲ್ಲದೆ ನೆಲ್ಲಿಕಾಯಿಯು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಸಹಕಾರಿಯಾಗಿದೆ.
• ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ  ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧವಾಗಿದ್ದು, ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.  ಅಲ್ಲದೆ ಇದರಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳಿದ್ದು, ಇದು ಕಾನ್ಸರ್ ರೋಗವನ್ನು ತಡೆಗಟ್ಟಲು ಸಹಕಾರಿಯಾಗಿದೆ.
• ನೆಲ್ಲಿಕಾಯಿಯಲ್ಲಿ ಹೇರಳವಾದ ಫೈಬರ್ ಅಂಶವಿದೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
• ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನೆಲ್ಲಿಕಾಯಿಯು ಪರಿಣಾಮಕಾರಿಯಾಗಿದೆ. ಹಾಗೂ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ.
ಇಷ್ಟೆಲ್ಲಾ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ನೆಲ್ಲಿಕಾಯಿಯನ್ನು ಹಸಿಯಾಗಿ ಅಥವಾ ತಾಜಾವಾಗಿ ಸೇವನೆ ಮಾಡಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಏಕೆಂದರೆ ಇದರರಲ್ಲಿ ಕಹಿ ಅಂಶವಿದೆ ಈ ಕಾರಣದಿಂದ ನೆಲ್ಲಿಕಾಯಿಯನ್ನು ಹೆಚ್ಚಿನವರು ಸೇವಿಸುವುದಿಲ್ಲ. ಹೀಗಿರುವಾಗ ನೀವು ತಾಜಾ ನೆಲ್ಲಿಕಾಯಿಯನ್ನು ಇಷ್ಟಪಡದಿದ್ದರೆ, ಅದನ್ನು ಈ ರೀತಿಯಾಗಿಯೂ ಸೇವನೆ ಮಾಡಬಹುದು:
• ಹಸಿ ನೆಲ್ಲಿಕಾಯಿಯನ್ನೂ ತಿನ್ನಬಹುದು. ಇದರ ರುಚಿ ಸ್ವಲ್ಪ ಹುಳಿ ಮತ್ತು ಕಹಿಯಾಗಿರುವುರಿಂದ ಕೆಲವೊಬ್ಬರು ಇದನ್ನು ಹಿಯಾಗಿ ತಿನ್ನಲು ಇಷ್ಟಪಡುವುದಿಲ್ಲ. ಹೀಗಿರುವಾಗ ತಾಜಾ ನೆಲ್ಲಿಕಾಯಿಯನ್ನು ತೊಳೆದು ನಂತರ ಅವುಗಳನ್ನು ತುಂಡರಿಸಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಅಚ್ಚಖಾರದ ಪುಡಿ ಸೇರಿಸಿ ತಿನ್ನಬಹುದು.
ಇದನ್ನೂ ಓದಿ:ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸುವ ಸುಲಭ ವಿಧಾನ ಇಲ್ಲಿದೆ
• ನೆಲ್ಲಿಕಾಯಿ ಜ್ಯೂಸ್: ನೀವು ಹಸಿ ನೆಲ್ಲಿಕಾಯಿಯನ್ನು ತಿನ್ನಲು ಇಷ್ಟಪಡದಿದ್ದರೆ,  ನೆಲ್ಲಿಕಾಯಿ ಜ್ಯೂಸ್  ಕುಡಿಬಹುದು. ಅದಕ್ಕೆ ಜೇನುತುಪ್ಪವನ್ನು ಬೆರಿಸಿ ಕುಡಿಯಿರಿ ಇದರಿಂದ ಅದರ ಕಹಿ ಅಂಶವೂ ಕಡಿಮೆಯಾಗುತ್ತದೆ.
• ಉಪ್ಪಿನಕಾಯಿ: ನೀವು ನೆಲ್ಲಿಕಾಯಿಯನ್ನು ಹೆಚ್ಚುಕಾಲ ಸಂಗ್ರಹಿಸಿಡಬೇಕೆಂದು ಬಯಸಿದರೆ, ಅದರ ಉಪ್ಪಿನಕಾಯಿಯನ್ನು ಮಾಡಬಹುದು. ಮತ್ತು ಪ್ರತಿನಿತ್ಯ ಊಟ ಮಾಡುವಾಗ ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ಸೇವನೆ ಮಾಡಬಹುದು.  ಈ ಮೂಲಕವು ಇದರ ಪ್ರಯೋಜನವನ್ನು ಪಡೆಯಬಹುದು.
• ನೆಲ್ಲಿಕಾಯಿ ಪುಡಿ: ನೆಲ್ಲಿಕಾಯಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿ, ಆ  ಸ್ಮೂಥಿಗಳು, ಮೊಸರು ಅಥವಾ ನೀವು ಸೇವಿಸುವ ಇತರ ಭಕ್ಷ್ಯಗಳಿಗೆ ಸೇರಿಸಿ ತಿನ್ನಬಹುದು. ಇದಲ್ಲದೆ ನೆಲ್ಲಕಾಯಿ ಪುಡಿಗೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಸೇವನೆ ಮಾಡಬಹುದು.
• ಪೂರಕಗಳು: ಪ್ರತಿನಿತ್ಯ ನೆಲ್ಲಿಕಾಯಿ ಲಭ್ಯವಿಲ್ಲದಿದ್ದರೆ ನೀವು ವೈದ್ಯರ ಸಲಹೆಯ ಮೇರೆಗೆ ನೆಲ್ಲಿಕಾಯಿ ಕ್ಯಾಪ್ಸುಲ್ಗಳು, ಮಾತ್ರೆಗಳು ಅಥವಾ ನೆಲ್ಲಿಕಾಯಿ ಪುಡಿಯಂತಹ ವಿವಿಧ ರೂಪದಲ್ಲಿ ಲಭ್ಯವಿರುವ ನೆಲ್ಲಿಕಾಯಿ ಪೂರಕಗಳನ್ನು ಸೇವಿಸಬಹುದು.
• ನೆಲ್ಲಿಕಾಯಿ ಕ್ಯಾಂಡಿ: ನೆಲ್ಲಿಕಾಯಿಯನ್ನು ಬೆಲ್ಲದ ಪಾಕದಲ್ಲಿ ಬೇಯಿಸಿ, ತಯಾರಿಸಿದ ಸಿಹಿಯಾದ ಕ್ಯಾಂಡಿಯನ್ನು ಕೂಡಾ ಸೇವನೆ ಮಾಡಬಹುದು. ಇದು ತಿನ್ನು ರುಚಿಕರವಾಗಿರುತ್ತದೆ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:40 pm, Fri, 22 September 23