
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಂತಹ ಸವಾಲಿನ ಆಟಗಳನ್ನು ಆಡುವುದೇ ಒಂದು ರೀತಿಯ ಮಜಾ. ಇವುಗಳು ಮೋಜಿನ ಆಟ ಮಾತ್ರವಲ್ಲದೆ, ಮೆದುಳಿಗೆ ವ್ಯಾಯಾಮ ನೀಡುವಂತಹ ಉತ್ತಮ ಮಾರ್ಗವಾಗಿದೆ. ಇಲ್ಲೊಂದು ಅಂತಹದ್ದೇ ಒಗಟಿನ (puzzles) ಆಟವೊಂದು ವೈರಲ್ ಆಗಿದ್ದು, ಅದರಲ್ಲಿ ರಿಯಲ್ ಪಿರಮಿಡ್ ಯಾವುದು ಮತ್ತು ಎಐ ರಚಿತ ಪಿರಮಿಡ್ ಯಾವುದೆಂದು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ಕೇವಲ 21 ಸೆಕೆಂಡುಗಳಲ್ಲಿ ಸರಿಯಾದ ಉತ್ತರವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಹಾಗಿದ್ದರೆ ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರೇ?
ಇತ್ತೀಚಿನ ದಿನಗಳಲ್ಲಿ ಎಐ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಂತೂ ತರಹೇವಾರಿ ಎಐ ವಿಡಿಯೋ, ಫೋಟೋಗಳು ಹರಿದಾಡುತ್ತಿರುತ್ತವೆ. ಅವುಗಳು ನೋಡಲು ರಿಯಲ್ ಆಗಿಯೇ ಕಾಣಿಸುತ್ತವೆ. ಅವುಗಳನ್ನು ಅಷ್ಟು ಸುಲಭವಾಗಿ ಎಐ ರಚಿತ ದೃಶ್ಯ ಎಂದು ಕಂಡು ಹಿಡಿಯಲು ಸಾಧ್ಯವೇ ಆಗುವುದಿಲ್ಲ. ಇದೀಗ ನಿಮಗೊಂದು ಸವಾಲನ್ನು ನೀಡಲಾಗಿದ್ದು, ಈ ಮೇಲಿನ ಚಿತ್ರದಲ್ಲಿರುವ ಎರಡು ಪಿರಮಿಡ್‌ಗಳಲ್ಲಿ ಒಂದು ರಿಯಲ್ ಆಗಿದ್ದರೆ, ಇನ್ನೊಂದು ಎಐ ರಚಿತ ಪಿರಮಿಡ್ ಆಗಿದೆ. ಆ ಎರಡರಲ್ಲಿ ಯಾವುದು ನೈಜ ಯಾವುದು ಫೇಕ್ ಪಿರಮಿಡ್ ಎಂಬುದನ್ನು ನೀವು ಕಂಡುಹಿಡಿಯಬೇಕು.
ಉತ್ತಮ ಐಕ್ಯೂ ಮಟ್ಟ, ಏಕಾಗ್ರತೆಯನ್ನು ಹೊಂದಿರುವವರಿಗೆ ಮಾತ್ರ ಈ ಚಿತ್ರದಲ್ಲಿರುವ ನೈಜ ಪಿರಮಿಡ್ ಯಾವುದೆಂದು ಕಂಡು ಹಿಡಿಯಲು ಸಾಧ್ಯವಂತೆ. ಹಾಗಿದ್ರೆ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ನೀವು ಸಿದ್ಧರಿದ್ದೀರಿ ಅಲ್ವಾ. ನೀವು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ, ಏಕಾಗ್ರತೆಯಿಂದ ಆ ಎರಡು ಚಿತ್ರಗಳನ್ನು ಗಮನಿಸಿ ಕೇವಲ 21 ಸೆಕೆಂಡುಗಳ ಒಳಗಾಗಿ ಅದರಲ್ಲಿ ರಿಯಲ್ ಪಿರಮಿಡ್ ಯಾವುದು, ಫೇಕ್ ಪಿರಮಿಡ್ ಯಾವುದೆಂದು ಕಂಡುಹಿಡಿಯಬೇಕು.
ಇದನ್ನೂ ಓದಿ: ಒಂದು ಸವಾಲು; ಈ ಚಿತ್ರದಲ್ಲಿ ಒಟ್ಟು ಎಷ್ಟು ನಂಬರ್‌ಗಳಿವೆ ಹೇಳಿ
ಈ ಚಿತ್ರದಲ್ಲಿರುವ ಎರಡು ಪಿರಮಿಡ್‌ಗಳಲ್ಲಿ ಯಾವುದು ನೈಜ ಯಾವುದು ಫೇಕ್ ಎಂಬುದನ್ನು ಕಂಡು ಹಿಡಿಯುವುದು ಬಹಳ ಕಷ್ಟಸಾಧ್ಯವಾಗಿದೆ. ನೀವು ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಿದರೆ ಮಾತ್ರ ಉತ್ತರವನ್ನು ಕಂಡುಕೊಳ್ಳಲು ಸಾಧ್ಯ. ಹೀಗಿರುವಾಗ ನೀವು ಸರಿಯಾದ ಉತ್ತರವನ್ನು ಕಂಡುಕೊಂಡಿದ್ದರೆ ಧನ್ಯವಾದಗಳು. ನೀವು ಉತ್ತಮ ಐಕ್ಯೂ ಮಟ್ಟವನ್ನು ಹೊಂದಿದ್ದೀರಿ ಎಂದರ್ಥ.
ಈ ಚಿತ್ರದಲ್ಲಿ ರಿಯಲ್ ಪಿರಮಿಡ್ ಯಾವುದು, ಎಐ ಪಿರಮಿಡ್ ಯಾವುದೆಂದು ಗುರುತಿಸಲು ಸಾಧ್ಯವಾಗದಿದ್ದರೆ ಚಿಂತೆ ಬೇಡ, ಇಲ್ಲಿದೆ ಉತ್ತರ, ಎಡಭಾಗದಲ್ಲಿರುವ ಚಿತ್ರವು AI- ರಚಿತವಾಗಿದ್ದರೆ, ಬಲ ಭಾಗದಲ್ಲಿರುವುದು ರಿಯಲ್ ಪಿರಮಿಡ್‌ನ ಚಿತ್ರವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ