AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya 2021: ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಲು ಯಾವ ಮುಹೂರ್ತ ಒಳ್ಳೆಯದು?

ಅಕ್ಷಯ ತೃತೀಯದಂದು ಹೆಚ್ಚಿನ ಜನರು ಚಿನ್ನವನ್ನು ಖರೀದಿಸುತ್ತಾರೆ. ಏಕೆಂದರೆ ಈ ದಿನ ಚಿನ್ನವನ್ನು ಖರೀದಿಸುವುದರಿಂದ ಭವಿಷ್ಯದಲ್ಲಿ ಸಮೃದ್ಧಿ ಮತ್ತು ಹೆಚ್ಚಿನ ಸಂಪತ್ತು ನಮ್ಮನ್ನು ಅರಿಸಿ ಬರುತ್ತದೆ ಎನ್ನುವ ನಂಬಿಕೆಯೊಂದು ಅನಾದಿ ಕಾಲದಿಂದ ನಮ್ಮ ಜೊತೆಗಿದೆ.

Akshaya Tritiya 2021: ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಲು ಯಾವ ಮುಹೂರ್ತ ಒಳ್ಳೆಯದು?
ಸಾಂದರ್ಭಿಕ ಚಿತ್ರ
preethi shettigar
| Edited By: |

Updated on:May 04, 2021 | 12:18 PM

Share

ಅಕ್ಷಯ ತೃತೀಯವನ್ನು ಅತಿಶಯ ಎಂದು ಕೂಡ ಕರೆಯುತ್ತಾರೆ. ಇದು ಹಿಂದೂಗಳ ಆಚರಣೆಗಳಲ್ಲಿ ಅತ್ಯಂತ ಶುಭವಾದದ್ದು ಎಂಬ ಅಗ್ಗಳಿಕೆಯನ್ನು ಪಡೆದಿದೆ. ಅಲ್ಲದೆ ಈ ದಿನವು ಅದೃಷ್ಟ ಮತ್ತು ಯಶಸ್ಸನ್ನು ತಂದುಕೊಡುತ್ತದೆ ಎಂಬ ನಂಬಿಕೆ ಕೂಡ ಇದೆ. ಹಿಂದೂ ಪಂಚಾಂಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯವನ್ನು ಅಕ್ಷಯ ತೃತೀಯ ಎನ್ನಲಾಗುತ್ತದೆ.

ಅಕ್ಷಯ ತೃತೀಯ ಎಂಬುದು ಸಂಸ್ಕೃತ ಪದವಾಗಿದ್ದು, ಇಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ. ಎಂದಿಗೂ ಕಡಿಮೆಯಾಗದಷ್ಟು ಸಂತೋಷ ಮತ್ತು ಯಶಸ್ಸು ಇರುತ್ತದೆ ಎಂದು ಕೂಡ ಹೇಳಲಾಗುತ್ತದೆ. ಇನ್ನು ತೃತೀಯ ಎಂದರೆ ವೈಶಾಖ ಮಾಸದ ಮೂರನೆಯ ದಿನ ಎಂದರ್ಥ. ಆದ್ದರಿಂದ ಈ ದಿನದಂದು ಯಾವುದೇ ಜಪ, ಯಜ್ಞ, ಪಿತೃತರ್ಪಣ ಮತ್ತು ದಾನ ಮಾಡುವುದರಿಂದ ಅತಿ ಹೆಚ್ಚು ಪ್ರಯೋಜನಗಳು ಆಗುತ್ತದೆ. ಅಲ್ಲದೇ ಇದರಿಂದ ಸಿಗುವ ಪುಣ್ಯ ಎಂದಿಗೂ ಕಡಿಮೆಯಾಗುವುದಿಲ್ಲ ಮತ್ತು ವ್ಯಕ್ತಿಯೊಂದಿಗೆ ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ.

ಅಕ್ಷಯ ತೃತೀಯದಂದು ಹೆಚ್ಚಿನ ಜನರು ಚಿನ್ನವನ್ನು ಖರೀದಿಸುತ್ತಾರೆ. ಏಕೆಂದರೆ ಈ ದಿನ ಚಿನ್ನವನ್ನು ಖರೀದಿಸುವುದರಿಂದ ಭವಿಷ್ಯದಲ್ಲಿ ಸಮೃದ್ಧಿ ಮತ್ತು ಹೆಚ್ಚಿನ ಸಂಪತ್ತು ನಮ್ಮನ್ನು ಅರಿಸಿ ಬರುತ್ತದೆ ಎನ್ನುವ ನಂಬಿಕೆ ಅನಾದಿ ಕಾಲದಿಂದ ನಮ್ಮ ಜೊತೆಗಿದೆ.

2021 ರಲ್ಲಿ ಅಕ್ಷಯ ತೃತೀಯ ಯಾವಾಗ? ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಅಕ್ಷಯ ತೃತೀಯವು ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ. ಅದರಂತೆ ಈ ಬಾರಿ ಅಕ್ಷಯ ತೃತೀಯವು 2021ರ ಮೇ 14ರ ಶುಕ್ರವಾರದಂದು ಬಂದಿದೆ.

ತೃತೀಯ ತಿಥಿ 2021 ರ ಮೇ 14 ರಂದು ಬೆಳಗ್ಗೆ 05:38ಕ್ಕೆ ಪ್ರಾರಂಭವಾಗಿ 2021 ರ ಮೇ 15 ರಂದು 07:59ಕ್ಕೆ ಕೊನೆಗೊಳ್ಳುತ್ತದೆ. ಅಕ್ಷಯ ತೃತೀಯ ಪೂಜಾ ಮುಹೂರ್ತ ಬೆಳಗ್ಗೆ 05:38ರಿಂದ 12:18 ರವರೆಗೆ ಇರಲಿದೆ. (ಅವಧಿ: 06 ಗಂಟೆ 40 ನಿಮಿಷಗಳು)

ಈ ಬಾರಿ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಸಮಯ: ಅಕ್ಷಯ ತೃತೀಯದ ದಿನದಂದು ಚಿನ್ನ ಖರೀದಿಸಲು ಇಚ್ಛಿಸುವವರು 2021ರ ಮೇ 14 ರಂದು ಬೆಳಗ್ಗೆ 05:30 ರಿಂದ ಮೇ 15 ರವರೆಗೆ (ಅವಧಿ: 23 ಗಂಟೆ 52 ನಿಮಿಷಗಳು) ಆಭರಣಗಳನ್ನು ಕೊಂಡುಕೊಳ್ಳಬಹುದು.

ದಕ್ಷಿಣ ಭಾರತೀಯರಿಗೆ ಅಕ್ಷಯ ತೃತೀಯದ ಇಡೀ ದಿನ ಒಳ್ಳೆಯದು: ಬೆಳಗ್ಗೆ ಮುಹೂರ್ತ (ಚರ, ಲಾಭ, ಅಮೃತ): 05:38 ರಿಂದ 10:36 ಮಧ್ಯಾಹ್ನ ಮುಹೂರ್ತ(ಚರ): 17:23 ರಿಂದ 19:04 ಮಧ್ಯಾಹ್ನ ಮುಹೂರ್ತ(ಶುಭ): 12:18 ರಿಂದ 13:59 ರಾತ್ರಿ ಮುಹೂರ್ತ (ಲಾಭ): 21:41 ರಿಂದ 22:59 ರಾತ್ರಿ ಮುಹೂರ್ತ (ಶುಭ, ಅಮೃತ, ಚರ): 00:17 ರಿಂದ 04:12, ಮೇ 15

ಹಿಂದೂ ಪುರಾಣದ ಪ್ರಕಾರ, ತ್ರೇತಾ ಯುಗವು ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ಸಾಮಾನ್ಯವಾಗಿ, ಅಕ್ಷಯ ತೃತೀಯ ಮತ್ತು ಪರಶುರಾಮರ ಜನ್ಮದಿನ (ಭಗವಾನ್ ವಿಷ್ಣುವಿನ 6 ನೇ ಅವತಾರ) ಒಂದೇ ಆಗಿರುತ್ತದೆ. ಆದಾಗ್ಯೂ, ಕೆಲವೊಮ್ಮೆ ತಿಥಿಯನ್ನು ಆಧರಿಸಿ ಪರಶುರಾಮ ಜಯಂತಿಯನ್ನು ಅಕ್ಷಯ ತೃತೀಯ ದಿನಕ್ಕೆ ಒಂದು ದಿನ ಮೊದಲು ಆಚರಿಸಲಾಗುತ್ತದೆ.

ಇದನ್ನೂ ಓದಿ:

Gold Price Today: ಈ ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ ಇಳಿಕೆ

Gold Rate Today: ಚಿನ್ನ ಕೊಳ್ಳುವ ಮೊದಲು ದರ ಗಮನಿಸಿ; ಕೂಡಿಟ್ಟ ಹಣಕ್ಕೆ ಸರಿಹೊಂದುವುದಾದರೆ ಚಿನ್ನ ಖರೀದಿಸಿ

Published On - 12:10 pm, Tue, 4 May 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್