Akshaya Tritiya 2024 : ಅಕ್ಷಯ ತೃತೀಯದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಹಾರೈಸಿ ಸಂಭ್ರಮಿಸಿ

ಅಕ್ಷಯ ತೃತೀಯದಂದು ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೆ, ಅದರ ಫಲವು ಶುಭದಾಯಕವಾಗಿರುತ್ತದೆ ಎನ್ನುವ ನಂಬಿಕೆಯಿದೆ. ಈ ಬಾರಿ ಅಕ್ಷಯ ತೃತೀಯ ಹಬ್ಬವು ಮೇ 10 ಕ್ಕೆ ಬಂದಿದ್ದು, ಈ ಶುಭ ದಿನದಂದು ಹೆಚ್ಚಿನವರು ಚಿನ್ನ ಹಾಗೂ ಬೆಳ್ಳಿಯನ್ನು ಖರೀದಿಗೆ ಮುಂದಾಗುತ್ತಾರೆ. ಅದಲ್ಲದೇ, ಹಬ್ಬವನ್ನು ನಿಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಈ ರೀತಿ ಶುಭಾಶಯಗಳನ್ನು ಕೋರಿ ಅಕ್ಷಯ ತೃತೀಯವನ್ನು ಸಂಭ್ರಮಿಸಬಹುದು.

Akshaya Tritiya 2024 : ಅಕ್ಷಯ ತೃತೀಯದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಹಾರೈಸಿ ಸಂಭ್ರಮಿಸಿ
Akshaya Tritiya
Edited By:

Updated on: May 10, 2024 | 7:56 AM

ಹಿಂದೂಗಳ ಪಾಲಿಗೆ ಅಕ್ಷಯ ತೃತೀಯವು ಬಹಳ ಪ್ರಮುಖವಾದ ದಿನವಾಗಿದೆ. ಇದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಈ ಅಕ್ಷಯ ತೃತೀಯ. ಭಗವಾನ್​ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಲಾಗುವ ಅಕ್ಷಯ ತೃತೀಯವನ್ನು ಈ ಬಾರಿ ಮೇ 10 ರಂದು ಆಚರಿಸಲಾಗುತ್ತಿದೆ. ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲದಿದ್ದರೆ ಆಪ್ತರಿಗೆ ಸಂದೇಶ ಕಳುಹಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು.

  1. ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ, ಲಕ್ಷ್ಮಿ ಸದಾ ನಿಮ್ಮೊಂದಿಗೆ ಇರಲಿ ಎಂದು ಹಾರೈಸುವೆ. ಅಕ್ಷಯ ತೃತೀಯ ಶುಭಾಶಯಗಳು.
  2. ಈ ವರ್ಷದ ಅಕ್ಷಯ ತೃತೀಯವು ನಿಮ್ಮ ಕುಟುಂಬಕ್ಕೆ ಸಂತೋಷದ ಜೊತೆಗೆ ಹೊಸ ಭರವಸೆಯನ್ನು ತರಲಿ.. ಅಕ್ಷಯ ತೃತೀಯದ ಶುಭಾಶಯಗಳು
  3. ‘ಅಕ್ಷಯ ಎಂದರೆ ಶಾಶ್ವತ ಎನ್ನುವುದನ್ನು ಸೂಚಿಸುತ್ತದೆ. ಈ ದಿನ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಂಪತ್ತು ಎಂದೂ ಶಾಶ್ವತವಾಗಿರಲಿ. ಹಬ್ಬವನ್ನು ನಗುತ್ತಾ ಆಚರಿಸಿ, ನಿಮ್ಮ ಕುಟುಂಬದ ತುಂಬಾ ನಗುವೇ ತುಂಬಿರಲಿ. ಹಬ್ಬದ ಶುಭಾಶಯಗಳು
  4. ಅಕ್ಷಯ ತೃತೀಯದ ಈ ದಿನದಂದು ಸಮೃದ್ಧಿ ಮತ್ತು ಸಂಪತ್ತನ್ನು ಕಲ್ಪಿಸಲಿ, ಆ ಭಗವಾನ್ ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲಿರಲಿ.
  5. ‘ಉಜ್ವಲ ಭವಿಷ್ಯದ ಕನಸು ನನಸಾಗಲಿ.. ಆರೋಗ್ಯವಾದ ಜೀವನ ನಿಮ್ಮದಾಗಲಿ. ನಿಮ್ಮ ಜೀವನದ ಏಳಿಗೆಯನ್ನೇ ಬಯಸುವವನಿಂದ ಅಕ್ಷಯ ತೃತೀಯದ ಶುಭಾಶಯಗಳು’
  6. ಅಕ್ಷಯ ತೃತೀಯದಿಂದ ನಿಮ್ಮ ಜೀವನ ಸುಖಕರವಾಗಿರಲಿ. ನೆಮ್ಮದಿಯುತ ಜೀವನ ನಿಮ್ಮದಾಗಿರಲಿ. ಭರವಸೆಯ ಬೆಳಕಿನೊಂದಿಗೆ ಸಂಪತ್ತು ಸಿಗಲಿ ಎಂದು ಹಾರೈಸುತ್ತ ಅಕ್ಷಯ ತೃತೀಯ ಶುಭಾಶಯಗಳು.
  7. ಈ ಅಕ್ಷಯ ತೃತೀಯ ನಿಮ್ಮ ಸಂಪತ್ತು, ಆರೋಗ್ಯ ವೃದ್ಧಿಸಲಿ, ಮನೆಯಲ್ಲಿ ಖುಷಿ ತುಂಬಲಿ ಎಂದು ಆಶಿಸುತ್ತ ಈ ದಿನವು ಶುಭದಾಯಕವಾಗಿರಲಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ