Anger Issues: ನೀವು ಚಿಕ್ಕ ಚಿಕ್ಕ ವಿಷಯಕ್ಕೂ ಕೋಪಗೊಳ್ಳುತ್ತೀರಾ? ನಿಮ್ಮಲ್ಲಿ ಈ ವಿಟಮಿನ್ ಕೊರತೆ ಇರಬಹುದು

ಕೋಪಗೊಳ್ಳಲು ಹಲವು ಕಾರಣಗಳಿವೆ ,ಆದರೆ ಕೆಲವು ಸಂದರ್ಭಗಳಲ್ಲಿ ವಿಟಮಿನ್ ಕೊರತೆಯೂ ಕೋಪಕ್ಕೆ ಕಾರಣ ಎಂದು ನಿಮಗೆ ತಿಳಿದಿದೆಯೇ? ಹೌದು, ಕೆಲವು ಜೀವಸತ್ವಗಳ ಕೊರತೆಯಿಂದಾಗಿ, ಒಬ್ಬ ವ್ಯಕ್ತಿಯು ಚಿಕ್ಕ ಚಿಕ್ಕ ವಿಷಯಕ್ಕೆ ಕೋಪಗೊಳ್ಳುತ್ತಾನೆ. ಆದ್ದರಿಂದ ವಿಟಮಿನ್​​ ಕೊರತೆಯನ್ನು ನೀಗಿಸಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Anger Issues: ನೀವು ಚಿಕ್ಕ ಚಿಕ್ಕ ವಿಷಯಕ್ಕೂ ಕೋಪಗೊಳ್ಳುತ್ತೀರಾ? ನಿಮ್ಮಲ್ಲಿ ಈ ವಿಟಮಿನ್ ಕೊರತೆ ಇರಬಹುದು
Anger IssuesImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Dec 23, 2023 | 11:54 AM

ಕೋಪ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವ ಸಹಜ ಗುಣ. ಆದರೆ ಗುಣ ವಿಪರೀತಕ್ಕೇರಿದರೆ ನಿಮ್ಮ ಆರೋಗ್ಯ ಕೆಡುವುದರ ಜೊತೆಗೆ ನಿಮ್ಮ ಆಪ್ತರೊಂದಿಗಿರುವ ಸಂಬಂಧವು ಹಾಳಾಗುತ್ತದೆ. ಕೋಪಗೊಳ್ಳಲು ಹಲವು ಕಾರಣಗಳಿವೆ ,ಆದರೆ ಕೆಲವು ಸಂದರ್ಭಗಳಲ್ಲಿ ವಿಟಮಿನ್ ಕೊರತೆಯೂ ಕೋಪಕ್ಕೆ ಕಾರಣ ಎಂದು ನಿಮಗೆ ತಿಳಿದಿದೆಯೇ? ಕೆಲವು ಜೀವಸತ್ವಗಳ ಕೊರತೆಯಿಂದಾಗಿ, ಒಬ್ಬ ವ್ಯಕ್ತಿಯು ಚಿಕ್ಕ ಚಿಕ್ಕ ವಿಷಯಕ್ಕೂ ಕೋಪಗೊಳ್ಳುತ್ತಾನೆ. ಯಾವುದೇ ವಿಟಮಿನ್ ಕೊರತೆಯು ಆಗಾಗ್ಗೆ ಕೋಪವನ್ನು ಉಂಟುಮಾಡುತ್ತದೆ. ಆದ್ದರಿಂದ ವಿಟಮಿನ್​​ ಕೊರತೆಯನ್ನು ನೀಗಿಸಲು ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಚಿಕ್ಕ ಚಿಕ್ಕ ವಿಷಯಕ್ಕೂ ಕೋಪಗೊಳ್ಳಲು ನಿಮ್ಮಲ್ಲಿ ಈ ವಿಟಮಿನ್ ಕೊರತೆ ಇರಬಹುದು:

  • ವಿಟಾಮಿನ್ ಬಿ6 ಕೊರತೆಯಾದರೆ ವ್ಯಕ್ತಿಗೆ ಆಗಾಗ ಸಿಟ್ಟು ಬರುತ್ತದೆ ಎನ್ನುತ್ತಾರೆ ತಜ್ಞರು. ಈ ವಿಟಮಿನ್ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗಾಗಿ ಆಹಾರದಲ್ಲಿ ವಿಟಮಿನ್ ಬಿ 6 ಇದೆ ಎಂದು ಖಚಿತಪಡಿಸಿಕೊಳ್ಳಿ. ದೇಹಕ್ಕೆ ಸಾಕಷ್ಟು ವಿಟಮಿನ್ ಬಿ6 ಸಿಗದಿದ್ದರೆ ಅದು ಸದಾ ಕೋಪಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.
  • ಕೋಪಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ವಿಟಮಿನ್ ಬಿ 12 ಕೊರತೆ. ಈ ವಿಟಮಿನ್ ಕೊರತೆಯು ನಿರಂತರ ಆಯಾಸ ಮತ್ತು ಆಲಸ್ಯವನ್ನು ಉಂಟುಮಾಡುತ್ತದೆ. ಈ ವಿಟಮಿನ್ ಕೊರತೆಯು ಅನಗತ್ಯ ವಿಷಯಗಳಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ವಿಟಮಿನ್ ಬಿ12 ಕೊರತೆಯಿಂದಲೂ ಖಿನ್ನತೆ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.
  • ದೇಹಕ್ಕೆ ಸಾಕಷ್ಟು ಜಿಂಕ್(Zinc) ಸಿಗದಿದ್ದರೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ . ಸತುವಿನ ಕೊರತೆಯು ಮೂಡ್ ಸ್ವಿಂಗ್, ಆತಂಕ, ಕಿರಿಕಿರಿ ಮತ್ತು ಖಿನ್ನತೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
  • ಮೆಗ್ನೀಸಿಯಮ್ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ . ದೇಹವು ಸಾಕಷ್ಟು ಮೆಗ್ನೀಸಿಯಮ್ ಅನ್ನು ಪಡೆಯದಿದ್ದರೆ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದು ನಿರಂತರ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ಸಕ್ಕರೆ ಬಳಸದಿದ್ದರೆ ನಮ್ಮ ದೇಹದಲ್ಲಿ ಏನು ಬದಲಾವಣೆಯಾಗುತ್ತೆ?

ನಿರಂತರ ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಮತ್ತು ವಿನಾಕಾರಣ ಸಿಟ್ಟು ಮಾಡಿಕೊಳ್ಳುವವರು ಖಂಡಿತಾ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಆದಷ್ಟು ಬೂಡ್ ಬೂಸ್ಟಿಂಗ್ ಫುಡ್ ಗಳನ್ನು ಸೇವಿಸಿ . ವಿಟಮಿನ್ ಬಿ 6 ಮತ್ತು ವಿಟಮಿನ್ ಬಿ 12 ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಹಸಿರು ಸೊಪ್ಪು ತರಕಾರಿಗಳು, ಆವಕಾಡೊ ಮತ್ತು ಮಾಂಸ ಆಹಾರದ ಭಾಗವಾಗಿರಬೇಕು. ಇವುಗಳ ಜೊತೆಯಲ್ಲಿ ಹೆಚ್ಚು ಸತು ಮತ್ತು ಮೆಗ್ನೀಸಿಯಮ್ ಹೊಂದಿರುವ ಮೀನು, ಬ್ರೊಕೊಲಿ ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:54 am, Sat, 23 December 23