AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸರಳ ಸಲಹೆಗಳು

ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಮೋಜಿನ ಪಾರ್ಟಿ, ರುಚಿ ರುಚಿಯ ಊಟ, ತಿಂಡಿಗಿಂತಲೂ ಮೊದಲು ಆರೋಗ್ಯದ ಬಗ್ಗೆ ಗಮನ ನೀಡುವುದು ಅತ್ಯಗತ್ಯ. ಈ ಬಗ್ಗೆ ಇಂಡಸ್ ಹೆಲ್ತ್ ಪ್ಲಸ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಿವೆಂಟಿವ್ ಹೆಲ್ತ್ಕೇರ್ ಸ್ಪೆಷಲಿಸ್ಟ್ ಅಮೋಲ್ ನಾಯ್ಕವಾಡಿ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸರಳ ಸಲಹೆಗಳು
New Year celebrations
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Dec 23, 2023 | 7:22 PM

ಚಳಿಗಾಲದ ರಜಾ ದಿನಗಳಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಅದರಲ್ಲಿಯೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳು ಇರುವುದರಿಂದ ಈ ಋತುವಿನಲ್ಲಿ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾಗಿ ಮೋಜಿನ ಪಾರ್ಟಿ, ರುಚಿ ರುಚಿಯ ಊಟ, ತಿಂಡಿಗಿಂತಲೂ ಮೊದಲು ಆರೋಗ್ಯದ ಬಗ್ಗೆ ಗಮನ ನೀಡುವುದು ಅತ್ಯಗತ್ಯ. ಈ ಬಗ್ಗೆ ಇಂಡಸ್ ಹೆಲ್ತ್ ಪ್ಲಸ್​​​​ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಿವೆಂಟಿವ್ ಹೆಲ್ತ್ಕೇರ್ ಸ್ಪೆಷಲಿಸ್ಟ್ ಅಮೋಲ್ ನಾಯ್ಕವಾಡಿ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ:

ಎಲ್ಲಾ ರೀತಿಯ ರುಚಿಕರವಾದ ಸಿಹಿ ತಿಂಡಿಗಳನ್ನು ತಿನ್ನುವ ಮೊದಲು ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಋತುವಿನ ಊಟವನ್ನು ಆನಂದಿಸಿ, ಆದರೆ ನಿಮ್ಮ ಆದ್ಯತೆಗಳನ್ನು ಗಮನಿಸಿ ಜೊತೆಗೆ ಸಾಧ್ಯವಾದಷ್ಟು ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳಿ. ನಿಮ್ಮ ಆಹಾರವನ್ನು ಸಮತೋಲನದಲ್ಲಿಡಲು, ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿ.

ಸಾಕಷ್ಟು ನೀರು ಕುಡಿಯಿರಿ:

ತೇವಾಂಶದಿಂದಿರಲು  ಹಗಲಿನಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯದಿರಿ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಹಬ್ಬಗಳ ಸಮಯದಲ್ಲಿ ಅತಿಯಾಗಿ ಸೇವನೆ ಮಾಡುವುದನ್ನು ತಡೆಯುತ್ತದೆ.

ಅತಿಯಾಗಿ ಸಿಹಿ ತಿನ್ನುವುದನ್ನು ತಪ್ಪಿಸಿ:

ಯಾವುದೇ ಕಾರ್ಯಕ್ರಮ ಅಥವಾ ಬೇರೆಯವರ ಮೆನೆಗೆ ಊಟಕ್ಕೆ ಹಾಜರಾಗುವ ಮೊದಲು ಆರೋಗ್ಯಕರ ಊಟ ಮಾಡಬೇಕು ಎನ್ನುವುದನ್ನು ಮರೆಯಬೇಡಿ. ಹೆಚ್ಚಿನ ಕ್ಯಾಲೊರಿ ಇರುವ ತಿಂಡಿಗಳು ಮತ್ತು ಅತಿಯಾಗಿ ಸಿಹಿ ತಿಂಡಿ ತಿನ್ನುವುದನ್ನು ತಪ್ಪಿಸಿ.

ಸ್ಮಾರ್ಟ್ ಆಯ್ಕೆಯನ್ನು ಅಭ್ಯಾಸ ಮಾಡಿಕೊಳ್ಳಿ:

ಸಾಧ್ಯವಾದಷ್ಟು, ಆರೋಗ್ಯಕರ ಬದಲಿಗಳನ್ನು ಬಳಸಿ. ಕರಿದ ಆಹಾರಗಳಿಗಿಂತ ಬೇಯಿಸಿದ ಆಹಾರವನ್ನು ಆರಿಸಿಕೊಳ್ಳಿ, ಸಿಹಿ ತಿಂಡಿಗಿಂತ ಹಣ್ಣುಗಳು, ಡ್ರೈ ಫ್ರುಟ್ಸ್ ಗಳನ್ನೂ ಆಹಾರದಲ್ಲಿ ಸೇರಿಸಿಕೊಳ್ಳಿ.

ದಿನಚರಿಯಲ್ಲಿ ವ್ಯಾಯಾಮವನ್ನು ಅಳವಡಿಸಿಕೊಳ್ಳಿ:

ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ವ್ಯಾಯಾಮಕ್ಕೆ ಸಮಯವನ್ನು ಮೀಸಲಿಡಿ. ಯೋಗ, ನೃತ್ಯ, ಚುರುಕಾದ ನಡಿಗೆ ಅಥವಾ ನಿಮಗೆ ಶಕ್ತಿ ಮತ್ತು ದೇಹಕ್ಕೆ ಚಲನೆ ನೀಡುವ ಯಾವುದೇ ವ್ಯಾಯಾಮದಂತಹ ಆನಂದದಾಯಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.

ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ:

ರಜಾ ದಿನದಲ್ಲಿ ಅತಿಯಾಗಿ ಊಟ ಮಾಡಿದ ಮೇಲೆ ವ್ಯಾಯಾಮ ಅಥವಾ ಹೊರಾಂಗಣ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಹಬ್ಬಗಳ ಸಮಯದಲ್ಲಿ ಸಕ್ರಿಯವಾಗಿರಲು ಸ್ಟ್ರೆಚ್ ಗಳು ಅಥವಾ ಹತ್ತು ನಿಮಿಷಗಳ ವ್ಯಾಯಾಮಗಳು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಭಾರತದ ಈ 5 ತಾಣಗಳಲ್ಲಿ ಕಡಿಮೆ ಬಜೆಟ್‌ನಲ್ಲಿ ಹೊಸ ವರ್ಷ ಆಚರಿಸಿ

ಒತ್ತಡವನ್ನು ಕಡಿಮೆ ಮಾಡುವ ತಂತ್ರಗಳನ್ನು ಅಭ್ಯಾಸ ಮಾಡಿಕೊಳ್ಳಿ:

ಗೊಂದಲದ ನಡುವೆ ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಆಳವಾದ ಉಸಿರಾಟ, ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಜೊತೆಗೆ ಮಾನಸಿಕ ಆರೋಗ್ಯವೂ ಸುಧಾರಣೆಯಾಗುತ್ತದೆ.

ನಿದ್ರೆಯ ವೇಳಾಪಟ್ಟಿಯನ್ನು ಪಾಲಿಸಿ:

ಹಬ್ಬ, ಮೋಜು, ಪಾರ್ಟಿಗಳ ನಡುವೆ ಸಾಕಷ್ಟು ನಿದ್ರೆ ಮಾಡುವುದನ್ನು ಮರೆಯಬೇಡಿ. ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳ್ಳಲು ಪ್ರತಿ ರಾತ್ರಿ 7- 9 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯಿರಿ. ಬೇಕಾದಲ್ಲಿ ಮಲಗುವ ಮೊದಲು ಕೆಲವು ವಿಶ್ರಾಂತಿ ಚಟುವಟಿಕೆಗಳನ್ನು ಮಾಡಿ, ಉದಾಹರಣೆಗೆ ಓದುವುದು, ಸ್ನಾನ ಮಾಡುವುದು ಅಥವಾ ಹಿತವಾದ ಸಂಗೀತವನ್ನು ಕೇಳುವುದನ್ನು ರೂಢಿಸಿಕೊಳ್ಳಿ.

ಎಲ್ಲ ಕಡೆಗಳಲ್ಲಿಯೂ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು ಈ ರೀತಿಯ ಆರೋಗ್ಯಕರ ಅಭ್ಯಾಸಗಳನ್ನು ನಿಮ್ಮ ಆಚರಣೆಗಳಲ್ಲಿ ಸೇರಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸಂತೋಷದ ಸಮಯಗಳನ್ನು ಆನಂದಿಸಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ