AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anger Management: ಅತಿಯಾದ ಕೋಪಕ್ಕೆ ಲಗಾಮು ಹಾಕಲು ಇಲ್ಲಿದೆ ಸಿಂಪಲ್ ಟಿಪ್ಸ್

ಕೋಪವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ನಮ್ಮ ಕಣ್ಣೆದುರು ನಿತ್ಯವೂ ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಗೊಳ್ಳುವವರೇ ಹೆಚ್ಚು.

Anger Management: ಅತಿಯಾದ ಕೋಪಕ್ಕೆ ಲಗಾಮು ಹಾಕಲು ಇಲ್ಲಿದೆ ಸಿಂಪಲ್ ಟಿಪ್ಸ್
ಕೋಪ ನಿಯಂತ್ರಣಕ್ಕೆ ಸಲಹೆಗಳು (ಫೋಟೋ: ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Dec 26, 2022 | 6:15 AM

ಕೋಪವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ನಮ್ಮ ಕಣ್ಣೆದುರು ನಿತ್ಯವೂ ಸಣ್ಣಪುಟ್ಟ ವಿಷಯಗಳಿಗೆ ಕೋಪಗೊಳ್ಳುವವರೇ ಹೆಚ್ಚು. ಆದರೆ ಆ ಕೋಪದಿಂದ ಏನನ್ನು ಸಾಧಿಸಬಹುದು ಎಂದು ಒಮ್ಮೆ ಯೋಚಿಸಬೇಕು. ಕೋಪದ ಹೆಚ್ಚಳವು ತನ್ನನ್ನು ತಾನೇ ನಿಯಂತ್ರಿಸಲು ಅಸಮರ್ಥತೆಗೆ ಕಾರಣವಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ಸ್ನೇಹಿತರು, ಬಂಧುಗಳು ಕೂಡ ನಿಧಾನವಾಗಿ ದೂರವಾಗುತ್ತಾರೆ. ಅದಕ್ಕಾಗಿಯೇ ಕೋಪವನ್ನು ನಿಯಂತ್ರಿಸಬೇಕು. ನಿಮ್ಮ ನಡವಳಿಕೆಯು ಇತ್ತೀಚೆಗೆ ಆಕ್ರಮಣಕಾರಿಯಾಗಿದೆಯೇ? ಹಾಗಿದ್ದರೆ ಕೋಪ ನಿಯಂತ್ರಿಸುವುದು ಹೇಗೆ? ಇದಕ್ಕೆ ಉತ್ತರವಾಗಿ, ಕೋಪ ಏಕೆ ಬರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆಯುತ್ತಾ ಕೋಪದ ಕಾರಣವನ್ನು ಕಂಡುಹಿಡಿಯಿರಿ ಮತ್ತು ನಿಯಂತ್ರಣ (Anger Management)ಕ್ಕೆ ಪರಿಹಾರ ಕಂಡುಕೊಳ್ಳಿ. ನಿಮಗೆ ಸಹಾಯಕವಾಗಲು ಕೆಲವೊಂದು ಟಿಪ್ಸ್​ ಇಲ್ಲಿದೆ:

ಊಹಿಸಬೇಡಿ: ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯ ತಪ್ಪು ಆಲೋಚನೆಯೇ ಅವರ ಕೋಪಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಅವರು ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಹಾಗಾದರೆ ಯಾವುದನ್ನೂ ಆಳವಾಗಿ ತಿಳಿಯದೆ, ಯಾವುದು ಸರಿ? ಯಾವುದು ತಪ್ಪು? ತಪ್ಪೇನು? ಎಂಬುದನ್ನು ತಿಳಿಯದ ಹೊರತಾಗಿ ಪ್ರತಿಕ್ರಿಯಿಸಲು ಹೋಗುವುದನ್ನು ತಪ್ಪಿಸಿ. ಕೆಲವೊಮ್ಮೆ ಈ ಊಹೆಗಳು ತಪ್ಪುಗ್ರಹಿಕೆಗೆ ಕಾರಣವಾಗುತ್ತವೆ.

ನಿರ್ಲಕ್ಷಿಸಲು ಪ್ರಾರಂಭಿಸಿ: ಕೋಪದ ಮೂಲದ ಬಗ್ಗೆ ಯೋಚಿಸಬೇಡಿ, ಕೋಪದ ಪರಿಸ್ಥಿತಿ ಬಂದಾಹ ಆ ಕೋಪವನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿ. ಕೆಲವು ಸೃಜನಶೀಲ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ಅದೊಂದು ಮಾನಸಿಕ ವ್ಯಾಯಾಮವೂ ಹೌದು. ನಿಮ್ಮನ್ನು ಶಾಂತಗೊಳಿಸಲು, ಕೋಪವನ್ನು ತೊಡೆದುಹಾಕಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡಬಹುದು.

ಎಲ್ಲಾ ಕೆಲಸಕ್ಕೆ ಬ್ರೇಕ್ ಹಾಕಿ: ಏನೇ ಕೆಲಸಗಳಿದ್ದರೂ ಮನಸ್ಸನ್ನು ಶಾಂತಗೊಳಿಸಲು ಕೆಲವು ದಿನಗಳವರೆಗೆ ರಜೆ ತೆಗೆದುಕೊಳ್ಳಿ. ಹವಾಮಾನ ಬದಲಾವಣೆಯು ನಡವಳಿಕೆಯ ಮೇಲೂ ಪರಿಣಾಮ ಬೀರುತ್ತದೆ. ನಿಮಗೆ ಕೋಪ, ಕಾರ್ಯಕ್ಷಮತೆ ಅಥವಾ ಇತರ ಸಮಸ್ಯೆಗಳಿದ್ದರೆ ದೇವಸ್ಥಾನ, ಪಾರ್ಕ್​​ನಂತಹ ಶಾಂತಿಯುತ ಸ್ಥಳಕ್ಕೆ ಹೋಗಿ ಒಂದಷ್ಟು ಸಮಯ ಕಳೆಯಿರಿ.

ಧ್ಯಾನ ಮಾಡಿ: ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪ ಬಂದಾಗ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಧ್ಯಾನ ಮಾಡುವುದು ಉತ್ತಮ. ಇದರ ಹೊರತಾಗಿ ವಿಶ್ರಾಂತಿ ಚಟುವಟಿಕೆಗಳನ್ನು ಮಾಡಿದರೂ ಓಕೆ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಧ್ಯಾನದಿಂದ ಮನಸ್ಸನ್ನು ಶಾಂತಗೊಳಿಸಬಹುದು.

ಕ್ಷಮಿಸುವ ಗುಣ: ನೀವು ಯಾರೊಂದಿಗಾದರೂ ಕೋಪಗೊಂಡಿದ್ದರೆ ಅವರನ್ನು ಮರೆಯಲು ಪ್ರಯತ್ನಿಸಿ. ಅವರ ಕ್ರಿಯೆಗೆ ಪ್ರತಿಕ್ರಿಯಿಸುವುದು ಮತ್ತು ಹೆಚ್ಚು ಕೋಪಗೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಹೀಗಾಗಿ ನಿಮ್ಮ ಕೋಪಕ್ಕೆ ಕಾರಣರಾದವರನ್ನು ಕ್ಷಮಿಸಿ ಬಿಡಿ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ