Death By Entertainment: ಭಯಾನಕ, ರೋಚಕ ಚಲನಚಿತ್ರಗಳು ಹೃದಯಾಘಾತಕ್ಕೆ ಕಾರಣವಾಗಬಹುದೇ, ವೈದ್ಯರ ಸಲಹೆ ಇಲ್ಲಿದೆ

ವೈದ್ಯಕೀಯ ವಿಜ್ಞಾನದ ಪ್ರಕಾರ ಚಲನಚಿತ್ರದ ವೀಕ್ಷಣೆಯ ಸಂದರ್ಭದಲ್ಲಿ ಜಂಪ್ ಸ್ಕೇರ್‌ನಿಂದ ಹೃದಯಾಘಾತವಾಗುವುದು ಅಥವಾ ಅತಿಯಾಗಿ ಉತ್ಸುಕರಾಗಿರುವುದು ನಂಬಲಾಗದಷ್ಟು ಅಸಾಮಾನ್ಯವಾಗಿದೆ. ಈ ಬಗ್ಗೆ ವೈದ್ಯರು ಕೂಡ ತಮ್ಮ ಅಧ್ಯಯನದಲ್ಲಿ ಈ ರೀತಿ ತಿಳಿಸಿದ್ದಾರೆ.

Death By Entertainment: ಭಯಾನಕ, ರೋಚಕ ಚಲನಚಿತ್ರಗಳು ಹೃದಯಾಘಾತಕ್ಕೆ ಕಾರಣವಾಗಬಹುದೇ,  ವೈದ್ಯರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2022 | 12:07 PM

ವೈದ್ಯಕೀಯ ವಿಜ್ಞಾನದ ಪ್ರಕಾರ ಚಲನಚಿತ್ರದ (movie) ವೀಕ್ಷಣೆಯ ಸಂದರ್ಭದಲ್ಲಿ ಜಂಪ್ ಸ್ಕೇರ್‌ನಿಂದ ಹೃದಯಾಘಾತವಾಗುವುದು (Heart Attack) ಅಥವಾ ಅತಿಯಾಗಿ ಉತ್ಸುಕರಾಗಿರುವುದು ನಂಬಲಾಗದಷ್ಟು ಅಸಾಮಾನ್ಯವಾಗಿದೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್ 2 ಚಲನಚಿತ್ರದ ಪ್ರದರ್ಶನವನ್ನು ಆನಂದಿಸಲು ಥಿಯೇಟರ್‌ಗೆ ಹೋಗಿದ್ದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು, ಚಲನಚಿತ್ರವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದರು. ಈ ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಚಲನಚಿತ್ರವು ಮನುಷ್ಯನಿಗೆ ಹೃದಯಾಘಾತವನ್ನು ಉಂಟು ಮಾಡಿದೆಯೇ? ಇದು ಯಾರಿಗಾದರೂ ಸಂಭವಿಸಬಹುದಾದ ನಿಜವಾದ ವಿಷಯವೇ? ಭಯಾನಕ ಅಥವಾ ಒತ್ತಡವನ್ನು ಉಂಟು ಮಾಡುವ ಚಲನಚಿತ್ರಗಳ ವೀಕ್ಷಣೆಯ ಸಮಯದಲ್ಲಿ ಜನರು ಅಸ್ವಸ್ಥತೆಯನ್ನು ಅನುಭವಿಸಬಹುದು, ನಡುಗಬಹುದು ಅಥವಾ ಮೂರ್ಛೆ ಹೋಗಬಹುದು. ಆದರೆ, ಜಂಪ್ ಸ್ಕೇರ್ ಅಥವಾ ಸಿನಿಮಾ ನೋಡುವಾಗ ಅತಿಯಾದ ಉತ್ಸಾಹದಿಂದ ಹೃದಯಾಘಾತ ಸಂಭವಿಸುವುದು ತೀರಾ ಅಪರೂಪ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ.

ಚಲನಚಿತ್ರಗಳನ್ನು ನೋಡುವಾಗ ಕೆಲವೊಮ್ಮೆ ಅನುಭವಿಸಬಹುದಾದ ತೀವ್ರವಾದ ಭಾವನೆಗಳು ದೇಹದ ಮೇಲೆ ತೀವ್ರವಾದ ಶಾರೀರಿಕ ಪ್ರಭಾವವನ್ನು ಬೀರಬಹುದು. ಇದು ಹೃದಯ ಸಂಬಧಿ ತೊಂದರೆಗಳಿಗೆ ಒಳಗಾಗುವ ವ್ಯಕ್ತಿಗಳಲ್ಲಿ ಹೃದಯಾಘಾತವನ್ನು ಉಂಟು ಮಾಡಬಹುದು. ಅಕ್ಷರಶಃ ಸಾವಿಗೆ ಹೆದರುವ ಈ ಸ್ಥಿತಿಯನ್ನು ಒತ್ತಡದ (ಸ್ಟೆಸ್) ಕಾರ್ಡಿಯೋಮಿಯೋಪತಿ ಎಂದು ಕರೆಯಲಾಗುತ್ತದೆ. ಇದನ್ನು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಹಾಗೂ ಟಕೋಟ್ಸುಬೊ ಕಾರ್ಡಿಯೋಮಿಯೋಪತಿ ಎಂದು ಕೂಡಾ ಕರೆಯಲಾಗುತ್ತದೆ.

ನೀವು ದೈಹಿಕ ಅಥವಾ ಭಾವನಾತ್ಮಕ ಒತ್ತಡದ ಮೂಲಕ ಹೋದಾಗ, ನಿಮ್ಮ ಮೆದುಳು ಹೋರಾಟ ಅಥವಾ ಹಾರಟದ ಪ್ರತಿಕ್ರಿಯೆಯಲ್ಲಿ ಒದೆಯುವ ಮುಖಾಂತರ ಪ್ರತಿಕ್ರಿಯಿಸುತ್ತದೆ. ಈ ಪ್ರತಿಕ್ರಿಯೆಯ ಭಾಗವಾಗಿ, ನಿಮ್ಮ ಗ್ರಂಥಿಗಳು ಹೆಚ್ಚುವರಿ ಪ್ರಮಾಣದ ಆಡ್ರಿನಾಲಿನ್ ಹಾರ್ಮೋನ್‌ಗಳನ್ನು ಪಂಪ್ ಮಾಡುತ್ತವೆ. ಆಡ್ರಿನಾಲಿನ್ ಮಟ್ಟ ಏರಿಕೆಯಾದಾಗ ಹೃದಯ ಬಡಿತ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುವುದು ಸರ್ವೆ ಸಾಮಾನ್ಯವಾಗಿದೆ. ಇದು ಹೃದಯದ ಪಂಪಿಗ್ ವಲಯದ ಮೇಲೂ ಪರಿಣಾಮ ಬೀರುತ್ತದೆ.

ಇದನ್ನು ಓದಿ: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

ಇದು ರಕ್ತನಾಳಗಳ ಸಂಕೋಚನ ಹಾಗೂ ಆರ್ಹೆತ್ಮಿಯಾಕ್ಕೆ ಕಾರಣವಾಗಬಹುದು. ಹೀಗಾಗಿ ಒತ್ತಡವು ಹೃದಯ ಸ್ನಾಯುವುನ ವೈಫಲ್ಯವನ್ನು ಉಂಟು ಮಾಡಿದಾಗ ಒತ್ತಡ ಪ್ರೇರಿತ ಕಾರ್ಡಿಯೋಮಿಯೋಪತಿ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತದೆ. ಮತ್ತು ಒತ್ತಡವು ಶಮನವಾದ ನಂತರ ಹೃದಯವು ಸಾಮಾನ್ಯ ಕಾರ್ಯಚಟುವಟಿಕೆಗೆ ಮರಳುತ್ತದೆ. ಮತ್ತು ಹಾರ್ಮೋನ್ ಮಟ್ಟಗಳು ಸಹಜ ಸ್ಥಿತಿಗೆ ಮರಳುತ್ತವೆ. ಇದಾಗಿಯೂ ಬಹಳ ಅಪರೂಪದ ಸಂದರ್ಭಗಳಲ್ಲಿ ಆಡ್ರಿನಾಲಿನ್ ಪ್ರೇರಿತ ಹೋರಾಟ ಅಥವಾ ಹಾರಟದ ಪ್ರತಿಕ್ರಿಯೆಯು ಹೃದಯಾಘಾತವನ್ನು ಉಂಟು ಮಾಡಬಹುದು. ನೀವು ಈಗಾಗಲೇ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಇದು ನಿಮ್ಮಲ್ಲಿ ಸಾಮಾನ್ಯವಾಗಿರುತ್ತದೆ. ಅಂತಹ ಪ್ರಕ್ರಿಯೆಯಿಂದ ನಿಮಗೆ ಹೃದಯಾಘಾತವಾಗುತ್ತದೆಯೇ ಅಥವಾ ಇಲ್ಲವೇ ಎಂದು ಊಹಿಸಲು ಕಷ್ಟಸಾಧ್ಯವಾಗುವುದರಿಂದ ಒತ್ತಡದ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ