Merry Christmas 2022 Greetings: ಸಂಭ್ರಮದ ಹಬ್ಬ ಕ್ರಿಸ್​​ಮಸ್​ಗೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ

ಕ್ರೈಸ್ತ ಧರ್ಮದ ಪ್ರಕಾರ ಡಿಸೆಂಬರ್ 25 ಯೇಸು ಕ್ರಿಸ್ತನ ಜನನ ದಿನವಾಗಿದೆ. ಕ್ರೈಸ್ತ ಸಮುದಾಯದ ಜನ ಕ್ರಿಸ್​ಮಸ್ ಆಚರಿಸುವ ಮೂಲಕ ಯೇಸುವಿನ ಜನ್ಮದಿನವನ್ನು ಸಂತೋಷದಿಂದ ಆಚರಿಸುತ್ತಾರೆ.

Merry Christmas 2022 Greetings: ಸಂಭ್ರಮದ ಹಬ್ಬ ಕ್ರಿಸ್​​ಮಸ್​ಗೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ
ಮೇರಿ ಕ್ರಿಸ್​ಮಸ್ 2022
Follow us
TV9 Web
| Updated By: Rakesh Nayak Manchi

Updated on:Dec 25, 2022 | 9:40 AM

ಪ್ರತಿ ವರ್ಷ ಡಿಸೆಂಬರ್ 25 ಬಂತೆಂದರೆ ಕ್ರೈಸ್ತರಿಗೆ ಕ್ರಿಸ್​ಮಸ್ ಹಬ್ಬದ (Merry Christmas 2022) ಸಡಗರ, ಸಂಭ್ರಮ ಆರಂಭವಾಗುತ್ತದೆ. ಇಂದು ವಿಶ್ವದಾದ್ಯಂತ ಸಂಭ್ರಮದಿಂದ ಕ್ರಿಸ್​ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕ್ರೈಸ್ತ ಧರ್ಮದ ಪ್ರಕಾರ ಈ ದಿನ ಯೇಸು ಕ್ರಿಸ್ತನ ಜನನ ದಿನವಾಗಿದೆ. ಕ್ರೈಸ್ತ ಸಮುದಾಯದ ಜನ ಕ್ರಿಸ್​ಮಸ್ ಆಚರಿಸುವ ಮೂಲಕ ಯೇಸುವಿನ ಜನ್ಮದಿನವನ್ನು ಸಂತೋಷದಿಂದ ಆಚರಿಸುತ್ತಾರೆ. ಹಬ್ಬ ಆಚರಿಸುವವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡುವ, ಹಬ್ಬಕ್ಕೆ ರುಚಿ ರುಚಿಯಾದ ತಿಂಡಿಗಳನ್ನು ಮಾಡುವ, ಅತಿಥಿಗಳನ್ನು ಆಹ್ವಾನಿಸುವ, ಕ್ರಿಸ್ ಮಸ್ ಮರ (Christmas Tree) ಅಲಂಕರಿಸಿ ಹಬ್ಬವನ್ನು ಆಚರಿಸುತ್ತಿದ್ದಾರೆ.

ಕ್ರಿಸ್​ಮಸ್ ಹಬ್ಬದ ಶುಭಾಶಯಗಳು

  • ನನ್ನ ದೊಡ್ಡ ಕ್ರಿಸ್‌ಮಸ್ ಉಡುಗೊರೆಯೆಂಸದರೆ ನನ್ನ ಪಕ್ಕದಲ್ಲಿ ನಿನ್ನನ್ನು ಹೊಂದಿರುವುದು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಶುಭಾಶಯಗಳು.
  • ನನ್ನ ಬದುಕಿಗೆ ಹೊಸ ಅರ್ಥ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಕಾರಣದಿಂದಾಗಿ, ನನ್ನ ಎಲ್ಲಾ ಕ್ರಿಸ್ಮಸ್ ರಜಾದಿನಗಳು ಆನಂದದಾಯಕವಾಗಿವೆ. ನಿಮಗೆ ಕ್ರಿಸ್ಮಸ್ ಶುಭಾಶಯಗಳು
  • ನಿಮ್ಮ ಪ್ರೀತಿಯೇ ನನ್ನನ್ನು ಜೀವಂತವಾಗಿಡುವ ಮತ್ತು ನನಗೆ ಸಂಪೂರ್ಣ ಭಾವನೆ ಮೂಡಿಸುವ ಎಲ್ಲವೂ ಆಗಿದೆ. ಮೆರಿ ಕ್ರಿಸ್ಮಸ್
  • ನಿಮ್ಮ ಜೀವನ ಸಂತೋಷದಿಂದ ಕೂಡಿರಲೆಂದು ಶುಭ ಹಾರೈಸುತ್ತೇನೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಷಯಗಳು!
  • ಕ್ರಿಸ್​ಮಸ್ ಹಬ್ಬದ ಶುಭಾಶಯಗಳು; ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
  • ಈ ಅದ್ಭುತ ಸಂದರ್ಭದಲ್ಲಿ ನಿಮಗೆ ಸಂತೋಷ, ಪ್ರೀತಿ ಮತ್ತು ಶಾಂತಿ ಸಿಗಲೆಂದು ಹಾರೈಸುತ್ತೇನೆ. ಮೆರಿ ಕ್ರಿಸ್ಮಸ್! (ಮೂಲ: mahithi.com)
  • ಈ ರಜಾದಿನಗಳಲ್ಲಿ ನಿಮ್ಮ ಜೀವನದುದ್ದಕ್ಕೂ ಸುಂದರವಾದ, ಅರ್ಥಪೂರ್ಣವಾದ ಮತ್ತು ನಿಮಗೆ ಸಂತೋಷವನ್ನು ತರುವಂತಹ ಎಲ್ಲವೂ ನಿಮ್ಮದಾಗಲು; ಮೇರಿ ಕ್ರಿಸ್​ಮಸ್
  • ನಿಮ್ಮ ರಜಾದಿನಗಳು ಸಂತೋಷ ಮತ್ತು ನಗೆಯಿಂದ ತುಂಬಿರಲಿ; ಕ್ರಿಸ್​ಮಸ್ ಹಬ್ಬದ ಶುಭಾಶಯಗಳು

ಜೀವನಶೈಲಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 am, Sun, 25 December 22