AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Glass Frog: ಜೀವಂತ ಗ್ಲಾಸ್ ಕಪ್ಪೆಗಳು, ಇದು ಹೇಗೆ ಪಾರದರ್ಶಕವಾಗಿದೆ ಎಂದು ಬಹಿರಂಗಪಡಿಸಿದ ವಿಜ್ಞಾನಿಗಳು

ಉಭಯಚರ ಗಾಜಿನ ಕಪ್ಪೆಗಳು ಏಕೆ ಪಾರದರ್ಶಕವಾಗುತ್ತದೆ ಎಂಬುವುದನ್ನು ವಿಜ್ಞಾನಿಗಳು ಈಗ ಕಂಡು ಹಿಡಿಯಲು ಸಮರ್ಥರಾಗಿದ್ದಾರೆ. ಈ ಅಧ್ಯಯನವನ್ನು ಸೈನ್ಸ್ ಜರ್ನಲ್‌ನಲ್ಲಿ ‘ಗ್ಲಾಸ್ ಫ್ರಾಗ್ಸ್ ಕನ್ಸೀಲ್ ಬ್ಲಡ್ ಇನ್ ದೆಯರ್ ಲಿವರ್ ಟು ಮೈಂಟೆನ್ ಟ್ರನ್ಪರೆನ್ಸಿ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ.

Glass Frog: ಜೀವಂತ ಗ್ಲಾಸ್ ಕಪ್ಪೆಗಳು, ಇದು ಹೇಗೆ ಪಾರದರ್ಶಕವಾಗಿದೆ ಎಂದು ಬಹಿರಂಗಪಡಿಸಿದ ವಿಜ್ಞಾನಿಗಳು
Glass Frog Image Credit source: NDTV
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Dec 24, 2022 | 7:34 PM

Share

ಗ್ಲಾಸ್ ಫ್ರಾಗ್ (Glass frogs) ಅಥವಾ ಗಾಜಿನ ಕಪ್ಪೆಗಳು ಮಧ್ಯ ಮತ್ತು ದಕ್ಷಿಣ ಅಮೇರಿಕಾದ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅವುಗಳ ಅರೆಪಾರದರ್ಶಕ ಚರ್ಮ ಮತ್ತು ಸ್ನಾಯುಗಳಿಂದಾಗಿ ತಮ್ಮ ಕಾಡಿನ ಸುತ್ತಮುತ್ತಲಿನ ಪ್ರದೇಶದೊಂದಿಗೆ ಬೆರೆಯುತ್ತವೆ. ನೀವು ಈ ಕಪ್ಪೆಗಳನ್ನು ತಿರುಗಿಸಿದಾಗ ಅವುಗಳ ಹೃದಯ, ಲಿವರ್ ಹಗೂ ಕರುಳಿನ ಸುರುಳಿಗಳು ನೋಡ ಸಿಗುತ್ತವೆ. ಈ ಉಭಯಚರ ಗಾಜಿನ ಕಪ್ಪೆಗಳು ಏಕೆ ಪಾರದರ್ಶಕವಾಗುತ್ತದೆ ಎಂಬುವುದನ್ನು ವಿಜ್ಞಾನಿಗಳು ಈಗ ಕಂಡು ಹಿಡಿಯಲು ಸಮರ್ಥರಾಗಿದ್ದಾರೆ. ಈ ಅಧ್ಯಯನವನ್ನು ಸೈನ್ಸ್ ಜರ್ನಲ್‌ನಲ್ಲಿ ‘ಗ್ಲಾಸ್ ಫ್ರಾಗ್ಸ್ ಕನ್ಸೀಲ್ ಬ್ಲಡ್ ಇನ್ ದೆಯರ್ ಲಿವರ್ ಟು ಮೈಂಟೆನ್ ಟ್ರನ್ಪರೆನ್ಸಿ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದ ಪ್ರಕಾರ ಈ ಕಪ್ಪೆಗಳು ರಕ್ತ ಹೆಪ್ಪುಗಟ್ಟುವಿಕೆಯಿಂದ ಪ್ರಭಾವಿತವಾಗದೆ ತಮ್ಮ ದೇಹದಲ್ಲಿ ರಕ್ತವನ್ನು ಸಂಗ್ರಹಿಸಬಹುದು.

ಸರಿಸುಮಾರು ಮ್ಯಾರ್ಷ್ಮ್ಯಾಲೋ ಗ್ರಾತದಾಗಿರುವ ಈ ಗ್ಲಾಸ್ ಫ್ರಾಗ್, ಹಚ್ಚ ಹಸಿರಿನ ಎಲೆಗಳ ಮೇಲೆ ತನ್ನ ದಿನಗಳನ್ನು ಕಳೆಯುತ್ತವೆ. ಮತ್ತು ಪರಭಕ್ಷಕಗಳಿಂದ ತನ್ನನ್ನು ರಕ್ಷಿಸಲು ಅದರ ಪಾರದರ್ಶಕತೆಯನ್ನು ಸುಮಾರು 61 ಶೇಕಡದಷ್ಟು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಈ ಉಭಯಚರಗಳು ಸಂತಾನೋತ್ಪತ್ತಿ ಹಾಗೂ ಆಹಾರ ಸೇವಿಸುವ ಸಮಯದಲ್ಲಿ ಅವು ಅಪಾರದರ್ಶಕವಾಗುತ್ತದೆ. ಆದರೆ ಹಗಲಿನಲ್ಲಿ ಅವುಗಳು ಎಲೆಗಳ ಮೇಲೆ ಕಿರು ನಿದ್ದೆಯನ್ನು ಮಾಡುವಾಗ ಬೆನ್ನಿನಲ್ಲಿ ತಿಳಿ ಹಸಿರು ಬಣ್ಣವನ್ನು ಉಳಿಸಿ ಪಾರದರ್ಶಕವಾಗುತ್ತದೆ. ಈ ಕಪ್ಪೆಗಳು ಇಬ್ಬನಿಯ ಹನಿಗಳಂತೆ ಕಾಣಲು ಸಹಾಯ ಮಾಡುತ್ತದೆ. ಮತ್ತು ಇದು ಜೇಡಗಳು ಮತ್ತು ಹಾವುಗಳಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು’ ಜರ್ನಲ್ ಉಲ್ಲೇಖಿಸುತ್ತದೆ.

ಇದನ್ನು ಓದಿ;ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

ಈ ಹೆಚ್ಚಿನ ಪಾರದರ್ಶಕತೆಯು ರಕ್ತ ನಾಳಗಳ ಮೂಲಕ ಹಾದು ಹೋಗುವ ಕೆಂಪು ರಕ್ತ ಕಣಗಳ ಸಂಖ್ಯೆಯಲ್ಲಿನ ಇಳಿಕೆಗೆ ಸಂಬಂಧಿಸಿದೆ. ಡ್ಯೂಕ್ ವಿಶ್ವವಿದ್ಯಾನಿಲಯದ ಜೀವಶಾಸ್ತಜ್ಞ ಮತ್ತು ಈ ಹೊಸ ಅಧ್ಯಯನದ ಲೇಖಕ ಕಾರ್ಲೋಸ್ ತಬೋಡಾ ‘ಕಪ್ಪೆಗಳು ಮಲಗಿದ್ದಾಗ ಅವುಗಳಲ್ಲಿ ರಕ್ತವಿಲ್ಲದ್ದನ್ನೂ ನೋಡಿದೆವು ಹಾಗೂ ಅವುಗಳು ಎಚ್ಚರವಾದಾಗ, ಅವುಗಳ ರಕ್ತವು ಮತ್ತೆ ಪಂಪ್ ಮಾಡಲು ಪ್ರಾರಂಭಿಸಿತು ಮತ್ತು ಅವುಗಳ ಪಾರದರ್ಶಕತೆಯನ್ನು ಕಡಿಮೆ ಮಾಡಿತು’ ಎಂದು ಉಲ್ಲೇಖಿಸಿದ್ದಾರೆ.

ಸಂಶೋಧಕರು ಸಂಶೋಧನೆಗೆ ಫೋಟೋಕೌಸ್ಟಿಕ್ ಇಮೇಜಿಂಗ್‌ನ್ನು ಬಳಸಿದರು. ಇದು ಕೆಂಪು ರಕ್ತಕಣಗಳು ಬೆಳಕನ್ನು ಹೀರಿಕೊಳ್ಳುವಾಗ ಉತ್ಪತ್ತಿಯಾಗುವ ಅಲ್ಟಾಸಾನಿಕ್ ತರಂಗಗಳನ್ನು ನಕ್ಷೆ ಮಾಡುತ್ತದೆ. ಮತ್ತು ಸಂಶೋಧಕರು ಹಗಲಿನಲ್ಲಿ ಕಪ್ಪೆಗಳ ಪಿತ್ತಜನಕಾಂಗದಲ್ಲಿನ ರಕ್ತನಾಳಗಳು ಕೆಂಪು ರಕ್ತಕಣಗಳಿಂದ ಸಿಡಿಯುತ್ತವೆ. ಅದರ ದೇಹದ ಭಾಗಗಳು ಶೇಕಡಾ 40% ನಷ್ಟು ಊದಿಕೊಳ್ಳುತ್ತವೆ ಎಂದು ಕಂಡು ಹಿಡಿದರು. ಗ್ಲಾಸ್ ಫ್ರಾಗನ್ನು ಇತರ ಕಪ್ಪೆಗಳಿಗೆ ಹೋಲಿಸಿದಾಗ ಇತರ ತಮ್ಮ ಲಿವರ್‌ನಲ್ಲಿ ಕೆಂಪು ರಕ್ತಕಣಗಳ ಸುಮಾರು ಶೇಕಡಾ 12% ನಷ್ಟು ಮಾತ್ರ ಸಂಗ್ರಹಿಸಬಲ್ಲವು. ಹಾಗೂ ಗ್ಲಾಸ್ ಫ್ರಾಗ್ಸ್ ಶೇಕಡಾ 89% ಕೆಂಪು ರಕ್ತಕಣಗಳನ್ನು ಸಂಗ್ರಹಿಸುತ್ತದೆ ಎಂದು ತಿಳಿದು ಬಂದಿದೆ.

ಅಧ್ಯಯನದ ಸಹ ಲೇಖಕ ಅಮೇರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಜೀವಶಾಸ್ತಜ್ಞ, ಜೆಸ್ಸೆ ಡೆಲಿಯಾ ಪ್ರಕಾರ ಈ ಕಪ್ಪೆಗಳು ವಿಪರೀತ ರೂಪಂತರಗಳಿಂದ ಹೇಗೆ ಬದುಕಿವೆ ಎಂಬುವುದು ಅಸ್ಪಷ್ಟವಾಗಿದೆ. ಮೇಲಾಗಿ ಅವುಗಳು ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಆಮ್ಲಜನಕವನ್ನು ಸಾಗಿಸುವುದಿಲ್ಲ ಎಂದು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Sat, 24 December 22